Headlines

ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಹೊಟ್ಟೆಯಲ್ಲಿದ್ದ ಮಗು ಸಾವು!

ಬೆಳಗಾವಿ, ಏಪ್ರಿಲ್ 13: ಜಿಲ್ಲೆಯಲ್ಲಿ ಬಿಮ್ಸ್ ವೈದ್ಯರ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ತುರಮರಿ ಗ್ರಾಮದ ಗರ್ಭಿಣಿಯಾದ ಈರಮ್ಮ ಈರಪ್ಪ ಶಿಗೀಹಳ್ಳಿ (21) ಅವರನ್ನು ಏಪ್ರಿಲ್ 10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸರಿಯಾದ ಚಿಕಿತ್ಸೆ ನೀಡದ ಕಾರಣ ಈರಮ್ಮ ಹಾಗೂ ಹೊಟ್ಟೆಯಲ್ಲಿದ್ದ ಶಿಶು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾವಿನ ಬಳಿಕ ಮಧ್ಯರಾತ್ರಿ ಸಹಿ ಪಡೆದು ದೇಹವನ್ನು ಕಳುಹಿಸಲು ಯತ್ನಿಸಿದ್ದಾಗಿ ತಿಳಿದುಬಂದಿದೆ. ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ…

Read More

ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ – Kannada News | Ram Fighting Competition in Andhra Pradesh ahead of New Year

ಹೈದರಾಬಾದ್, ಜನವರಿ 1: ಇಂದು ಹೊಸ ವರ್ಷದ (New Year Celebration) ಆಚರಣೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಂಗುಲೂರು ಮಂಡಲದ ರೇಣಿಂಗವರಂ ಗ್ರಾಮದಲ್ಲಿ ನಡೆದ ಸಾಂಪ್ರದಾಯಿಕ ಟಗರು ಸ್ಪರ್ಧೆಗಳು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿದವು. ನೆರೆಯ ಹಳ್ಳಿಗಳಿಂದ ಹಾಗೂ ಪ್ರಕಾಶಂ, ಬಾಪಟ್ಲ ಮತ್ತು ಮಾರ್ಕಪುರಂ ಜಿಲ್ಲೆಗಳಿಂದ ಸುಮಾರು 41 ಜೋಡಿ ಟಗರುಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಈ ಅಪರೂಪದ ಟಗರು ಕಾಳಗ ನೋಡಲು ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ತೆಲುಗು ದೇಶಂ ಪಕ್ಷದ ನಾಯಕ ಬೋರೆಡ್ಡಿ ಓಬುಲ್…

Read More

ಬೆಂಗಳೂರಿನಲ್ಲಿ ಮನೆ ಹುಡುಕುವುದು ಈಗ ‘ಮಿಷನ್ ಇಂಪಾಸಿಬಲ್’! ಬ್ಯಾಚುಲರ್ಸ್ ಸಂಕಷ್ಟ ಕೇಳೋರು ಯಾರು?

ಬೆಂಗಳೂರು, ಮಾ.27: ನಗರದಲ್ಲಿ ಮನೆಗಳು ಬಾಡಿಗೆಗೆ ಸಿಗುವುದು ತುಂಬಾ ಕಷ್ಟ, ಅದರಲ್ಲೂ ಬ್ಯಾಚುನರ್ಲ್​​​ಗಳಿಗೆ ಮನೆ ನೀಡಲು ಯೋಚನೆ ಮಾಡುತ್ತಾರೆ. ಮತ್ತು ಅವರ ಬಜೆಟ್​​ ಕೂಡ 10 ಸಾವಿರದ ಒಳಗೆ ಇರುತ್ತದೆ. ಆದರೆ ಇದೀಗ 10 ಸಾವಿರಕ್ಕೆ ಮನೆ ಸಿಗುವುದು ಕಷ್ಟವಾಗಿದೆ. ಈ ಬಗ್ಗೆ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸುವ ಕನಸು ಹೊತ್ತು ಬರುವವರಿಗೆ ಈಗ ‘ಬಾಡಿಗೆ ಮನೆ’ ಎನ್ನುವುದು ಮರೀಚಿಕೆಯಾಗುತ್ತಿದೆ. ನಗರದ ಐಟಿ ಹಬ್‌ಗಳ ಸುತ್ತಮುತ್ತಲಷ್ಟೇ ಅಲ್ಲದೆ, ಸಾಮಾನ್ಯ ಪ್ರದೇಶಗಳಲ್ಲೂ ಬಾಡಿಗೆ…

