Headlines

CM Siddaramaiah Press Meet Live: ಬಜೆಟ್ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿಯ ನೇರ ಪ್ರಸಾರ

ಬೆಂಗಳೂರು, (ಮಾರ್ಚ್ 06): ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು (ಮಾರ್ಚ್ 06)ಕರ್ನಾಟಕದ 2026ನೇ ಸಾಲಿನ ಬಜೆಟ್  (Karnataka Budget 2026)  ಮಂಡನೆ ಮಾಡಿದ್ದಾರೆ. ಒಟ್ಟು 4.48 ಲಕ್ಷ ಕೋಟಿ ರೂಪಾಯಿಯ ತಮ್ಮ 17ನೇ ಬಜೆಟ್ ಮಂಡನೆ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದು ಜನಪರವಾದ ಬಜೆಟ್ ಎಂದು ಆಡಳಿತ ಪಕ್ಷ ಮೆಚ್ಚುಗೆ ಸೂಚಿಸದರೆ, ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲದ…

Read More

ಕಾಸರಗೋಡಿನಲ್ಲಿ ಭಾರೀ ಮಳೆಗೆ ದುರಂತ: ಆಟವಾಡುತ್ತಿದ್ದಾಗ ಮಣ್ಣು ಕುಸಿದು ಮಕ್ಕಳಿಬ್ಬರು ಸಾವು – Kannada News

ಮಂಗಳೂರು, ಜೂನ್​​ 06: ಕೇರಳಂನ ಕಾಸರಗೋಡು ಜಿಲ್ಲೆಯಾದ್ಯಂತ ವರುಣಾರ್ಭಟ ತೀವ್ರಗೊಂಡಿದೆ. ಧಾರಾಕಾರ ಮಳೆಗೆ (Rain) ಮಣ್ಣು ಕುಸಿದು ಬಿದ್ದ ಪರಿಣಾಮ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವಂತಹ (death) ಘಟನೆ ಕಾಸರಗೋಡು ಜಿಲ್ಲೆಯ ಅಡೂರು ಎಂಬಲ್ಲಿ ನಡೆದಿದೆ. ಮುನ್ಸಿರ್(10) ಮತ್ತು ಮುಜಮ್ಮಿಲ್ (14) ಮೃತ‌ ಮಕ್ಕಳು. ಅಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು ಕಾಸರಗೋಡಿನಲ್ಲಿ ವರುಣನ ಅಟ್ಟಹಾಸ ಮಳೆಯಿಂದ ಕುಸಿದ ಮಣ್ಣು ಘಟನೆಯಲ್ಲಿ ಇನ್ನೋರ್ವ ಮಗುವಿನ ಸ್ಥಿತಿ ಗಂಭೀರ ನಡೆದಿದ್ದೇನು? ಸದ್ಯ ಕಾಸರಗೋಡು ಜಿಲ್ಲೆಯಾದ್ಯಂತ ವರುಣಾರ್ಭಟ ಜೋರಾಗಿದೆ….

Read More

ಒಡಿಶಾದ ನಯಾಗಢದಲ್ಲಿ ಬಸ್ ಅಪಘಾತ; ಐವರು ಸಾವು, ಹಲವರಿಗೆ ಗಾಯ

ನಯಾಗಢ, ಮಾರ್ಚ್ 28: ಒಡಿಶಾದಲ್ಲಿ ಪ್ರವಾಸಿ ಬಸ್ ರಸ್ತೆಬದಿಯ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮದಿಂದ 5 ಜನ ಸಾವನ್ನಪ್ಪಿದ್ದಾರೆ, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಒಡಿಶಾದ (Odisha News) ನಯಾಗಢ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಪ್ರವಾಸಿ ಬಸ್ ರಸ್ತೆಬದಿಯ ದೊಡ್ಡ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೃತರೆಲ್ಲರೂ ಬೆರ್ಹಾಂಪುರ್ ನಿವಾಸಿಗಳಾಗಿದ್ದು, ಚಾಲಕ ಕೂಡ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆರ್ಹಾಂಪುರ್‌ನಿಂದ ಹರಿಶಂಕರ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್…

Read More

ನೆಲಮಂಗಲ: ಖಾಸಗಿ ಕಂಪನಿಯ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ, ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ನೆಲಮಂಗಲ, ಏಪ್ರಿಲ್ 9: ನೆಲಮಂಗಲದ ಅಡಕಮಾರನಹಳ್ಳಿಯಲ್ಲಿನ ಆಹಾರ ಸಂಗ್ರಹ ಗೋದಾಮಿನಲ್ಲಿ ಬುಧವಾರ ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಆಂಜನೇಯ ದೇಗುಲದ ಬಳಿ ಇರುವ ಗೋದಾಮಿನಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಗೋದಾಮಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅವಘಡದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ…

