Headlines

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೆನೆದು ಡಾ. ಎಂ.ಸಿ. ಸುಧಾಕರ್​ ಕಣ್ಣೀರು

ದಾವಣಗೆರೆ, ಮೇ 29: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಹಿನ್ನೆಲೆ ದಾವಣಗೆರೆಯಲ್ಲಿ ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್​ ಕಣ್ಣೀರು ಹಾಕಿದ್ದಾರೆ. ಸಿದ್ದರಾಮಯ್ಯರನ್ನು ಕಳೆದ 2-3 ದಿನಗಳಿಂದ ನೋಡಲು ಆಗುತ್ತಿಲ್ಲ. ಅವರು ಎಲ್ಲಾ ವರ್ಗಗಳನ್ನು ಸಮಾನವಾಗಿ ತೆಗೆದುಕೊಂಡು ಹೋದ ನಾಯಕರಾಗಿದ್ದು, ಎಲ್ಲಾ ಸಮುದಾಯಕ್ಕೆ ಸಮಾನತೆ ನೀಡಿದ ವ್ಯಕ್ತಿ. ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ ಹಿನ್ನೆಲೆ ಸಂಪುಟ ವಿಸರ್ಜನೆಗೊಂಡಿದ್ದು, ಡಿ.ಕೆ.ಶಿವಕುಮಾರ್ ನೂತನ​ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರು ಈ ವೇಳೆ ತಿಳಿಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

‘ಟಾಕ್ಸಿಕ್’ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ – Kannada News | Sandeep Reddy Vanga praises Toxic Movie Teaser ft Yash

‘ರಾಕಿಂಗ್ ಸ್ಟಾರ್’ ಯಶ್ (Yash) ಹುಟ್ಟುಹಬ್ಬದ ಪ್ರಯುಕ್ತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಯಾವುದೇ ಸದ್ದು ಗದ್ದಲ ಇಲ್ಲದೇ ಟೀಸರ್ ಬಿಡುಗಡೆ ಮಾಡಲಾಯಿತು. ಬಿಡುಗಡೆ ಆದ ಈ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯಶ್ ಅಭಿಮಾನಿಗಳು ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದ ಸ್ಟಾರ್ ಸೆಲೆಬ್ರಿಟಿಗಳು ಕೂಡ ‘ಟಾಕ್ಸಿಕ್’ ಟೀಸರ್ (Toxic Movie Teaser) ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ‘ಅರ್ಜುನ್ ರೆಡ್ಡಿ’, ‘ಕಬೀರ್ ಸಿಂಗ್’, ‘ಅನಿಮಲ್’ ಸಿನಿಮಾಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರು…

Read More

ಹಿಂದಿ ‘ದೃಶ್ಯಂ 3’ ಮಲಯಾಳಂಗಿಂತ ಸಾಕಷ್ಟು ಭಿನ್ನ: ಬಿಡುಗಡೆಯಲ್ಲಿ ಗೊಂದಲ – Kannada News | Hindi Drishyam 3 will be very different from Malayalam Drishyam 3

ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ’. ಮೋಹನ್​​ಲಾಲ್ (Mohanlal) ನಟಿಸಿ ಜೀತು ಜೋಸೆಫ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಭಾರತದ ಬೇರೆ ಬೇರೆ ಭಾಷೆಗಳು ಸೇರಿದಂತೆ ಹಲವು ವಿದೇಶಿ ಭಾಷೆಗಳಲ್ಲಿಯೂ ರೀಮೇಕ್ ಆಗಿ ಬಹುತೇಕ ಎಲ್ಲೆಡೆ ಸೂಪರ್ ಹಿಟ್ ಆಯ್ತು. ಬಳಿಕ ‘ದೃಶ್ಯಂ 2’ ಸಿನಿಮಾ 2022 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಯ್ತು. ಈ ಸಿನಿಮಾದ ರೀಮೇಕ್ ಅನ್ನು ಹಿಂದಿಯಲ್ಲಿ ಅಜಯ್ ದೇವಗನ್ ಮಾಡಿದ್ದರು. ಇದೀಗ ‘ದೃಶ್ಯಂ’ ಸಿನಿಮಾದ ಮೂರನೇ ಭಾಗ ಬಿಡುಗಡೆ…

Read More

Shani Mahadasha: ಶನಿಯ ಮಹಾದಶಾ ಪ್ರಾರಂಭವಾಗುವ ಮುನ್ನ ಕಂಡುಬರುವ ಲಕ್ಷಣಗಳಿವು! – Kannada News | Shani Mahadasha: Understand Its Impact and Effective Remedies for Challenges

