ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬಳಿಕ ಡಿವೈಡರ್‌ಗೆ ಗುದ್ದಿ ಪಲ್ಟಿ: ಓರ್ವ ವ್ಯಕ್ತಿ ಸಾವು – Kannada News | Fatal Srinivaspur Car Crash: One Dead, Car Overturns After Hitting Bike at Hakkipikki Colony

ಕೋಲಾರ, ಮಾ.4: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಬಶೀರ್ (40) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ…

Read More

ಸಚಿನ್ ತೆಂಡೂಲ್ಕರ್ ಸೊಸೆ ಸಾನಿಯಾ ಎಷ್ಟು ಶ್ರೀಮಂತೆ ಗೊತ್ತಾ?

ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್ ಅವರನ್ನು ವಿವಾಹವಾದರು. ಅರ್ಜುನ್ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಮದುವೆಯ ನಂತರ ಅರ್ಜುನ್ ಮತ್ತು ಸಾನಿಯಾ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಹಾಗಾದರೆ ಸಚಿನ್ ತೆಂಡೂಲ್ಕರ್ ಅವರ ಸೊಸೆ ಎಷ್ಟು ಕೋಟಿ ಮಾಲೀಕರು ಗೊತ್ತಾ? ಆ ಬಗ್ಗೆ ಇಲ್ಲಿದೆ ವಿವರ. ಅರ್ಜುನ್ ಪ್ರಸ್ತುತ ಈಗಷ್ಟೇ ಬೌಲರ್ ಆಗಿ…

Read More

ಅನುಕೂಲಕರ ಟ್ಯಾರಿಫ್ ದರ ಇಲ್ಲದೇ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ವಾಣಿಜ್ಯ ಸಚಿವ ಪಿಯೂಷ್ ಗೋಯಲ್ – Kannada News | Piyush Goyal says, no trade deal with USA until having tariff advantage

ನವದೆಹಲಿ, ಜೂನ್ 25: ಭಾರತದ ರಫ್ತಿಗೆ ಹಿನ್ನಡೆಯಾಗುವಂತಹ ರೀತಿಯ ವ್ಯಾಪಾರ ಒಪ್ಪಂದವನ್ನು ಅಮೆರಿಕದೊಂದಿಗೆ ಮಾಡಿಕೊಳ್ಳುವುದಿಲ್ಲ ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ (Piyush Goyal) ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತದ ರಫ್ತು ಪ್ರತಿಸ್ಪರ್ಧಿ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅನುಕೂಲಕರ ಸುಂಕದ ವ್ಯವಸ್ಥೆ (Comparative Tariff Advantage) ಖಾತ್ರಿಯಾಗುವವರೆಗೂ ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿಸುವುದಿಲ್ಲ ಎಂದು ಕೈಗಾರಿಕಾ ಸಚಿವರೂ ಆದ ಗೋಯಲ್ ಹೇಳಿದ್ದಾರೆ. ದೆಹಲಿಯಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಜೇಮಿಸನ್ ಗ್ರೀರ್ ಅವರೊಂದಿಗೆ ಮಾತುಕತೆ ನಡೆಸಿದ…

Read More

ಚೆನ್ನೈ ವಿರುದ್ಧ ಗೆದ್ದು ಫೈನಲ್​ಗೆ ಏರಿದ ಕರ್ನಾಟಕ ಬುಲ್ಡೋಜರ್ಸ್​; ಒಲಿಯುತ್ತಾ ಕಪ್? – Kannada News | Karnataka Bulldozers Enters CCL Final After Defeating Karnataka Chennai Kings in semifinal

