ಭಾರತ ಶೇ 7.8, ಅಮೆರಿಕ ಶೇ. 0.5; ಆರ್ಥಿಕ ಬೆಳವಣಿಗೆ ವೇಗದಲ್ಲಿ ಅಜಗಜಾಂತರ
ವಾಷಿಂಗ್ಟನ್, ಏಪ್ರಿಲ್ 9: ಟ್ಯಾರಿಫ್ಗಳ ಬರೆ ಎಳೆದು ಜಗತ್ತನ್ನು ಅಲುಗಾಡಿಸಿದ್ದ ಅಮೆರಿಕದ ಆರ್ಥಿಕತೆ (US economy) ಮಂದಗೊಂಡಿದೆ. 2025ರ ಕ್ಯಾಲಂಡರ್ ವರ್ಷದ ಕೊನೆಯ ಕ್ವಾರ್ಟರ್ನಲ್ಲಿ (ಅಕ್ಟೋಬರ್-ಡಿಸೆಂಬರ್) ಅಮೆರಿಕದ ಜಿಡಿಪಿ ಶೇ. 0.50ರಷ್ಟು ಮಾತ್ರ ಹೆಚ್ಚಿದೆ. ಅಮೆರಿಕದ ವಾಣಿಜ್ಯ ಇಲಾಖೆ ನಿರೀಕ್ಷಿಸಿದುದಕ್ಕಿಂತಲೂ ಕಡಿಮೆ ವೇಗದಲ್ಲಿ ಆರ್ಥಿಕ ಬೆಳವಣಿಗೆ ದಾಖಲಾಗಿದೆ. ಇಲಾಖೆಯು ಈ ಅವಧಿಯಲ್ಲಿ ಶೇ. 0.7ರಷ್ಟು ಜಿಡಿಪಿ ದರದ ನಿರೀಕ್ಷೆ ಮಾಡಿತ್ತು. ಭಾರತದ ಆರ್ಥಿಕತೆಯು ಇದೇ ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ಶೇ. 7.8ರಷ್ಟು ಬೆಳವಣಿಗೆ ಹೊಂದಿದ್ದು ಗಮನಾರ್ಹ. ಹಣಕಾಸು ವರ್ಷದ…