Read More

ಪ್ರಧಾನಿ ಮೋದಿ ಜೊತೆ ಟ್ರಂಪ್ 40 ನಿಮಿಷ ಫೋನ್ ಸಂಭಾಷಣೆ; ಹಾರ್ಮುಜ್ ಕುರಿತು ಚರ್ಚೆ – Kannada News | PM Modi and Donald Trump hold 40 minute call discuss on Hormuz crisis

ನವದೆಹಲಿ, ಏಪ್ರಿಲ್ 14: ಪ್ರಧಾನಿ ಮೋದಿಗೆ (PM Narendra Modi) ಇಂದು ಸಂಜೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಾರ್ಮುಜ್ ಜಲಸಂಧಿಯ ದಿಗ್ಬಂಧನ, ಇರಾನ್ ಮೇಲಿನ ದಾಳಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ 40 ನಿಮಿಷ ಮಾತುಕತೆ ನಡೆಸಿದ್ದಾರೆ. ಈ ವರ್ಷ ಇಬ್ಬರು ನಾಯಕರ ನಡುವಿನ ಮೂರನೇ ಕರೆ ಇದಾಗಿದೆ. ಹಾರ್ಮುಜ್ ಜಲಸಂಧಿಯ ದಿಗ್ಬಂಧನದ ವಿಷಯದ ಕುರಿತು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಚರ್ಚಿಸಿದ್ದಾರೆ ಎಂದು ಅಮೆರಿಕದ ರಾಯಭಾರ…

Read More

ಒಂದೇ ಸೆಕೆಂಡ್​​ನಲ್ಲಿ ಜೀವ ಹೋಗುತ್ತಿತ್ತು; ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ – Kannada News | Gujarat Man narrowly Escapes as lift Suddenly Malfunctions CCTV video Goes Viral

ಅಹಮದಾಬಾದ್, ಮಾರ್ಚ್ 4: ಗುಜರಾತ್​​ನ ವಲ್ಸಾದ್ ಅಪಾರ್ಟ್​ಮೆಂಟ್​​ನಲ್ಲಿ ಲಿಫ್ಟ್ (Lift) ಇದ್ದಕ್ಕಿದ್ದಂತೆ ಹಾಳಾಗಿ ಅನಿರೀಕ್ಷಿತವಾಗಿ ಕೆಳಗೆ ಕುಸಿದಿದೆ. ಈ ವೇಳೆ ಆ ಲಿಫ್ಟ್​​ನಲ್ಲಿದ್ದ ವ್ಯಕ್ತಿ ಪವಾಡವೆಂಬಂತೆ ಪಾರಾಗಿದ್ದಾರೆ. ಆ ಲಿಫ್ಟ್​​ನೊಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಈ ಶಾಕಿಂಗ್ ವಿಡಿಯೋ ನೋಡಿದರೆ ಲಿಫ್ಟ್ ಹತ್ತಲು ಗಾಬರಿಯಾಗುವುದು ಗ್ಯಾರಂಟಿ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಈ ತಕ್ಷಣವೇ ರಾಜಿನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ಬೆಂಗಳೂರು, ಏ.11 : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬೆಳವಣಿಗಳು ನಡೆದಿದೆ. ಕಾಂಗ್ರೆಸ್​​ ಆಂತರಿಕ ಕಚ್ಚಾಟಕ್ಕೆ ರಾಜೀನಾಮೆ ಮೂಲಕ ತೆರೆ ಬೀಳುವ ಸಾಧ್ಯತೆ ಇದೆ. ದಾವಣಗೆರೆ ಚುನಾವಣೆ ಪ್ರಚಾರದಲ್ಲಿ ನಡೆದ ಘಟನೆಗಳು ಹಾಗೂ ಸಂಪೂರ್ಣ ಆಂತರಿಕ ವರದಿ ಕಾಂಗ್ರೆಸ್ ಹೈಕಮಾಂಡ್ ಕೈಸೇರಿದೆ. ಇದೀಗ ಈ ವರದಿ ಹೈಕಮಾಂಡ್​​ ಕೈಸೇರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿದೆ. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ನೀಡಿದ ವರದಿಯ ಬೆನ್ನಲ್ಲೇ, ಸಚಿವ ಜಮೀರ್…

Read More

ಪೆಟ್ರೋಲ್ ಬಂಕ್ ನೌಕರ ಭಾರತಿರಾಜ್, ತಮಿಳು ಚಿತ್ರರಂಗದಲ್ಲಿ ಕ್ರಾಂತಿ ಮಾಡಿದ್ದು ಹೇಗೆ? – Kannada News