ಕರ್ನಾಟಕ ಬುಲ್ಡೋಜರ್ಸ್​ಗೆ ಜಯ Image Credit source: Hotstar ಕಳೆದ ವರ್ಷದ ಸಿಸಿಎಲ್​​ನಲ್ಲಿ (CCL) ರನ್ನರ್ ಅಪ್ ಆಗಿರೋ ಕರ್ನಾಟಕ ಬುಲ್ಡೋಜರ್ಸ್ ತಂಡವು ಒಂದು ಪಂದ್ಯವನ್ನೂ ಸೋಲದೇ ಈ ಬಾರಿ ಫಿನಾಲೆಗೆ ಏರಿರುವುದು ವಿಶೇಷ. ಚೆನ್ನೈ ಕಿಂಗ್ಸ್ ವಿರುದ್ಧ ಜನವರಿ 31ರಂದು ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದರು ಮತ್ತು ಫಿನಾಲೆಗೆ ಏರಿದರು. ಕಿಚ್ಚ ಸುದೀಪ್ ಅವರ ನೇತೃತ್ವದ ತಂಡವು ಸಾಕಷ್ಟು ಉತ್ತಮವಾಗಿ ಕಾಣಿಸುತ್ತಿದೆ. ಈ ಬಾರಿ ಅವರು ಕಪ್ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ. ಮೊದಲ ಮೂರು…

Read More

ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ: ವೀರಣ್ಣ ಚರಂತಿಮಠ

ಬಾಗಲಕೋಟೆ, ಏ.9: ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಬೆಳ್ಳಂಬೆಳಿಗ್ಗೆಯೇ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಕುಟುಂಬ ಸಮೇತರಾಗಿ ಮತದಾನ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಗೆಲುವಿನ ಕುರಿತು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದ ವೀರಣ್ಣ ಚರಂತಿಮಠ ಅವರು, ಈ ಬಾರಿಯ ವಾತಾವರಣ ಚೆನ್ನಾಗಿದೆ ಎಂದರು. ಇದೇ ವೇಳೆ, ಕಾಂಗ್ರೆಸ್ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್‌ನವರು…

Read More

Video: ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ – Kannada News | Karnataka Teacher Uday Makes Students Wash Car; Education Dept Acts

ಉತ್ತರ ಕನ್ನಡ, ಡಿ.30: ಶಾಲೆ ವಿದ್ಯಾರ್ಥಿಗಳಿಂದ ಕಾರು ತೊಳೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಿಕ್ಷಕ ಉದಯ್​​ ವಿದ್ಯಾರ್ಥಿಗಳಿಂದ ಶಾಲೆ ಮಕ್ಕಳಿಂದ ಕಾರು ತೊಳೆಸಿದ್ದಾರೆ. ಶಾಲಾ ಅವಧಿಯಲ್ಲೇ ತನ್ನ ಕಾರು ತೊಳೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಮಕ್ಕಳು ಕಾರು ಕ್ಲಿನ್​​ ಮಾಡುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ಶಿಕ್ಷಕ ಉದಯ್​​​​​​ ಇಂತಹ ಕೆಲಸ ಮಾಡಿಸಿದ್ದರು ಎಂದು ಹೇಳಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು…

Read More

ಫ್ಲೋರಿಡಾ ಗಾಲ್ಫ್​ ಕೋರ್ಸ್​​ನಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ – Kannada News | Ryan: Man Convicted in Trump Assassination Attempt Sentenced to Life in Prison

ವಾಷಿಂಗ್ಟನ್, ಫೆಬ್ರವರಿ 05: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಪ್ಟೆಂಬರ್ 15, 2024 ರಂದು ವೆಸ್ಟ್ ಪಾಮ್ ಬೀಚ್‌ನ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಹತ್ಯೆ ಯತ್ನ ನಡೆದಿತ್ತು. ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಐಲೀನ್ ಕ್ಯಾನನ್ ಫೋರ್ಟ್​ ಪಿಯರ್ಸ್​ ನ್ಯಾಯಾಲಯದಲ್ಲಿ ರಯಾನ್ ರೌತ್‌ಗೆ ಶಿಕ್ಷೆಯನ್ನು ಪ್ರಕಟಿಸಿದರು. ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರು ಎಲ್ಲಾ ಆರೋಪಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಸ್ವಲ್ಪ ಸಮಯದ ನಂತರ ರೌತ್…

Read More

ಕೆಎಸ್‌ಆರ್‌ಟಿಸಿ ಭರ್ಜರಿ ಕಾರ್ಯಾಚರಣೆ: ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ – Kannada News | KSRTC Collects Around Rs 9 Lakh Fine From Ticketless Passengers in Month Long Crackdown

