ಎಲ್​ಪಿಜಿ ಗ್ಯಾಸ್ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ! ಪೆಟ್ರೋಲ್ ಡೀಸೆಲ್​ಗೂ ಎದುರಾಗಲಿದೆ ಅಭಾವ? ಇಲ್ಲಿದೆ ಬಲವಾದ ಕಾರಣ

ನವದೆಹಲಿ/ಬೆಂಗಳೂರು, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧದ ಪರಿಣಾಮ ಭಾರತದಲ್ಲಿ (India) ಎಲ್‌ಪಿಜಿ (LPG) ಗ್ಯಾಸ್ ಕೊರತೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಎದುರಾಗಿದೆ. ಇದುವರೆಗೆ ಹೊರ್ಮುಝ್ ಜಲಸಂಧಿ ಸಮಸ್ಯೆಯಿಂದ ಅಡಚಣೆ ಉಂಟಾಗಿದೆ ಎನ್ನಲಾಗುತ್ತಿತ್ತು. ಆ ಮಾರ್ಗದ ಮೂಲಕ ಗ್ಯಾಸ್ ತುಂಬಿದ ಹಡಗುಗಳು ಬರುವಂತೆ ಮಾಡಲು ಕೇಂದ್ರ ಸರ್ಕಾರ ಹೇಗೋ ವ್ಯವಸ್ಥೆ ಮಾಡಿದೆ. ಆದರೆ ಇದೀಗ ಗಲ್ಫ್ ರಾಷ್ಟ್ರಗಳ ತೈಲ ಹಾಗೂ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿಗಳಿಂದ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ…

Read More

Somnath Swabhiman Parv: ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ – Kannada News | PM Narendra Modi receives a rousing welcome after he arrives at Somnath Temple

ಸೋಮನಾಥ, ಜನವರಿ 10: ಗುಜರಾತಿನ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ (Somnath Temple) ನಡೆಯುತ್ತಿರುವ ಪ್ರಮುಖ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವಾದ ಸೋಮನಾಥ ಸ್ವಾಭಿಮಾನ್ ಪರ್ವದಲ್ಲಿ (Somnath Swabhiman Parv) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಗುಜರಾತ್‌ನ ಸೋಮನಾಥಕ್ಕೆ ಆಗಮಿಸಿದರು. ಈ ವೇಳೆ ದಾರಿಯುದ್ದಕ್ಕೂ ಸಾರ್ವಜನಿಕರು ಕೇಸರಿ ಬಾವುಟಗಳನ್ನು ಹಿಡಿದು, “ಮೋದಿ, ಮೋದಿ” ಎಂದು ಘೋಷಣೆ ಕೂಗುತ್ತಾ ಅದ್ದೂರಿಯಾಗಿ ಸ್ವಾಗತ ಕೋರಿದರು. ಜನವರಿ 8ರಿಂದ 11ರವರೆಗೆ ಆಯೋಜಿಸಲಾಗುತ್ತಿರುವ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲು…

Read More

ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ – Kannada News | Sarvam AI of Bengaluru becomes unicorn company after series B funding round led by HCLTech

ಬೆಂಗಳೂರು, ಜೂನ್ 16: ಸಿಲಿಕಾನ್ ಸಿಟಿ ಮೂಲದ ಕೃತಕ ಬುದ್ಧಿಮತ್ತೆ (AI) ಸ್ಟಾರ್ಟ್‌ಅಪ್ ಕಂಪನಿಯಾದ ‘ಸರ್ವಮ್ ಐಐ’ (Sarvam AI) ಈಗ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ. ಐಟಿ ಕ್ಷೇತ್ರದ ಹೆಚ್‌ಸಿಎಲ್‌ಟೆಕ್ (HCLTech) ನೇತೃತ್ವದ ಸೀರೀಸ್-ಬಿ (Series B) ಫಂಡಿಂಗ್ ರೌಂಡ್‌ನಲ್ಲಿ ಬರೋಬ್ಬರಿ 234 ಮಿಲಿಯನ್ ಡಾಲರ್ (ಸುಮಾರು ₹1,950 ಕೋಟಿ) ಹೂಡಿಕೆಯನ್ನು ಗಳಿಸಿದೆ. ಈ ಭರ್ಜರಿ ಹೂಡಿಕೆಯೊಂದಿಗೆ ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯವು 1.5 ಬಿಲಿಯನ್ ಡಾಲರ್ (ಸುಮಾರು ₹12,500 ಕೋಟಿ) ದಾಟಿದ್ದು, ಭಾರತದ ಹೊಚ್ಚಹೊಸ…

