Headlines

ರಂಭಾಪುರಿ ಪೀಠಕ್ಕೆ ಭೇಟಿ ವೇಳೆ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ: ಡಿಕೆಶಿ ಮಾರ್ಮಿಕ ಮಾತು – Kannada News | Next CM DK Shivakumar Slogans Echo at Rambhapuri Peetha; Deputy CM Reacts, Says Work is Ours, Result is God’s

ಚಿಕ್ಕಮಗಳೂರು, ಮಾರ್ಚ್ 1: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭಾನುವಾರ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ (Rambhapuri Peetha) ಭೇಟಿ ನೀಡಿ ಜಗದ್ಗುರು ರೇಣುಕಾಚಾರ್ಯ, ವೀರಭದ್ರೇಶ್ವರನ ದರ್ಶನ ಪಡೆದರು. ಇದೇ ವೇಳೆ, ಕರ್ನಾಟಕ ರಾಜಕೀಯ ಹಾಗೂ ಇರಾನ್, ಇಸ್ರೇಲ್ ಸಂಘರ್ಷದ ಬಗ್ಗೆಯೂ ಹಲವು ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದರು. ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ರಂಭಾಪುರಿ ಪೀಠದ ಹೆಲಿಪ್ಯಾಡ್‌ನಲ್ಲಿ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಂತೆಯೇ ಕೆಲ ಬೆಂಬಲಿಗರು ‘‘ಡಿ.ಕೆ. ಶಿವಕುಮಾರ್ ಮುಂದಿನ…

Read More

‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು – Kannada News | Dhanveer Gowda talks about Hayagrriva movie release problem

ದರ್ಶನ್ ಜೊತೆ ಆಪ್ತವಾಗಿರುವ ನಟ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ (Hayagrriva) ಸಿನಿಮಾದ ಬಿಡುಗಡೆ ವೇಳೆ ತೊಂದರೆ ಉಂಟಾಯಿತು. ಆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಫೆಬ್ರವರಿ 27ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಸಂಜೆ ತನಕ ರಿಲೀಸ್ ಆಗಲೇ ಇಲ್ಲ. ಸಂಜೆ ಬಳಿಕ ಬಿಡುಗಡೆಗೆ ಅವಕಾಶ ಸಿಕ್ಕಿತು. ಆ ಬಗ್ಗೆ ಧನ್ವೀರ್ ಗೌಡ ಮಾತನಾಡಿದ್ದಾರೆ. ‘ಅಂಥವರನ್ನು ವಿರೋಧಿಗಳು ಅಂತ ಹೇಳಬಾರದು. ನಮಗೆ ಸಿಕ್ಕಾಪಟ್ಟೆ ಪ್ರೀತಿ ತೋರಿಸುವವರು. ನನ್ನ ಮೇಲೆ ಅವರಿಗೆ ಬಹಳ ಲವ್ ಆಗಿದೆ. ಅವರ ರೀತಿಯೇ…

Read More

ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು! – Kannada News | New Mahindra Electric Cars in DK Shivakumar House Bangalore! DCM Recently Bought Lexus LM 350h

ಬೆಂಗಳೂರು, ಮಾರ್ಚ್ 1: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಟುಂಬ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದು, ಮಹೀಂದ್ರಾ ಕಂಪನಿಯ 3 ಕಾರುಗಳನ್ನು ಕಂಪನಿಯವರು ಬೆಂಗಳೂರಿನ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಕಾರುಗಳ ವೀಕ್ಷಣೆ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ 2 ಕೋಟಿ ರೂಪಾಯಿಯ ಹೊಸ Lexus LM 350h 7 ಸೀಟರ್ ಕಾರು ಖರೀದಿಸಿದ್ದರು. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಆಟೋದಿಂದ ಬಿದ್ದ ವಿದ್ಯಾರ್ಥಿ ಮೇಲೆ ಹರಿದ ಬಸ್; ಯುವಕ ಸ್ಥಳದಲ್ಲೇ ಸಾವು! – Kannada News | Raichur Student Basavaraj Dies in Horrific Auto Bus Accident on Station Road

ಆಟೋದಿಂದ ಬಿದ್ದ ವಿದ್ಯಾರ್ಥಿ ಮೇಲೆ ಹರಿದ ಬಸ್; ಯುವಕ ಸ್ಥಳದಲ್ಲೇ ಸಾವು! ರಾಯಚೂರು, ಮಾರ್ಚ್ 01: ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಬಡ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ವೇಗದಲ್ಲಿದ್ದ ಆಟೋದಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿ ಮೇಲೆ ಬಸ್ ಹರಿದಿದ್ದು, ಬಸವರಾಜ್ (21) ಎಂಬ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಭಯಾನಕ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇಟರಿಂಗ್ ಕೆಲಸಕ್ಕೆ ಹೋಗುವಾಗ ಘಟನೆ ಬಸವರಾಜ್ ಆಶಾಪುರ ರಸ್ತೆಯಿಂದ ಬಸವೇಶ್ವರ…