ಹಿಂದೂ ಧರ್ಮದಲ್ಲಿ ಶನಿ ದೇವರನ್ನು ನ್ಯಾಯದ ದೇವರು ಹಾಗೂ ಕರ್ಮಫಲದ ದಾತನೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯು ಜೀವನದಲ್ಲಿ ಮಾಡಿದ ಸತ್ಕರ್ಮ ಮತ್ತು ದುಷ್ಕರ್ಮಗಳಿಗೆ ಅನುಗುಣವಾಗಿ ಫಲ ನೀಡುವವನೆಂಬ ನಂಬಿಕೆ ಇದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ನವಗ್ರಹಗಳಲ್ಲಿ ಅತ್ಯಂತ ಪ್ರಭಾವಶಾಲಿ ಗ್ರಹವೆಂದು ಪರಿಗಣಿಸಲಾಗಿದ್ದು, ಅವರ ಸಂಚಾರ, ಸಾಡೇ ಸತಿ, ಧೈಯ್ಯಾ ಹಾಗೂ ಮಹಾದಶೆಗಳು ಮಾನವನ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಶನಿಯ ಹೆಸರು ಕೇಳಿದಾಗ ಕೆಲವರು ಭಯಪಡುತ್ತಾರೆ, ಆದರೆ ಜ್ಯೋತಿಷ್ಯವು ಶನಿ ದಂಡನೆ ಮಾತ್ರ ನೀಡುವುದಿಲ್ಲ,…

Read More

ಮಧ್ಯರಾತ್ರಿ ಸುರಿದ ಮಳೆ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮನೆಗೆ ನುಗ್ಗಿದ ನೀರು: ಭಾರಿ ಅವಾಂತರ

ಶಿವಮೊಗ್ಗ, ಏಪ್ರಿಲ್​​ 01: ನಿನ್ನೆ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ನಗರದ ಶರಾವತಿ ನಗರ ಬಡಾವಣೆಯ ಮನೆಯೊಂದಕ್ಕೆ ಚಾನಲ್ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ರಾತ್ರಿ 12 ಗಂಟೆಯ ವೇಳೆಗೆ ಗುಡುಗು ಸಮೇತ ಆರಂಭವಾದ ಮಳೆ, ಬೆಳಗ್ಗಿನ ಜಾವ ಸುಮಾರು 3 ಗಂಟೆಯವರೆಗೂ ಸುರಿದಿದೆ. ಭಾರಿ ಮಳೆ ಹಿನ್ನೆಲೆ ತುಂಗಾ ಚಾನಲ್​​ನಿಂದ ಉಕ್ಕಿ ಹರಿದ ನೀರು ತಗ್ಗುಪ್ರದೇಶದಲ್ಲಿರುವ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ನೆಂದು ತೊಪ್ಪೆಯಾಗಿದ್ದು, ಹಾಸಿಗೆ, ಮಂಚ, ಅಡುಗೆ ಮನೆಯ ಬಹುತೇಕ…

Read More

‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ – Kannada News | Naa Ninna Bidalaare Twist: Durga and Ambika Are Sisters! Shocking Revelation

‘ನಾ ನಿನ್ನ ಬಿಡಲಾರೆ’ ಧಾರಾವಾಹಿ (Na Ninna Bidalre) ಪ್ರಮುಖ ಟ್ವಿಸ್ಟ್​​ಗಳನ್ನು ಪಡೆದು ಸಾಗುತ್ತಿದೆ. ದುರ್ಗಾ ಹಾಗೂ ಅಂಬಿಕಾ ಮಧ್ಯೆ ಸಾಕಷ್ಟು ಬಾಂಧವ್ಯ ಬೆಳೆದಿತ್ತು. ಅಂಬಿಕಾ ಆತ್ಮವಾದರೂ ಅದು ಕಾಣಿಸುತ್ತಾ ಇದ್ದಿದ್ದು ದುರ್ಗಾಗೆ ಮಾತ್ರ ಆಗಿತ್ತು. ಹೀಗೇಕೆ ಎಂಬ ಪ್ರಶ್ನೆ ದುರ್ಗಾಗೆ ಅನೇಕ ಬಾರಿ ಕಾಡಿದ್ದೂ ಇದೆ ಎಂದರೂ ತಪ್ಪಾಗಲಾರದು. ಈಗ ಈ ಪ್ರಶ್ನೆಗೆ ಉತ್ತರ ಏನೋ ಸಿಕ್ಕಿದೆ. ಆದರೆ, ಅದು ತುಂಬಾ ತಡವಾಯಿತೇ ಎಂಬ ಪ್ರಶ್ನೆ ಮೂಡಿದೆ. ಮಾಳವಿಕಾ ಮಾಡುತ್ತಿದ್ದ ಮಾಟದ ತಂತ್ರಕ್ಕೆ ಅಂಬಿಕಾ ಬಲಿಪಶುವಾಗಿದ್ದು…

Read More

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ – Kannada News | Amid Jana Nayagan Release delay Amazon prime video to Take Legal Action Against Thalapathy Vijay Movie