Read More

ಹಿಂದೆ ನಿಂತಿದ್ದ ನಟನ ಕಂಡು ಶ್ರೀಲೀಲಾ ಗರಂ? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ

ನಟ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ (Ustaad Bhagat Singh) ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಹರೀಶ್ ಶಂಕರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 19ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಹಳ ವೈಭವದಿಂದ ನಡೆಯಿತು. ಅದರಲ್ಲಿ ನಟಿ ಶ್ರೀಲೀಲಾ ಕೂಡ ಭಾಗಿ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶ್ರೀಲೀಲಾ (Sreeleela) ಅವರ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದರ ಅಸಲಿ ವಿಷಯ ಏನು ಎಂಬುದು…

Read More

ಷೇರುಬಜಾರು ಅಲುಗಾಟ, 4-5 ದಿನದಲ್ಲಿ ಹೂಡಿಕೆದಾರರಿಗೆ 11 ಲಕ್ಷ ಕೋಟಿ ರೂ ನಷ್ಟ; ಬೇರೆ ದೇಶಗಳಲ್ಲಿ ಹೆಚ್ಚಿದರೂ ಭಾರತದಲ್ಲಿ ಕುಸಿತ ಯಾಕೆ? – Kannada News | Indian Stock Market Crash: Sensex Nifty Plunge, ₹11 Lakh Cr Investor Loss. Why it’s Falling?

ಭಾರತೀಯ ಷೇರು ಮಾರುಕಟ್ಟೆImage Credit source: Shutterstock ನವದೆಹಲಿ, ಮೇ 12: ಕಳೆದ ನಾಲ್ಕು ವಹಿವಾಟು ದಿನಗಳಿಂದ ಭಾರತೀಯ ಷೇರು ಮಾರುಕಟ್ಟೆಯು (Stock Market) ತೀವ್ರ ಕುಸಿತವನ್ನು ಕಾಣುತ್ತಿದ್ದು, ಹೂಡಿಕೆದಾರರು ಸುಮಾರು 11 ಲಕ್ಷ ಕೋಟಿ ರೂಪಾಯಿಗಳಷ್ಟು ಸಂಪತ್ತನ್ನು ಕಳೆದುಕೊಂಡಿದ್ದಾರೆ. ಅಮೆರಿಕ ಮತ್ತು ಏಷ್ಯಾದ ಇತರ ಮಾರುಕಟ್ಟೆಗಳು ಏರಿಕೆ ಕಾಣುತ್ತಿದ್ದರೂ, ಭಾರತದ ಮಾರುಕಟ್ಟೆ ಮಾತ್ರ ಹಿನ್ನಡೆ ಕಾಣುತ್ತಿದೆ. ಐದು ಸೆಷನ್ಸ್ ಅಥವಾ ಟ್ರೇಡಿಂಗ್ ದಿನಗಳಲ್ಲಿ ಸೆನ್ಸೆಕ್ಸ್ ಮತ್ತಿತರ ಪ್ರಮುಖ ಸೂಚ್ಯಂಕಗಳು ಬರೋಬ್ಬರಿ 2,500ಕ್ಕೂ ಅಧಿಕ ಅಂಕಗಳ ನಷ್ಟ…

Read More

ಒಂದೇ ಒಂದು ಪಂದ್ಯ ಗೆದ್ದಿರುವ RCB ಮತ್ತು RR ನಡುವೆ ಭಾರೀ ಅಂತರ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ ಮೂರು ದಿನಗಳು ಕಳೆದಿವೆ. ಈ ಮೂರು ದಿನಗಳಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿದಿವೆ. ಈ ಆರು ತಂಡಗಳಲ್ಲಿ ಅತ್ಯಧಿಕ ನೆಟ್​ ರನ್ ರೇಟ್ ಪಡೆದಿರುವುದು ರಾಜಸ್ಥಾನ್ ರಾಯಲ್ಸ್. ಅದು ಸಹ ಸಿಎಸ್​ಕೆ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಎಂಬುದು ವಿಶೇಷ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಮುಂಬೈ ಇಂಡಿಯನ್ಸ್ ತಂಡವು ಕೆಕೆಆರ್ ತಂಡವನ್ನು…

Read More

12 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್ – Kannada News | Karnataka Bulldozers won the CCL 2026 cup under Sudeep captaincy