Read More

Iran-America Conflict: ನಿಜವಾಗಿಯೂ ಅಮೆರಿಕ ಹೇಳಿದ್ದಕ್ಕೆ ಇರಾನ್ ಒಪ್ಪುತ್ತಿರಲಿಲ್ಲವೇ? ಅದಕ್ಕೆ ಈ ಯುದ್ಧ ಪ್ರಾರಂಭವಾಯಿತೇ? – Kannada News | Iran US Conflict: Inside the Failed Nuclear Negotiations and Escalating War

ಟೆಹ್ರಾನ್, ಮಾರ್ಚ್​ 01: ಇಸ್ರೇಲ್(Israel) ಹಾಗೂ ಅಮೆರಿಕವು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ, ಅದರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಕೊಂದಿವೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ಬಳಿಕ ಒಮಾನ್​​ನ ಸುಲ್ತಾನೇಟ್​​ನ ವಿದೇಶಾಂಗ ಸಚಿವಾಲಯದ ರಾಜತಾಂತ್ರಿಕ ಸಹಾಯಕರಾಗಿರುವ ಪೀಟರ್ ಎಕ್ಸ್​ ಖಾತೆಯಲ್ಲಿ ದಾಳಿಯ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ. ‘‘ ನನ್ನ ಕೆಲಸ ಲಾಜಿಸ್ಟಿಕ್ಸ್​, ಪರಿಸ್ಪರ ಕುಳಿತು ಮಾತನಾಡಲು ಸಾಧ್ಯವಾಗದ ಎರಡು ದೇಶಗಳು ಮಾತನಾಡಬೇಕಾದರೆ, ಕೊಠಡಿಗಳನ್ನು ಬುಕ್ ಮಾಡುವುದು ನನ್ನ…

Read More

ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಪುತ್ತೂರಿಗೆ ಭೇಟಿ – Kannada News | Prahlad Modi Visits Puttur: Narendra Modi’s Brother Attends Ganiga Sangama, Offers Special Puja at Mahalakshmi Temple

ಪುತ್ತೂರು, ಮಾರ್ಚ್ 1: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಭಾನುವಾರ ಭೇಟಿ ನೀಡಿ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರರಾಗಿರುವ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಮೊದಲಿಗೆ ಪುತ್ತೂರಿನ ಲಕ್ಷ್ಮೀ ದೇವಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಹಾಲಕ್ಷ್ಮೀ ದೇವಿ ಅಮ್ಮನವರ ದರ್ಶನ ಪಡೆದು ಆಶೀರ್ವಾದ ಪಡೆದರು. ದೇವಾಲಯದಲ್ಲಿ…

Read More

ಮಗನಿಗೂ ಬೇಡವಾದ ದಳಪತಿ ವಿಜಯ್? ಡಿವೋರ್ಸ್ ಸುದ್ದಿ ಬೆನ್ನಲ್ಲೇ ಅನ್​ಫಾಲೋ – Kannada News | Thalapathy Vijay son Jason Sanjay reportedly unfollows father on Instagram amid divorce news

ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರ ಸಂಸಾರದ ಜಗಳ ಈಗ ಕೋರ್ಟ್ ಮೆಟ್ಟಿಲೇರಿದೆ. ವಿಚ್ಛೇದನಕ್ಕೆ ಮನವಿ ಮಾಡಿ ವಿಜಯ್ ಪತ್ನಿ ಸಂಗೀತಾ ಅವರು ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ (Divorce) ಪಡೆಯಲು ಜನವರಿ 27ರಂದು ಅವರು ಕೌಟುಂಬಿಕ ಕೋರ್ಟ್​​ನಲ್ಲಿ ಅರ್ಜಿ ಹಾಕಿರುವುದು ಖಚಿತವಾಗಿದೆ. ಈ ಬೆನ್ನಲ್ಲೇ ವಿಜಯ್ ಮತ್ತು ಸಂಗೀತಾ ದಂಪತಿಯ ಪುತ್ರ ಜೇಸನ್ ಸಂಜಯ್ (Jason Sanjay) ಬಗ್ಗೆ ಒಂದು ವಿಷಯ ಬಹಿರಂಗ ಆಗಿದೆ. ತಂದೆಯ ಇನ್​ಸ್ಟಾಗ್ರಾಮ್ ಖಾತೆಯನ್ನು ಜೇಸನ್ ಸಂಜಯ್ ಅನ್​ಫಾಲೋ ಮಾಡಿದ್ದಾರೆ….