Read More

ಬೆತ್ತಲೆ ಓಡಾಟ, ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ: ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು – Kannada News | Wife lodges a complaint against husband alleging assault and unacceptable behavior in Bengaluru

ಬೆಂಗಳೂರು, ಡಿಸೆಂಬರ್​​ 30: ಅವರಿಬ್ಬರು ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳು. ಹೆಚ್​​ಆರ್​​ ಆಗಿದ್ದ ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿಯನ್ನು ಪ್ರೀತಿಸಿದ್ದ ಆತ ಆಕೆಯ ಮನೆಯವರನ್ನೂ ಒಪ್ಪಿಸಿದ್ದ. ಬಳಿಕ ಸೆಪ್ಟೆಂಬರ್​​ 03, 2025ರಂದು ಚಿಂತಾಮಣಿಯಲ್ಲಿ ಕುಟುಂಬಸ್ಥರೇ ನಿಂತು ಇವರ ವಿವಾಹವನ್ನೂ ನಡೆಸಿದ್ದರು. ಆದರೀಗ ಸೈಕೋ ಪತಿ ಕಾಟಕ್ಕೆ ಪತ್ನಿ ಬೆಚ್ಚಿಬಿದ್ದಿದ್ದಾಳೆ. ತಾನು ಮದುವೆಯಾಗಿದ್ದು ಇಂತವನನ್ನಾ ಎಂದು ಗೋಗರೆಯುತ್ತಿದ್ದಾಳೆ. ಹೌದು, ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ​ ಸೈಕೋ ರೀತಿ ವರ್ತಿಸುತ್ತಿರೋದನ್ನು ಕಂಡು…

Read More

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಬಿಗ್ ರಿಲೀಫ್; 3 ವರ್ಷಗಳ ನಿಷೇಧ ತೆರವು..!

ಕೇರಳ ಕ್ರಿಕೆಟ್​ನಿಂದ ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್​ಗೆ ಸುಮಾರು ಒಂದು ವರ್ಷದ ನಂತರ ಬಿಗ್ ರಿಲೀಫ್ ಸಿಕ್ಕಿದೆ. ಕೇರಳ ಕ್ರಿಕೆಟ್ ಅಸೋಸಿಯೇಷನ್​ನ ಸಾಮಾನ್ಯ ಸಭೆಯಲ್ಲಿ ಶ್ರೀಶಾಂತ್ ಕ್ಷಮೆಯಾಚಿಸಿದ ಬಳಿಕ ಅವರ ವಿರುದ್ಧ ಹೇರಿದ್ದ ನಿಷೇಧದ ಶಿಕ್ಷೆಯನ್ನು ತೆರವುಗೊಳಿಸಲಾಗಿದೆ. ವಾಸ್ತವವಾಗಿ ಕಳೆದ ವರ್ಷ ಸಂಜು ಸ್ಯಾಮ್ಸನ್ ಅವರನ್ನು ವಿಜಯ್ ಹಜಾರೆ ಟ್ರೋಫಿಗೆ ಕೇರಳ ತಂಡದಲ್ಲಿ ಆಯ್ಕೆ ಮಾಡದಿರುವುದರ ಬಗ್ಗೆ ಅಸಮಾಧಾನಗೊಂಡಿದ್ದ ಶ್ರೀಶಾಂತ್ ಕೇರಳ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ತಮ್ಮ ಸೋಶಿಯಲ್ ಮೀಡಿಯಾ…

Read More

ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ? – Kannada News | Bharat Taxi, how investment of Rs 500 from drivers can turn into profit

ನವದೆಹಲಿ, ಫೆಬ್ರುವರಿ 24: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನಿನ್ನೆ ಸೋಮವಾರ (ಫೆ. 23) ಭಾರತ್ ಟ್ಯಾಕ್ಸಿ (Bhara Taxi) ಸೇವೆಗೆ ಚಾಲನೆ ನೀಡಿದ್ದಾರೆ. ಅಮೂಲ್ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಸೇರಿ ಕಟ್ಟಿರುವ ಕಂಪನಿ ಇದು. ಅಮೂಲ್​ನ ರೀತಿಯಲ್ಲೇ ಭಾರತ್ ಟ್ಯಾಕ್ಸಿಯ ಬ್ಯುಸಿನೆಸ್ ಮಾಡಲ್ ಇದೆ. ಅಮುಲ್​ನಲ್ಲಿ ಹಾಲು ಉತ್ಪಾದಕರೇ ಮಾಲೀಕರಾಗಿದ್ದಾರೆ. ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ. ಏನಿದು ಭಾರತ್ ಟ್ಯಾಕ್ಸಿ? ಓಲಾ, ಊಬರ್, ರಾಪಿಡೋ, ನಮ್ಮ ಯಾತ್ರಿ ರೀತಿಯಲ್ಲಿ ಭಾರತ್ ಟ್ಯಾಕ್ಸಿ…