ವಿವಿಧ ಚಿತ್ರರಂಗದವರು ಒಟ್ಟಿಗೆ ಸೇರಿ ಕ್ರಿಕೆಟ್ ಆಡುವ ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್) 2026 ಫೈನಲ್ ಇಂದು (ಫೆಬ್ರವರಿ 1) ನಡೆದಿದ್ದು, ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇಂದು ಕೊಯಮತ್ತೂರಿನಲ್ಲಿ ನಡೆದ ಫೈನಲ್​​ನಲ್ಲಿ ಬಂಗಾಳ ತಂಡವನ್ನು ಎದುರಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಆಲ್​​ರೌಂಡ್ ಪ್ರದರ್ಶನ ತೋರಿ ಫೈನಲ್ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. ಅದೂ ಬರೋಬ್ಬರಿ 12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಎನಿಸಿಕೊಂಡಿದೆ. ಕರ್ನಾಟಕ ಬುಲ್ಡೋಜರ್ಸ್ ಈಗಾಗಲೆ…

Read More

Video: ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ – Kannada News | Wedding Turns Chaotic as Fire Engulfs Thane Banquet Hall

ಮುಂಬೈ, ಡಿಸೆಂಬರ್ 19: ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಥಾಣೆಯ ಘೋಡ್‌ಬಂದರ್ ಪ್ರದೇಶದ ಮದುವೆ ಮಂಟಪದಲ್ಲಿ ಗುರುವಾರ ನಡೆದ ಸಮಾರಂಭದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಮಾಹಿತಿ ತಿಳಿದು, ಹಲವು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ದೌಡಾಯಿಸಿದ್ದವು.  ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸಲು ತೀವ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಬೆಂಕಿಯ ತೀವ್ರತೆ ಹೆಚ್ಚಾಗುವ ಮೊದಲೇ ವಧು, ವರ ಮತ್ತು ಅತಿಥಿಗಳು ಸೇರಿದಂತೆ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಪ್ರಾಥಮಿಕ…

Read More

ತೀವ್ರಗೊಂಡ ಕುಡಿಯುವ ನೀರಿನ ಅಭಾವ: ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ಸಿಎಂ ಸೂಚನೆ, ಡಿಸಿಗಳಿಗೂ ಖಡಕ್ ಎಚ್ಚರಿಕೆ – Kannada News | Karnataka Water Crisis: CM Siddaramaiah Warns DCs, Allocates Rs 419 Crore for Drinking Water Supply

ಬೆಂಗಳೂರು, ಏಪ್ರಿಲ್ 25: ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ಜೊತೆಗೆ ಕುಡಿಯುವ ನೀರಿನ (Drinking Water) ಸಮಸ್ಯೆ ಉಲ್ಬಣಿಸುತ್ತಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಜನರಿಗೆ ಕುಡಿಯುವ ನೀರಿನ ತೊಂದರೆಯಾದರೆ ಆಯಾ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಸಿಎಂ ಮತ್ತೊಮ್ಮೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕುಡಿಯುವ ನೀರಿನ ಪೂರೈಕೆಗಾಗಿ ಈಗಾಗಲೇ ಸರ್ಕಾರ 419.50 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಜಿಲ್ಲಾಧಿಕಾರಿಗಳ ವರದಿಯ ಆಧಾರದ ಮೇಲೆ ಹೆಚ್ಚುವರಿ ಅನುದಾನ ಒದಗಿಸಲು ಹಣಕಾಸು…

Read More

KCET Results 2026: ಶೀಘ್ರದಲ್ಲೇ ಕೆಸಿಇಟಿ ರಿಸಲ್ಟ್ ಪ್ರಕಟ; ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಬೆಂಗಳೂರು: ಕರ್ನಾಟಕದ ಇಂಜಿನಿಯರಿಂಗ್, ಫಾರ್ಮಸಿ ಮತ್ತು ಕೃಷಿ ವಿಜ್ಞಾನ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಮುಖ ಅಪ್ಡೇಟ್ ಇಲ್ಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಇಂದು ಅಥವಾ ನಾಳೆ KCET 2026 ರ ಪರೀಕ್ಷಾ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಫಲಿತಾಂಶಗಳು ಅಂತಿಮ ಹಂತಕ್ಕೆ ಬಂದಿದ್ದು, ವಿದ್ಯಾರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್‌ಗಳು:…

Read More