Headlines

ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್​ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ – Kannada News | Inspiring story of DRDO scientists indigenously developing GaN chip tech after France denial

ದೃಢ ಸಂಕಲ್ಪ ಮತ್ತು ಅವಶ್ಯಕತೆ ಎರಡೂ ಸೇರಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಭಾರತ ಗ್ಯಾನ್ ಸೆಮಿಕಂಡಕ್ಟರ್ ಟೆಕ್ನಾಲಜಿ  (GaN semiconductor technology) ಸಿದ್ಧಿಸಿಕೊಂಡ ಕಥೆ ಸಾಕ್ಷಿಯಾಗಿದೆ. ಗ್ಯಾನ್ ಚಿಪ್​ಗಳನ್ನು ತಯಾರಿಸಬಲ್ಲ ತಂತ್ರಜ್ಞಾನ ಹೊಂದಿದ ಐದಾರು ದೇಶಗಳ ಸಾಲಿಗೆ ಭಾರತ ಸೇರಿಕೊಂಡಿದೆ. 2023ರಲ್ಲಿ ಡಾ. ಮೀನಾ ಮಿಶ್ರಾ (Dr. Meena Mishra) ನೇತೃತ್ವದಲ್ಲಿ ಡಿಆರ್​ಡಿಒ ವಿಜ್ಞಾನಿಗಳ ತಂಡವೊಂದು ಈ ಐತಿಹಾಸಿಕ ಸಾಧನೆ ಮಾಡಿ ವಿಶ್ವದ ಗಮನ ಸೆಳೆದಿತ್ತು. ಭಾರತದ ಸ್ವಾವಲಂಬನೆಯ ಹಾದಿಯಲ್ಲಿ ಅದು ನಿಜಕ್ಕೂ ಮಹತ್ವಪೂರ್ಣವೆನಿಸುವ ಒಂದು…

Read More

15 ಸಿಕ್ಸರ್, 175 ರನ್; ಹರಾರೆಯಲ್ಲಿ ವೈಭವ್ ಆರ್ಭಟಕ್ಕೆ ಇಂಗ್ಲೆಂಡ್ ಹೈರಾಣ

ಇಂಗ್ಲೆಂಡ್ ವಿರುದ್ಧ ಹರಾರೆಯಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಯುವ ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ತೂಫಾನ್ ಶತಕ ಸಿಡಿಸಿದರು. ಈ ಪಂದ್ಯದಲ್ಲಿ ವೈಭವ್ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ, ಅವರು 15 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳನ್ನು ಬಾರಿಸಿದರು, 218.75 ರ ಸ್ಟೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ವೈಭವ್ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನು ಬರೆದರು. ಇದು ಮಾತ್ರವಲ್ಲ…

Read More

‘ಪೆದ್ದಿ’ ರಿಲೀಸ್, ಮಗನ ಸಿನಿಮಾ ಬಗ್ಗೆ ಚಿರಂಜೀವಿಗೆ ಅದೆಷ್ಟು ಕಾಳಜಿ – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಸ್ವತಃ ರಾಮ್ ಚರಣ್ ಅವರಿಗೆ ಭಾರಿ ನಿರೀಕ್ಷೆಗಳಿವೆ. ‘ಆರ್​​ಆರ್​​ಆರ್’ ಬಳಿಕ ರಾಮ್ ಚರಣ್ ನಟಿಸಿರುವ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಸೋತಿವೆ. ಹಾಗಾಗಿ ‘ಪೆದ್ದಿ’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಮ್ ಚರಣ್​​ಗೆ ಇದೆ. ಇದೇ ಕಾರಣಕ್ಕೆ ರಾಮ್ ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ‘ಪೆದ್ದಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ, ಕುತೂಹಲಗಳನ್ನು ಇರಿಸಿಕೊಂಡಿದ್ದಾರೆ. ಸಿನಿಮಾದ…

Read More

ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್ – Kannada News | Ravichandran entered Bigg Boss house as guest

ಬಿಗ್​​ಬಾಸ್ (Bigg Boss) ಮನೆಗೆ ಅತಿಥಿಗಳು ಆಗಾಗ್ಗೆ ಬರುತ್ತಲೇ ಇರುತ್ತಾರೆ. ಕೆಲ ವಾರಗಳ ಹಿಂದಷ್ಟೆ ಈ ಹಿಂದಿನ ಸೀಸನ್​​ನ ಕೆಲ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದರು. ಈ ಹಿಂದಿನ ಸೀಸನ್​​ಗಳಲ್ಲಿ ಸಹ ಕೆಲ ಬೇರೆ ಅತಿಥಿಗಳು ಸಹ ಬಂದಿದ್ದರು. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಬಿಗ್​​ಬಾಸ್ ಮನೆ ಒಳಗೆ ಇದು ಅವರ ಮೊದಲ ಎಂಟ್ರಿ. ತಮ್ಮ ಹೊಸ ಸಿನಿಮಾದ ಪ್ರಚಾರಕ್ಕೆಂದು ಬಿಗ್​​ಬಾಸ್ ಮನೆಗೆ ಬಂದಿರುವ ರವಿಚಂದ್ರನ್ ಅವರು ತಮ್ಮ ಮೊದಲ ಪ್ರೇಮಕಥೆಯನ್ನು ಬಿಗ್​​ಬಾಸ್…

