Headlines

ಶಾಸಕರ ಮತದಾನದಲ್ಲಿ ಎರಡು ನಿಯಮ ಯಾಕೆ? ಚುನಾವಣಾ ಆಯೋಗದ ದ್ವಂದ್ವ ನೀತಿ ಪ್ರಶ್ನಿಸಿ ಶಾಸಕ ಎಸ್. ಸುರೇಶ್ ಕುಮಾರ್ ಪತ್ರ – Kannada News | BJP MLA S Suresh Kumar Writes To Karnataka CEO Questioning Duality in Rajya Sabha and MLC Election Voting Rules

ಶಾಸಕ ಎಸ್. ಸುರೇಶ್ ಕುಮಾರ್ ಹಾಗೂ ಅವರು ಚುನಾವಣಾ ಅಧಿಕಾರಿಗೆ ಬರೆದ ಪತ್ರದ ಪ್ರತಿ (ಕೃಪೆ: ಶಾಸಕರ ಫೇಸ್​ಬುಕ್ ಹಾಗೂ ಎಕ್ಸ್ ಪೋಸ್ಟ್)Image Credit source: Facebook ಬೆಂಗಳೂರು, ಜೂನ್ 20: ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ, ಶಾಸಕರು (ಮತದಾರರ ನೆಲೆಯಲ್ಲಿ) ವರ್ತಿಸಬೇಕಾದ ನಿಯಮಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ರಾಜಾಜಿನಗರ ಕ್ಷೇತ್ರದ ಬಿಜೆಪಿ (BJP) ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ (S Suresh Kumar) ಪ್ರಶ್ನೆ ಮಾಡಿದ್ದಾರೆ. ಈ…

Read More

ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ – Kannada News | PM Modi interacts with students and loco pilots in Vande Bharat Sleeper Train

ಮಾಲ್ಡಾ, ಜನವರಿ 17: ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳದ ಮಾಲ್ಡಾದಿಂದ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಹಸಿರು ನಿಶಾನೆ ತೋರಿದರು. ಈ ಸ್ಲೀಪರ್ ರೈಲು ಸೇವೆಯು ಹೌರಾವನ್ನು ಕಾಮಾಕ್ಯ (ಗುವಾಹಟಿ) ಜೊತೆ ಸಂಪರ್ಕಿಸುತ್ತದೆ. ಈ ವಿಶೇಷವಾದ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಲೋಕೋ ಪೈಲಟ್‌ಗಳು ಮತ್ತು ರೈಲ್ವೆ ಸಿಬ್ಬಂದಿಯೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಈ ಯೋಜನೆಯಲ್ಲಿ…

Read More

ಕನ್ನಡಿಗನಿಗೆ ಡಿಚ್ಚಿ ಹೊಡೆದಿದ್ದ ಜೆಕೆ ನಾಯಕನಿಗೆ ಭಾರಿ ಮೊತ್ತದ ದಂಡ ವಿಧಿಸಿದ ಬಿಸಿಸಿಐ – Kannada News | Ranji Final Shocker: J&K Captain Paras Dogra Fined for Headbutt on Karnataka Fielder

ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ (Karnataka vs J&K) ನಡುವೆ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದೆ. ಒಂದೆಡೆ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ (Ranji Trophy Final) ಆಡುತ್ತಿರುವ ಜಮ್ಮು ಮತ್ತು ಕಾಶ್ಮೀರ ತಂಡವು ಎಂಟು ಬಾರಿಯ ರಣಜಿ ಚಾಂಪಿಯನ್ ಕರ್ನಾಟಕದ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದೆ. ಆದರೆ ಈ ಪಂದ್ಯದಲ್ಲಿ ಆಟದ ನಿಯಮದ ವಿರುದ್ಧ ನಡೆದುಕೊಂಡ ಜಮ್ಮು ಮತ್ತು ಕಾಶ್ಮೀರದ ನಾಯಕ ಪರಾಸ್ ಡೋಗ್ರಾ ವಿರುದ್ಧ ಬಿಸಿಸಿಐ ಕಠಿಣ ಕ್ರಮ ತೆಗೆದುಕೊಂಡಿದ್ದು,…