Read More

ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್, 21 ಮಂದಿ ರಕ್ಷಣೆ, 3 ಭಾರತೀಯರು ಇನ್ನೂ ನಾಪತ್ತೆ – Kannada News

ಒಮಾನ್, ಜೂನ್ 11: ಒಮಾನ್​ನಲ್ಲಿ ಭಾರತದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದೆ.  24 ಮಂದಿ ಭಾರತೀಯರ ಪೈಕಿ, 21 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಒಮಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಒಮಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ರಾಸಾಯನಿಕ ಮತ್ತು ತೈಲ ಉತ್ಪನ್ನಗಳ ಟ್ಯಾಂಕರ್ ಸೆಟ್ಟೆಬೆಲ್ಲೊ ಒಮಾನಿ ಕರಾವಳಿಯಲ್ಲಿ ಡಿಕ್ಕಿ ಹೊಡೆದಿದ್ದು, ಇದು ಅಮೆರಿಕದ ಕ್ಷಿಪಣಿ ದಾಳಿ…

Read More

ಚಂದನವನದಲ್ಲಿ ಹತ್ತು ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ – Kannada News | KFCC President Jayamala announces Chandanavana Andu Indu Mundu Seminar to solve Kannada Cinema issues

ಕನ್ನಡ ಚಿತ್ರರಂಗಕ್ಕೆ (Kannada Film Industry) ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ವತಿಯಿಂದ ಮೇ 24ರಂದು ‘ಚಂದನವನ ಅಂದು ಇಂದು ಮುಂದು’ ಎಂಬ ವಿಚಾರ ಸಂಕಿರಣವನ್ನು ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿದೆ. ಆ ಬಗ್ಗೆ ಮಂಡಳಿ ಅಧ್ಯಕ್ಷೆ ಜಯಮಾಲಾ (Jayamala) ಅವರು ಮಾಹಿತಿ ನೀಡಿದ್ದಾರೆ. ‘ಸಬ್ಸಿಡಿ, ಪ್ರಶಸ್ತಿ, ಪೈರಸಿ, ಒಟಿಟಿ, ಕಿರುತೆರೆ ಹಕ್ಕು ಮಾರಾಟ, ಚಿತ್ರಮಂದಿರಗಳು ಸೇರಿದಂತೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇವೆ….

Read More

ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ

ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 6 ರನ್​ಗಳ ರೋಚಕ ಜಯ ಸಾಧಿಸಿದೆ. ಅದು ಸಹ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ. ಮಳೆ ಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 10 ಓವರ್​ಗಳಲ್ಲಿ ಕಲೆಹಾಕಿದ್ದು 114 ರನ್​ಗಳು ಮಾತ್ರ. ಆದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ, ಸೌತ್ ಆಫ್ರಿಕಾ ತಂಡಕ್ಕೆ 10 ಓವರ್​ಗಳಲ್ಲಿ 125 ರನ್​ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ಆಫ್ರಿಕಾ…

Read More

ಬರೋಬ್ಬರಿ 1000 ವಿಕೆಟ್; ಇತಿಹಾಸ ನಿರ್ಮಿಸಿದ ಲಂಕಾ ಸ್ಪಿನ್ನರ್ – Kannada News | Malinda Pushpakumara: Sri Lankan Spinner Joins Elite 1000 First Class Wicket Club

ಶ್ರೀಲಂಕಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ (1374 ವಿಕೆಟ್‌ಗಳು), ರಂಗನ ಹೆರಾತ್ (1080 ವಿಕೆಟ್‌ಗಳು) ಮತ್ತು ದಿನುಕಾ ಹೆಟ್ಟಿಯಾರಾಚಿ (1001 ವಿಕೆಟ್‌ಗಳು) ಮಾತ್ರ ಇದ್ದರು. ಆದರೆ ಈಗ ಮಲಿಂದಾ ಪುಷ್ಪಕುಮಾರ ಕೂಡ ಈ ಪಟ್ಟಿಗೆ ಸೇರಿಕೊಂಡಿದ್ದಾರೆ. ಇನ್ನು ಜಾಗತಿಕವಾಗಿ, ಪುಷ್ಪಕುಮಾರ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 218 ನೇ ಆಟಗಾರ ಎನಿಸಿಕೊಂಡಿದ್ದಾರೆ. Source link

Read More