Read More

ಗಿಲ್ಲಿ ಗೆದ್ರೆ ಉಚಿತ ಪ್ರಯಾಣ: ಬೆಂಬಲ ಘೋಷಿಸಿದ ಆಟೋ ಡ್ರೈವರ್​ಗಳು – Kannada News | Auto drivers says if Gilli wins Bigg Boss they will give free auto rides

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಫಿನಾಲೆ ವಾರ ಶುರುವಾಗಿದೆ. ಸ್ಪರ್ಧಿಗಳಿಗಾಗಿ ವೋಟಿಂಗ್ ಲೈನ್ ಓಪನ್ ಆಗಿದ್ದು, ಪ್ರೇಕ್ಷಕರು ತಮಗೆ ಬೇಕಾದವರಿಗೆ ಮತಗಳನ್ನು ಹಾಕುತ್ತಿದ್ದಾರೆ. ಗಿಲ್ಲಿ ಅಭಿಮಾನಿಗಳು ಸಹ ಅಭಿಯಾನ ಆರಂಭಿಸಿದ್ದು, ಗಿಲ್ಲಿಯ ಗೆಳೆಯರು ಕೆಲವು ಅಭಿಮಾನಿಗಳು ಇತ್ತೀಚೆಗೆ ಪ್ರೊಸೆಷನ್ ಸಹ ನಡೆಸಿದ್ದರು. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಖುದ್ದು ಗಿಲ್ಲಿ ಪರವಾಗಿ ಮತ ಚಲಾಯಿಸುವಂತೆ ಕೋರಿದ್ದರು. ಇದೀಗ ಬೆಂಗಳೂರಿನ ಕೆಲ ಆಟೋ ಡ್ರೈವರ್​​ಗಳು ಗಿಲ್ಲಿಗೆ ಬೆಂಬಲ ಘೋಷಿಸಿದ್ದು, ಗಿಲ್ಲಿ ಬಿಗ್​​ಬಾಸ್ ಗೆದ್ದರೆ…

Read More

ಎಷ್ಟು ಲಕ್ಷುರಿಯಾಗಿದೆ  ನೋಡಿ ಬೆಂಗಳೂರಲ್ಲಿ ತಲೆ ಎತ್ತಿದೆ ಮಹೇಶ್ ಬಾಬು ಮಲ್ಟಿಪ್ಲೆಕ್ಸ್ 

ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಬೆಂಗಳೂರಲ್ಲಿ ಇಂದಿನಿಂದ (ಜನವರಿ 16) ಕಾರ್ಯಾರಾಂಭ ಆರಂಭಿಸಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದ ಜಾಗದಲ್ಲೇ ಇದು ತಲೆ ಎತ್ತಿದೆ. ಬೆಂಗಳೂರಿನ ಗಾಂಧಿ ನಗರದಲ್ಲಿರುವ ಕಪಾಲಿ ಮಾಲ್​​​ನಲ್ಲಿ ಈ ಮಲ್ಟಿಪ್ಲೆಕ್ಸ್  ಇದೆ. 9 ಪರದೆಗಳನ್ನು ಇದು ಹೊಂದಿದೆ.ಈ ಚಿತ್ರಮಂದಿರ ಸಾಕಷ್ಟು ಅದ್ದೂರಿಯಾಗಿದೆ. ಥಿಯೇಟರ್​​ನ ಝಲಕ್ ಇಲ್ಲಿದೆ. ಸ್ಕ್ರೀನ್ 6 ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ. ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು…

Read More

ದಾವಣಗೆರೆ ದಂಗಲ್: ಸಿಎಂ ಆಪ್ತ ನಸೀರ್ ತಲೆದಂಡ, ಸಚಿವ ಜಮೀರ್​ಗೂ ತೂಗುತ್ತಿ – Kannada News | Siddaramaiahs Aide Nazir Ahmed Dismissed; Minister Zameer Ahmed Clarifies Bagalkote Duty

ಬೆಂಗಳೂರು, ಏ.14: ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ನಡುವೆ ಉಂಟಾಗಿದ್ದ ಅಸಮಾಧನಕ್ಕೆ ಇದೀಗ ಮತ್ತೊಂದು ತಲೆದಂಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ. ದಾವಣಗೆರೆ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪ ನಸೀರ್ ಅಹಮದ್ ಅವರ ಮೇಲಿದೆ. ಈ ಕಾರಣದಿಂದಾಗಿ ಅವರನ್ನು ಮುಖ್ಯಮಂತ್ರಿಗಳ ಆಪ್ತ ರಾಜಕೀಯ ಕಾರ್ಯದರ್ಶಿಯ ಹುದ್ದೆಯಿಂದ ತೆಗೆದುಹಾಕಲಾಗಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಸಚಿವ ಜಮೀರ್ ಅಹಮದ್, ನಸೀರ್ ಅಹಮದ್ ಅವರು…

