ಇರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ; ಟೆಹ್ರಾನ್ ತುಂಬ ದಟ್ಟ ಹೊಗೆ – Kannada News | Iran’s Tehran Mehrabad International airport bombed by US Israel strikes
ಟೆಹ್ರಾನ್, ಮಾರ್ಚ್ 3: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ಪಡೆಗಳ ದಾಳಿ ಮುಂದುವರೆದಿದೆ. ಇಂದು ಟೆಹ್ರಾನ್‌ನಲ್ಲಿ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಇರಾನ್‌ನ (Iran) ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ ನಡೆದಿದ್ದರಿಂದ ಸುತ್ತಲೂ ಹೊಗೆಯಿಂದ ಆವೃತವಾಗಿದೆ. ಅಮೆರಿಕ ಮತ್ತು ಇಸ್ರೇಲ್ನಿಂದ ಟೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ವೈಮಾನಿಕ ದಾಳಿ ನಡೆದಿದೆ ಎಂದು ಇರಾನಿನ ಮಾಧ್ಯಮಗಳು ತಿಳಿಸಿವೆ. ಈ ವಿಮಾನ ನಿಲ್ದಾಣ ಛಿದ್ರವಾಗಿದ್ದು, ಕಪ್ಪು ಹೊಗೆಯೇಳುತ್ತಿರುವ ವಿಡಿಯೋ ಸಾಮಾಜಿಕ…