Read More

RR vs RCB: ಪವರ್‌ಪ್ಲೇನಲ್ಲಿ ರನ್ ಬಂದರೂ ಪ್ರಮುಖ 5 ವಿಕೆಟ್ ಕಳೆದುಕೊಂಡ ಆರ್​​ಸಿಬಿ

2026 ರ ಐಪಿಎಲ್‌ನಲ್ಲಿ ತವರಿನಿಂದ ಹೊರಕ್ಕೆ ಮೊದಲ ಪಂದ್ಯವನ್ನಾಡಿದ ಆರ್​​ಸಿಬಿ, ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಮಳೆ ಪೀಡಿತ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ಪವರ್‌ಪ್ಲೇನಲ್ಲಿ ಅಂದರೆ ಮೊದಲ 6 ಓವರ್​ಗಳಲ್ಲಿ 60 ರನ್ ಕಲೆಹಾಕಿತ್ತಾದರೂ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಎಂದಿನಂತೆ ಆರ್​ಸಿಬಿ ಪರ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಇತ್ತ ರಾಜಸ್ಥಾನ್ ಪರ ಬೌಲಿಂಗ್ ಆರಂಭಿಸಿದ…

Read More

ಬರೋಬ್ಬರಿ 17 ಸಿಕ್ಸ್​… ಶಿಮ್ರಾನ್ ಸಿಡಿಲಬ್ಬರ

T20 World Cup 2026: ಟಿ20 ವಿಶ್ವಕಪ್​ನಲ್ಲಿ ಶಿಮ್ರಾನ್ ಹೆಟ್ಮೆಯರ್ (Shimron Hetmyer) ಸಿಡಿಲಬ್ಬರ ಮುಂದುವರೆದಿದೆ. ಈ ಸಿಡಿಲಬ್ಬರದೊಂದಿಗೆ ಹೆಟ್ಮೆಯರ್ ಈವರೆಗೆ ಸಿಡಿಸಿರುವ ಸಿಕ್ಸರ್​ಗಳ ಸಂಖ್ಯೆ ಬರೋಬ್ಬರಿ 17. ಅದರಲ್ಲೂ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಶಿಮ್ರಾನ್ ಬ್ಯಾಟ್​ನಿಂದ 7 ಸಿಕ್ಸರ್​ಗಳು ಮೂಡಿಬಂದಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮೆಯರ್ ಕೇವಲ 34 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 85 ರನ್​ ಬಾರಿಸಿದ್ದಾರೆ. ಈ ವೇಳೆ…

Read More

ಬೇರೊಬ್ಬ ಮದುವೆಯಾಗಲಿರುವ ಯುವತಿಗೆ ಇನ್​ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಕಾಟ: ತರೀಕೆರೆಯಲ್ಲಿ ಯುವಕನ ಬರ್ಬರ ಹತ್ಯೆ – Kannada News | Tarikere Murder Case: Youth Brutally Killed for Harassing Engaged Woman on Instagram message

ಯುವಕ ಮಂಜುನಾಥ್ ಹಾಗೂ ತರೀಕೆರೆ ಪೊಲೀಸ್ ಠಾಣೆ ಚಿಕ್ಕಮಗಳೂರು, ಜನವರಿ 1: ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ನಿರಂತರವಾಗಿ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿದ್ದ ಆರೋಪದ ಹಿನ್ನೆಲೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ. ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಯಾಗಿದ್ದು, ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇಪದೇ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್…

Read More

Samvardhan Fellowship: ಯುವ ಪರಿಸರ ಪ್ರೇಮಿಗಳಿಗೆ ಸುವರ್ಣಾವಕಾಶ; ‘ಸಂವರ್ಧನ್ ಫೆಲೋಶಿಪ್’ಗೆ ಅರ್ಜಿ ಆಹ್ವಾನ, 3 ಲಕ್ಷ ರೂ. ನೆರವು! – Kannada News | Samvardhan Fellowship: Empowering India’s Youth in Biodiversity Conservation and Environment

ಸಂವರ್ಧನ್ ಫೆಲೋಶಿಪ್Image Credit source: samvardhan.dasra.org ಭಾರತದ ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಮುಂದಿನ ಪೀಳಿಗೆಯ ಪರಿಸರ ನಾಯಕರನ್ನು ಬೆಳೆಸಲು ‘ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್’ (RNP) ಮತ್ತು ‘ದಸ್ರಾ’ ಸಂಸ್ಥೆಗಳು ಕೈಜೋಡಿಸಿವೆ. ದೇಶಾದ್ಯಂತ ಇರುವ ಯುವ ಪರಿಸರ ಸಂರಕ್ಷಕರು ಹಾಗೂ ಸಂಶೋಧಕರಿಗಾಗಿ ವಿಶಿಷ್ಟವಾದ ‘ಸಂವರ್ಧನ್ ಬಯೋಡೈವರ್ಸಿಟಿ ಮತ್ತು ಕನ್ಸರ್ವೇಶನ್ ಫೆಲೋಶಿಪ್’ ಅನ್ನು ಘೋಷಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಏನಿದು ಸಂವರ್ಧನ್ ಫೆಲೋಶಿಪ್? ಇದು ಯುವ ಮತ್ತು ಉದಯೋನ್ಮುಖ ಪರಿಸರ ಸಂರಕ್ಷಕರಿಗೆ ಸಮಗ್ರ…