ಬೆಂಗಳೂರು, ಜೂನ್ 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಕದ್ದುಮುಚ್ಚಿ ಪ್ರಯಾಣಿಸುವವರ ವಿರುದ್ಧ ಸಾರಿಗೆ ಸಂಸ್ಥೆ ಮೇ ತಿಂಗಳಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜಾಗೃತ ದಳದ ಸಿಬ್ಬಂದಿ ನಡೆಸಿದ ದಿಢೀರ್ ತಪಾಸಣೆಯ ವೇಳೆ ಸಿಕ್ಕಿಬಿದ್ದ ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆಯ ಆದಾಯಕ್ಕೆ ನಷ್ಟ ಉಂಟುಮಾಡುವವರನ್ನು ಪತ್ತೆ ಹಚ್ಚಲು ಈ ವಿಶೇಷ…

Read More

ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಸ್ಟಾರ್ ನಟ ರಣ್​​ಬೀರ್ ಕಪೂರ್: ಸಿನಿಮಾ ಯಾವುದು? – Kannada News | Ranbir Kapoor to act in Dhoom 4 as villain here is the detail in Kannada

ರಣ್​​ಬೀರ್ ಕಪೂರ್ (Ranbir Kapoor) ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಕಳೆದ ಕೆಲ ವರ್ಷಗಳಲ್ಲಿ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಇವರು ನೀಡಿದ್ದಾರೆ. ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಅನಿಮಲ್ ಪಾರ್ಕ್’ ಚಿತ್ರೀಕರಣವೂ ಶೀಘ್ರವೇ ಪ್ರಾರಂಭ ಆಗಲಿದೆ. ಬಾಲಿವುಡ್​ನ ಸೂಪರ್ ಸ್ಟಾರ್ ಆಗಿರುವ ರಣ್​​ಬೀರ್ ಕಪೂರ್ ವಿಲನ್ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಆದರೆ ರಣ್​​ಬೀರ್ ನಟಿಸುತ್ತಿರುವುದು ಸಾಮಾನ್ಯ ವಿಲನ್ ಆಗಿ ಅಲ್ಲ. ರಣ್​​ಬೀರ್ ಕಪೂರ್ ವಿಲನ್ ಆಗುತ್ತಿರುವುದು ‘ಧೂಮ್’ ಸಿನಿಮಾ ಸರಣಿಯ ಹೊಸ ಸಿನಿಮಾನಲ್ಲಿ….

Read More

ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು – Kannada News | A Man Kills 64 Year Old Woman for money In Davanagere

ದಾವಣಗೆರೆ, (ಫೆಬ್ರವರಿ 23): ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಇದೇ ತಿಂಗಳ 2ರಂದು ಗ್ರಾಮಸ್ಥರೆಲ್ಲ ಊರ ಹಬ್ಬದ ಖುಷಿಯಲ್ಲಿದ್ದರು. ಆದ್ರೆ ಮಾರನೇ ದಿನವೇ ಗ್ರಾಮದ 64 ವರ್ಷದ ಕಮಲಮ್ಮ ಮೃತಪಟ್ಟಿದ್ಳು. ಒಂಟಿ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂದುಕೊಂಡಿದ್ದರು. ಆದ್ರೆ, ಅಂತ್ಯಕ್ರಿಯೆ ಹೊತ್ತಲ್ಲಿ ವೃದ್ಧೆಯ ಮೈಮೇಲಿದ್ದ ಒಡವೆ ಕಾಣೆಯಾಗಿರುವುದು ಸಂಬಂಧಿಯೊಬ್ಬರಿಗೆ ಸಂಶಯ ಬಂದಿದೆ. ಈ ವಿಷಯ ತಿಳಿದು ಅಖಾಡಕ್ಕಿಳಿದ ಪೊಲೀಸರು ವೃದ್ಧೆಯ ಸಾವಿನ ರಹಸ್ಯ ಬಯಲಿಗೆ ಬಂದಿದ್ದು, ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿಲ್ಲ. ಬದಲಾಗಿ ಅಭಿಷೇಕ್ ಎನ್ನುವಾತನೇ ಕೊಲೆ…

Read More