Read More

IPL 2027: ಎಷ್ಟು ಕೋಟಿ ಹೇಳಿ… ಹಾರ್ದಿಕ್ ಪಾಂಡ್ಯ ಖರೀದಿಗೆ KKR..! – Kannada News | KKR management has approached Mumbai Indians for Hardik Pandya

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಮಿನಿ ಹರಾಜಿಗೂ ಮುನ್ನವೇ ಮತ್ತೊಂದು ಬಿಗ್ ಟ್ರೇಡ್ ನಡೆಯುವ ಸಾಧ್ಯತೆಯಿದೆ. ಈ ಬಾರಿ ಟ್ರೇಡ್ ನಡೆಯಲಿರುವುದು ಕೊಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಮುಂಬೈ ಇಂಡಿಯನ್ಸ್ ನಡುವೆ. ಅದು ಕೂಡ ಹಾರ್ದಿಕ್ ಪಾಂಡ್ಯಗಾಗಿ..! ಅಂದರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಆಸಕ್ತಿ ತೋರಿದೆ.  ಅಲ್ಲದೆ ಈ ಕುರಿತು ಕೆಕೆಆರ್ ಆಡಳಿತ ಮಂಡಳಿಯು ಈಗಾಗಲೇ ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆ ಆರಂಭಿಸಿದೆ…

Read More

ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು: ಕೇಸ್​​ ತನಿಖೆ ಹೊಣೆ ಸಿಐಡಿಗೆ

ತುಮಕೂರು, ಮಾರ್ಚ್​​ 20: ಹುಳಿಯಾರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ಅವರೇ ಮಾಹಿತಿ ನೀಡಿದ್ದಾರೆ. ಜೂಜಾಟ ಕೇಸ್​​ ಸಂಬಂಧ ವಿಚಾರಣೆಗೆ ಪೊಲೀಸರು ಕರೆತಂದಿದ್ದ ಆರು ಮಂದಿಯ ಪೈಕಿ ಓರ್ವ ಮೃತಪಟ್ಟಿದ್ದರು. ಅನುಮಾನಾಸ್ಪದವಾಗಿ ಕಾಂತರಾಜು ಎಂಬವರು ಮೃತಪಟ್ಟಿದ್ದು, ಕುಟುಂಬಸ್ಥರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ವಿಚಾರಣೆ ನೆಪದಲ್ಲಿ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂಬ ಆರೋಪ…

Read More

ದೆಹಲಿಯಿಂದ ಮ್ಯಾಂಚೆಸ್ಟರ್​ಗೆ ಹೊರಟಿದ್ದ ಇಂಡಿಗೋ ವಿಮಾನ ಇಥಿಯೋಪಿಯಾ ಗಡಿ ಬಳಿ ಯೂಟರ್ನ್

ನವದೆಹಲಿ, ಮಾರ್ಚ್​ 09: ದೆಹಲಿಯಿಂದ ಮ್ಯಾಂಚೆಸ್ಟರ್​​ಗೆ ಹೊರಟಿದ್ದ ಇಂಡಿಗೋ(IndiGo) ವಿಮಾನ ಇಥಿಯೋಪಿಯಾ ಗಡಿಯಲ್ಲಿ ಯೂಟರ್ನ್​ ಮಾಡಿ ದೆಹಲಿಗೆ ಮರಳಿರುವ ಘಟನೆ ನಡೆದಿದೆ. ಯು-ಟರ್ನ್‌ಗೆ ಕಾರಣದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೋಯಿಂಗ್ 787-9 ಡ್ರೀಮ್‌ಲೈನರ್ ಬಳಸಿ ಕಾರ್ಯನಿರ್ವಹಿಸುತ್ತಿದ್ದ 6E33 ವಿಮಾನವು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಯುನೈಟೆಡ್ ಕಿಂಗ್‌ಡಂನ ಮ್ಯಾಂಚೆಸ್ಟರ್‌ಗೆ ಹೋಗುವ ಮಾರ್ಗದಲ್ಲಿತ್ತು. ಫ್ಲೈಟ್ ಟ್ರ್ಯಾಕಿಂಗ್ ಡೇಟಾದ ಪ್ರಕಾರ, ವಿಮಾನವು ಇಥಿಯೋಪಿಯಾದ ಗಡಿಯ ಸಮೀಪ ವಾಯುಪ್ರದೇಶದ ಹತ್ತಿರ ತಲುಪಿ, ಹಾರಾಟದ ಮಧ್ಯದಲ್ಲಿ ಹಠಾತ್ತನೆ ತಿರುಗಿತು….

Read More