Read More

ಟಾಸ್ ಗೆದ್ದಿದ್ರೆ ಕಥೆನೇ ಬೇರೆ ಇರುತ್ತಿತ್ತು..! – Kannada News | Salman ali agha post match presentation of pak vs sl match

T20 World Cup 2026: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡದ ಅಭಿಯಾನ ಅಂತ್ಯವಾಗಿದೆ. ಪಾಕ್ ಪಾಲಿಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಗೆದ್ದರೂ ನೆಟ್ ರನ್ ರೇಟ್​ನಲ್ಲಿ ಹಿಂದೆ ಉಳಿಯುವ ಮೂಲಕ ಪಾಕಿಸ್ತಾನ್ ತಂಡ ವಿಶ್ವಕಪ್​ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 212 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು 147 ರನ್​ಗಳಿಗೆ ನಿಯಂತ್ರಿಸಿದ್ದರೆ ಪಾಕಿಸ್ತಾನ್ ತಂಡಕ್ಕೆ ನೆಟ್ ರನ್ ರೇಟ್​ನಲ್ಲಿ ನ್ಯೂಝಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್​ಗೇರುವ ಅವಕಾಶವಿತ್ತು. ಆದರೆ…

Read More

Lunar Eclipse 2026: ಮಾ.03ರ ಚಂದ್ರಗ್ರಹಣ; ಗ್ರಹಣ ಕಾಲದ ಬಗ್ಗೆ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದೇನು? – Kannada News | Holi Full Moon Lunar Eclipse: Chief Priest Somasundara Dikshiths Guidance

ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಹೋಳಿ ಹುಣ್ಣಿಮೆಯಂದು ಸಂಭವಿಸುವ ಚಂದ್ರಗ್ರಹಣದ ಕುರಿತು ವಿವರಣೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಸೂರ್ಯಗ್ರಹಣದ ನಂತರ, ಹದಿನೈದು ದಿನಗಳ ಅಂತರದಲ್ಲಿ ಬರುವ ಈ ಚಂದ್ರಗ್ರಹಣವು ಪ್ರಕೃತಿ ಮತ್ತು ಪ್ರಸ್ತುತ ವಿದ್ಯಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಅವರು ತಿಳಿಸಿದ್ದಾರೆ. ಗ್ರಹಣದ ಆರಂಭ ಮತ್ತು ಯುದ್ಧದ ನಡುವೆ ಸಾಮ್ಯತೆಯನ್ನು ಗುರುತಿಸಿದ ಅವರು, ಪ್ರಸ್ತುತ ಜಾಗತಿಕ ಸಂಘರ್ಷಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಭಾರತ ದೇಶವು ಯಜ್ಞಭೂಮಿ, ಕರ್ಮಭೂಮಿ, ತಪೋಭೂಮಿ, ಜಪಭೂಮಿ…

Read More

Maharashtra Blast: ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ, 15 ಮಂದಿ ಸಾವು – Kannada News | Major Explosion at Explosives Factory in Nagpur Claims at Least 15 Lives

ನಾಗ್ಪುರ, ಮಾರ್ಚ್ 01: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, 15 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಕಲ್ಮೇಶ್ವರ ತಾಲೂಕಿನ ರೌಲ್ಗಾಂವ್ ಬಳಿ ಘಟನೆ ಸಂಭವಿಸಿದೆ. ಸ್ಫೋಟಕಗಳನ್ನು ತಯಾರಿಸುವ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟ ಇದಾಗಿದೆ. ಘಟನೆಯಲ್ಲಿ ಮಹಿಳೆಯರು ಸೇರಿ 15 ಕಾರ್ಮಿಕರು ಸಾವನ್ನಪ್ಪಿದ್ದಾರೆ. 18 ಜನರಿಗೆ ಗಂಭೀರ ಗಾಯ, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಳಗ್ಗೆ 6 ಗಂಟೆ ಪಾಳಿಗೆ ಕೆಲಸಕ್ಕೆ ಬಂದಿದ್ದ 35 ಕಾರ್ಮಿಕರು ಸ್ಥಳದಲ್ಲಿದ್ದರು. ಕಟೋಲ್ ತಹಸಿಲ್‌ನ ರೌಲ್ಗಾಂವ್‌ನಲ್ಲಿರುವ ಗಣಿಗಾರಿಕೆ ಮತ್ತು…

Read More