Read More

ಬ್ಲಾಸ್ಟ್​​ ಬೆದರಿಕೆ, ಜಿಲೆಟಿನ್​​ ಪತ್ತೆ: ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ – Kannada News | PM Modi Bengaluru Security Scare: Gelatin Sticks Found, Bomb Threat Investigated

ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ ಬೆಂಗಳೂರು, ಮೇ 10: ಎರಡು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಇಂದು (ಮೇ 10) ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ನಡುವೆ ನಡೆದ ಕೆಲವು ಘಟನೆಗಳು ಪ್ರಧಾನಿಗೆ ಭದ್ರತೆ ಸಂಬಂಧಿಸಿ ಪೊಲೀಸರಿಗೆ ಟೆನ್ಷನ್​​ ತಂದ ಪ್ರಸಂಗ ನಡೆದಿದೆ. ಒಂದು ಕಡೆ ಬ್ಲಾಸ್ಟ್​​ ಬೆದರಿಕೆ ಬಂದಿದ್ದರೆ ಮತ್ತೊಂದು ಕಡೆ ದಾರಿಯ ಸಮೀಪವೇ ಜಿಲೆಟಿನ್​​ ಕಡ್ಡಿಗಳು ಸಿಕ್ಕಿವೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದು, ಬೆದರಿಕೆ…

Read More

LSG vs RCB: ಏಕೈಕ ಪಂದ್ಯವನ್ನಾಡಿ ಗಾಯಗೊಂಡ 8.6 ಕೋಟಿ ಬೆಲೆಯ ಸ್ಟಾರ್ ಬ್ಯಾಟರ್ – Kannada News | LSG vs RCB IPL 2026: Josh Inglis Injury Blow for Lucknow Super Giants; RCB Wins Toss, Bowls

ಐಪಿಎಲ್ 2026 (IPL 2026) ರ 50 ನೇ ಲೀಗ್ ಪಂದ್ಯವು ಲಕ್ನೋದ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ತನ್ನ ತವರಿನಲ್ಲಿ ಮೊದಲು ಬ್ಯಾಟಿಂಗ್‌ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಆರ್​ಸಿಬಿ ತಂಡದಲ್ಲಿ…

Read More

ಅಜ್ಜಿಯ ಕೊಲೆ ರಹಸ್ಯ; ನಾಯಿಗಳಿಂದ ಪತ್ತೆಯಾಯ್ತು ಮೊಮ್ಮಗನ ಕ್ರೌರ್ಯ – Kannada News | Andhra Pradesh Man Kills his Grandmother for Gold Dog Squad solved the Murder Case

ವಿಜಯನಗರ, ಡಿಸೆಂಬರ್ 22: ಆಂಧ್ರದ ವಿಜಯನಗರ ಜಿಲ್ಲೆಯಲ್ಲಿ ಚಿನ್ನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗನ ಕ್ರೌರ್ಯ ಬೆಳಕಿಗೆ ಬಂದಿದೆ. ಭೋಗಾಪುರಂ ಮಂಡಲದ ಮುಡಸಲಪೇಟೆಯಲ್ಲಿ ವೃದ್ಧ ಮಹಿಳೆಯ ಕೊಲೆ (Murder) ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯಾದ ಆಕೆಯ ಮೊಮ್ಮಗನನ್ನು ಬಂಧಿಸಿದ್ದಾರೆ. ಶ್ವಾನ ದಳದ ಸಾಕ್ಷ್ಯಾಧಾರಗಳಿಂದ ಅನುಮಾನ ಬಲಗೊಂಡಿದ್ದು, ತನಿಖೆಯ ಸಮಯದಲ್ಲಿ ಕೊಲೆಯ ಬಗ್ಗೆ ಸತ್ಯ ಬಯಲಾಗಿದೆ. ಅಜ್ಜಿಯಿಂದ ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಆ ಯುವಕನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 12ರಂದು ವಿಜಯನಗರ ಜಿಲ್ಲೆಯ ಭೋಗಪುರಂ ಮಂಡಲದ ಮುಡಸಲಪೇಟೆ…

Read More