ಜನ ನಾಯಗನ್ (Jana Nayagan) ಸಿನಿಮಾ ಸಂಕಷ್ಟದಲ್ಲಿದೆ. ಈ ಚಿತ್ರ ಜನವರಿ 9ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿಯಿಂದ ಆದ ಸಮಸ್ಯೆಯಿಂದ ತೊಂದರೆ ಎದುರಾಗುತ್ತಿದೆ.ಸಿನಿಮಾ ರಿಲೀಸ್ ಆದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ಫ್ಯಾನ್ಸ್ ಇದ್ದಾರೆ. ಈಗ ಚಿತ್ರ ಒಟಿಟಿ ಪ್ಲಾಟ್​​ಫಾರ್ಮ್ ಕಡೆಯಿಂದ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ. ‘ಜನ ನಾಯಗನ್’ ಸಿನಿಮಾ ದಳಪತಿ ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ. ಇದಾದ ಬಳಿಕ ಅವರು ರಾಜಕೀಯದ…

Read More

ಇಂದು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಸ್ಥಾನಗಳಿಗೆ ಅವಿರೋಧ ಆಯ್ಕೆ; ಮತ್ತಷ್ಟು ಭದ್ರವಾಗಲಿದೆ ಬಿಜೆಪಿ ಸ್ಥಾನ

ನವದೆಹಲಿ, ಮಾರ್ಚ್ 16: ಇಂದು ಸೋಮವಾರ 10 ರಾಜ್ಯಗಳಲ್ಲಿನ 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ (Rajya Sabha polls) ನಡೆಯುತ್ತಿದೆ. ಈ ಪೈಕಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಉಳಿದ 11 ಅಭ್ಯರ್ಥಿಗಳ ಆಯ್ಕೆಯು ಮತದಾನದ ಮೂಲಕ ನಿರ್ಧಾರ ಆಗಲಿದೆ. ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಆಗಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಚುನಾವಣೆ ಎದುರಿಸುತ್ತಿರುವ 37 ರಾಜ್ಯಸಭಾ ಸ್ಥಾನಗಳು ಮಹಾರಾಷ್ಟ್ರ: 7 ತಮಿಳುನಾಡು: 6 ಪಶ್ಚಿಮ…

Read More

ಶಾರುಖ್ ಸಹೋದರಿ ಯಾರು? ವಿವಾಹ ಆಗದೆ ಉಳಿಯಲು ಕಾರಣವಾಯ್ತು ಆ ಘಟನೆ – Kannada News | Shah Rukh Khan’s Pillar: Shahnaz Lalarukh Khan’s Untold Story and Private Life

ಸಹೋದರಿ ಹಾಗೂ ಕುಟುಂಬದ ಜೊತೆ ಶಾರುಖ್ ಖಾನ್ ಬಾಲಿವುಡ್‌ನ ನಟ ಶಾರುಖ್ ಖಾನ್ ಅವರ (Shah Rukh Khan) ಯಶಸ್ಸಿನ ಹಿಂದೆ ಅವರ ಕುಟುಂಬ ಇದೆ. ವಿಶೇಷವಾಗಿ ಅವರ ಅಕ್ಕ ಶಹನಾಜ್ ಖಾನ್, ಇಡೀ ಖಾನ್ ಕುಟುಂಬದ ಬಲವಾದ ಆಧಾರಸ್ತಂಭವಾಗಿದ್ದಾರೆ. ಆದರೆ, ಅವರು ಯಾವಾಗಲೂ ಮಾಧ್ಯಮದ ಬೆಳಕಿನಿಂದ ಮತ್ತು ಜನಮನದಿಂದ ದೂರವಿರಲು ಬಯಸುತ್ತಾರೆ. ಅವರು ಈವರೆಗೆ ಮದುವೆ ಆಗಿಲ್ಲ. 1960 ರಲ್ಲಿ ಜನಿಸಿದ ಶಹನಾಜ್, ಶಾರುಖ್ ಖಾನ್ ಅವರಿಗಿಂತ ಸುಮಾರು ಐದರಿಂದ ಆರು ವರ್ಷ ದೊಡ್ಡವರು. ಶಹನಾಜ್…

Read More

‘ಗ್ಯಾಂಗ್ಸ್ ಆಫ್ ಯುಕೆ’ ಸಿನಿಮಾದಲ್ಲಿ ರಕ್ತದ ಹೊಳೆ; ಟ್ರೇಲರ್ ತೋರಿಸಿ ಸ್ಪಷ್ಟನೆ ನೀಡಿದ ಚಿತ್ರತಂಡ

‘ಡೆಡ್ಲಿ ಸೋಮ’, ‘ಮಾದೇಶ’ ರೀತಿಯ ಮಾಸ್ ಸಿನಿಮಾಗಳನ್ನು ಮಾಡಿದ ನಿರ್ದೇಶಕ ರವಿ ಶ್ರೀವತ್ಸ ಅವರು ಈ ಬಾರಿ ಇನ್ನಷ್ಟು ಗಂಭೀರವಾದ ಕತೆಯನ್ನು ಪ್ರೇಕ್ಷಕರಿಗೆ ತೋರಿಸಲು ಬರುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ‘ಗ್ಯಾಂಗ್ಸ್ ಆಫ್ ಯುಕೆ’ (Gangs Of UK) ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಆ ವೇಳೆ ರವಿ ಶ್ರೀವತ್ಸ (Ravi Srivatsa) ಹಾಗೂ ಚಿತ್ರತಂಡದವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು….

Read More