ತಮಿಳು ಚಿತ್ರರಂಗದ (Kollywood) ಹಿರಿಯ ನಿರ್ದೇಶಕ ಭಾರತಿ ರಾಜ ಇಂದು (ಜೂನ್ 10) ನಿಧನ ಹೊಂದಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಹಲವಾರು ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾರತಿ ರಾಜ ಅವರಿಗೆ ಅಂತಿಮ ನಮನಗಳನ್ನು ಸಲ್ಲಸಿದ್ದಾರೆ. ಭಾರತಿರಾಜ, ತಮಿಳು ಸಿನಿಮಾಗಳ ವ್ಯಾಕರಣ ಬದಲಿಸಿದ ನಿರ್ದೇಶಕ. ಅವರ ಮೊದಲ ಸಿನಿಮಾ ‘16 ವಯತಿನಿಲೆ’ ಸಿನಿಮಾ, ಸೂಪರ್ ಹಿಟ್ ಆಗಿದ್ದು, ಮಾತ್ರವಲ್ಲ ಸಿನಿಮಾ ನಿರ್ದೇಶಕರುಗಳಿಗೆ ಹೊಸ ಹಾದಿಯನ್ನೇ ಹಾಕಿಕೊಟ್ಟಿತು. ಅಂದಹಾಗೆ ಭಾರತಿರಾಜ, ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ….

Read More

ಮೂತ್ರದ ಬಾಟಲಿಗಳು, 7,000 ಟನ್ ಕಸ; ಕನ್ವರ್ ಯಾತ್ರೆ ಬಳಿಕ ಹರಿದ್ವಾರ ಹೇಗಾಗಿದೆ ನೋಡಿ! – Kannada News | Urine Bottles, 7,000 Tonnes of waste Haridwar launches mega clean up after Kanwar Yatra

ಹರಿದ್ವಾರ, ಆಗಸ್ಟ್ 12: ವರ್ಷಕ್ಕೊಮ್ಮೆ ನಡೆಯುವ ಕನ್ವರ್ ಯಾತ್ರೆ (Kanwar Yatra)  ಪೂರ್ಣಗೊಂಡಿದ್ದು, ಉತ್ತರಾಖಂಡದ ಪವಿತ್ರ ನಗರಿ ಹರಿದ್ವಾರದಲ್ಲಿ (Haridwar) ಈಗ ಕಸದ ಬೆಟ್ಟಗಳೇ ಸೃಷ್ಟಿಯಾಗಿವೆ. ಈ ಬಾರಿಯ ಶ್ರಾವಣ ಮಾಸದಲ್ಲಿ ಗಂಗಾಜಲವನ್ನು ತೆಗೆದುಕೊಂಡು ಹೋಗಲು ಸುಮಾರು 5 ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ಶಿವರಾತ್ರಿಯ ನಂತರ ಭಕ್ತರು ತಮ್ಮ ಊರುಗಳಿಗೆ ಹಿಂತಿರುಗುವಾಗ ಹರಿದ್ವಾರದ ಗಂಗಾ ಘಾಟ್‌ಗಳಲ್ಲಿ ಅಪಾರ ಪ್ರಮಾಣದ ತ್ಯಾಜ್ಯವನ್ನು ಬಿಟ್ಟು ಹೋಗಿದ್ದಾರೆ. ಹರಿದ್ವಾರದ ಘಾಟ್‌ಗಳಲ್ಲಿ ಟನ್​ಗಟ್ಟಲೆ ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳು, ಮೂತ್ರ ತುಂಬಿದ…

Read More

ಉಡುಪಿಯ ಟೋಲ್ ಪ್ಲಾಝಾದಲ್ಲಿ ನಿವೃತ್ತ ಯೋಧನಿಗೆ ಅವಮಾನ! – Kannada News | Retired Army Commander Humiliated at Sasthana Toll: Udupi Incident Sparks Outrage

ಉಡುಪಿ, ಜನವರಿ 26: ಜಿಲ್ಲೆಯ ಬ್ರಹ್ಮಾವರ (Brahmavar)ತಾಲ್ಲೂಕಿನ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ನಿವೃತ್ತ ಆರ್ಮಿ ಕಮಾಂಡರ್ ಶ್ಯಾಮರಾಜ್ ಅವರಿಗೆ ಅವಮಾನವಾಗಿದೆ ಎಂಬ ರಾಷ್ಟ್ರೀಯ ಹೆದ್ದಾರಿ 66ಯಲ್ಲಿರುವ ಟೋಲ್ ಪ್ಲಾಝಾ ಗೇಟ್‌ನಲ್ಲಿ ಯೋಧರಿಗೆ ಟೋಲ್ ಫ್ರೀ ಅವಕಾಶ ಇದ್ದು, ಸೂಕ್ತ ದಾಖಲೆ ತೋರಿಸಿದರೂ ನಿವೃತ್ತ ಯೋಧನನ್ನು ನಿಲ್ಲಿಸಿ ಟೋಲ್ ಸಿಬ್ಬಂದಿ ಅವಮಾನಿಸಿದರು. ಘಟನೆ ವೇಳೆ ಶ್ಯಾಮರಾಜ್ ವೀಲ್‌ಚೇರ್‌ನಲ್ಲಿ ಕುಳಿತಿದ್ದು, ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,…

Read More