ಬೇರೆಯವರ ಖಾಸಗಿ ಚಿತ್ರ,ವಿಡಿಯೋ ಶೇರ್ ಮಾಡಿದ್ರೆ ಕೇಸ್ ಫಿಕ್ಸ್: ಎಫ್ಐಆರ್ ಮಾರ್ಗಸೂಚಿ ಹೀಗಿದೆ – Kannada News | Karnataka police mandate FIRs in cases of non consensual sharing of intimate images, DG IGP Order Details
Dr. M. A. Saleem ಬೆಂಗಳೂರು, (ಜೂನ್ 17): ಬೇರೆಯವರ ಖಾಸಗಿ ಚಿತ್ರ, ವಿಡಿಯೋ ವೈರಲ್ ಮಾಡುವವರಿಗೆ ತಕ್ಕ ಶಾಸ್ತಿ ಮಾಡಲು ಗೃಹ ಇಲಾಖೆ ಮುಂದಾಗಿದೆ. ವ್ಯಕ್ತಿಯ ಅನುಮತಿ ಪಡೆದುಕೊಳ್ಳದೆ ಅವರ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ಪ್ರಕಟಿಸುವುದು ಕಾನೂನು ಪ್ರಕಾರ ಅಪರಾಧವಾಗಲಿದೆ. ಈ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ( DG-IGP Dr.M.A.Saleem) ಅವರು ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೆ, ವಿಸ್ತತವಾದ ಮಾರ್ಗಸೂಚಿಯನ್ನು ಹೊರಡಿಸಿದ್ದು, ಪೊಲೀಸರು ನಾನಾ ಕಾರಣಗಳನ್ನು ನೀಡಿ ಎಫ್ ಐ ಆರ್…