ವಿಜಯ್ ಸಿಎಂ ಆಗುವುದು ಖಚಿತ; ಕೊನೆಗೂ ಟಿವಿಕೆಗೆ ವಿಸಿಕೆ, ಮುಸ್ಲಿಂ ಲೀಗ್ ಬೆಂಬಲ – Kannada News | Tamil Nadu government formation Vijay set to become CM as VCK and IUML extends support to TVK
ಚೆನ್ನೈ, ಮೇ 9: ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಸರ್ಕಸ್ ಬಗೆಹರಿದಂತಾಗಿದೆ. ಸರ್ಕಾರ ರಚಿಸಲು ಟಿವಿಕೆಗೆ ವಿಸಿಕೆ ನಾಯಕ ತಿರುಮಾವಲವನ್ ಬೆಂಬಲ ಪತ್ರವನ್ನು ನೀಡಿದ್ದಾರೆ. ಹಾಗೇ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕೂಡ ಬೇಷರತ್ತಾದ ಬೆಂಬಲ ನೀಡಲಿದೆ. ಬೆಳಗ್ಗೆಯಿಂದ ಟಿವಿಕೆ ಮತ್ತು ವಿಸಿಕೆ ನಾಯಕರು ಪ್ರತ್ಯೇಕವಾಗಿ ತಮ್ಮ ಶಾಸಕರ ಜೊತೆ ಸಭೆ ನಡೆಸಿದ್ದರು. ವಿಸಿಕೆ ಟಿವಿಕೆಗೆ ಬೆಂಬಲ ನೀಡಿರುವುದರಿಂದಾಗಿ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. ಇಂದು ಸಂಜೆ 6 ಗಂಟೆಗೆ ಪತ್ರಿಕಾ ಹೇಳಿಕೆ ಪ್ರಕಟಿಸಲಾಗುವುದು. ಈಗಾಗಲೇ ಟಿವಿಕೆ ಕಾರ್ಯಕರ್ತರು…