Headlines

ನಾನಾ… ಹೌದು ನೀನೇ… ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!

ವುಮೆನ್ಸ್ ಪ್ರೀಮಿಯರ್ ಲೀಗ್​ನ 7ನೇ ಪಂದ್ಯದಲ್ಲೂ ರಿಟೈರ್ಡ್ ಔಟ್ ಸದ್ದು ಮಾಡಿದೆ. ಈ ಬಾರಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮರಳಿದ್ದು ಹರ್ಲೀನ್ ಡಿಯೋಲ್. ಮುಂಬೈನ ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಯುಪಿ ವಾರಿಯರ್ಸ್ ಪರ ಹರ್ಲೀನ್ ಡಿಯೋಲ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ 36 ಎಸೆತಗಳನ್ನು ಎದುರಿಸಿದ ಹರ್ಲೀನ್ 7 ಫೋರ್​ಗಳೊಂದಿಗೆ 47 ರನ್​…

Read More

ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದು ಬಂದ ತೇಜಸ್ವಿ ಸೂರ್ಯ! – Kannada News | Tejasvi Surya Protests Bengaluru Metro Fare Hike, Citing Karnataka Governments Empty Treasury

ಬೆಂಗಳೂರು, ಫೆಬ್ರುವರಿ 09: ನಗರದಲ್ಲಿ ಮೆಟ್ರೋ ದರ ಏರಿಕೆಗೆ ಬ್ರೇಕ್ ಬಿದ್ದ ಬೆನ್ನಲ್ಲೇ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ (Tejasvi Surya) ಆರ್.ವಿ. ರೋಡ್ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಖಾಲಿ ಟ್ರಂಕ್ ಒಂದನ್ನು ಹಿಡಿದು ಬಂದ ಅವರು, ಇದು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಪ್ರತೀಕವಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿದ ಸೂರ್ಯ, ಮೆಟ್ರೋಗೆ ನೀಡುತ್ತಿದ್ದ ನೆರವನ್ನು ನಿಲ್ಲಿಸಿರುವುದು ದರ ಏರಿಕೆಗೆ ಕಾರಣವಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ…

Read More

ಕ್ಷೇತ್ರ ಪುನರ್ ವಿಂಗಡಣೆಯಾದರೆ ನಿಜಕ್ಕೂ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಾ? ಸ್ಥಾನಗಳ ಲೆಕ್ಕಾಚಾರ ಇಲ್ಲಿದೆ – Kannada News | Delimitation Became Flashpoint Between Centre And South Indian States what New Numbers says

ನವದೆಹಲಿ, ಏಪ್ರಿಲ್ 15: ಪ್ರಸ್ತಾವಿತ ಸೀಮಾ ನಿರ್ಣಯದ (Delimitation) ಕುರಿತಾದ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ದಕ್ಷಿಣ ಭಾರತದ ರಾಜ್ಯಗಳಿಂದ ಹೆಚ್ಚುತ್ತಿರುವ ಪ್ರತಿರೋಧವನ್ನು ಎದುರಿಸುತ್ತಿದೆ. ಕರ್ನಾಟಕ, ತೆಲಂಗಾಣ, ತಮಿಳುನಾಡು ಕ್ಷೇತ್ರ ಮರು ವಿಂಗಡಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದ ತಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿವೆ. ಈ ಸೀಮಾ ನಿರ್ಣಯ ಜಾರಿಯಾದರೆ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಆಗುವ ಪರಿಣಾಮಗಳೇನು? ಜನಸಂಖ್ಯೆ ಆಧಾರಿತ ಸೀಮಾ ನಿರ್ಣಯವು ಉತ್ತರದ ರಾಜ್ಯಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ದಕ್ಷಿಣದ ರಾಜ್ಯಗಳ…

Read More

ಸಿನಿಮಾ ಪ್ರಚಾರದ ಹೆಸರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಗಿಮಿಕ್ ಮಾಡೋರೇ ಹುಷಾರ್: ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್ – Kannada News | Bengaluru Police Commissioner Seemanth Kumar Singh Warns Against Social Media Gimmicks in the Name of Movie Promotions

ಬೆಂಗಳೂರು, ಫೆಬ್ರವರಿ 27: ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಸಿನಿಮಾ ಪ್ರಚಾರದ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಮಿತಿಮೀರಿದ ಗಿಮಿಕ್‌ಗಳ ಬಗ್ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಸಿನಿಮಾಗಳನ್ನು ಪ್ರಚಾರ ಮಾಡುವ ಸಲುವಾಗಿ ಕೆಲವು ವ್ಯಕ್ತಿಗಳು ಅಪಾಯಕಾರಿ ಮತ್ತು ಹುಚ್ಚಾಟದ ಕೃತ್ಯಗಳಲ್ಲಿ ತೊಡಗುತ್ತಿರುವ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಸಿನಿಮಾ ಪ್ರಚಾರದ ಒಂದು ನಿದರ್ಶನದಲ್ಲಿ, ಪೆಟ್ರೋಲ್ ಕುಡಿಯುವಂತಹ ಹುಚ್ಚಾಟದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ನಂತರ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂದಿತ್ತು….

Read More

ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್! ಹೆಂಡ್ತಿ ಮೊಬೈಲ್​ಲಿ ಮಾಲ್ವೇರ್ ಅಳವಡಿಸಿದ್ದಾತನ ವಿರುದ್ಧ ಪೊಲೀಸರಿಗೆ ದೂರು – Kannada News | Husband Secretly Installed Malware on Wife’s Phone to Track Location in Bengaluru, Police Complaint Filed

ಬೆಂಗಳೂರು, ಜನವರಿ 27: ಗಂಡ-ಹೆಂಡತಿ ಇಬ್ಬರೂ ದೂರವಾಗಿದ್ದರು. ಆದರೆ, ಮಗುವನ್ನು ನೋಡಲು ಪತ್ನಿ ಮನೆಗೆ ಹೋಗಲು ಪತಿಗೆ ನ್ಯಾಯಾಲಯ ಅನುಮತಿ ಕೊಟ್ಟಿತ್ತು. ಹೀಗೆ ಆಕೆಯ ಮನೆಗೆ ತೆರಳುತ್ತಿದ್ದ ಪತಿ ಮಗು ನೋಡುವ ನೆಪದಲ್ಲಿ ಪತ್ನಿಯ ಮೊಬೈಲ್‌ನಲ್ಲಿ ಮಾಲ್ವೇರ್ ಆ್ಯಪ್ ಅಳವಡಿಸಿ ಆಕೆಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದ. ಇದೀಗ ಪತಿಯ ವಿರುದ್ಧ ಪತ್ನಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಕೌಟುಂಬಿಕ ಕಲಹದಿಂದ ಪತಿ-ಪತ್ನಿ ದೂರವಾಗಿದ್ದು, ನ್ಯಾಯಾಲಯದ ಆದೇಶದಂತೆ ಪತಿ ಅಮೇಲ್ ವಿ. ನಾಯರ್ ಅವರಿಗೆ ವಾರಕ್ಕೊಮ್ಮೆ ಮಗುವನ್ನು…

Read More

ಭಾರತದ ಟಿ20 ನಾಯಕನಾಗಿ ಶ್ರೇಯಸ್ ಅಯ್ಯರ್​ ಪ್ರಯಾಣ ಇಷ್ಟರಲ್ಲೇ ಅಂತ್ಯ – Kannada News | Shreyas Iyer’s India T20 Captaincy: Is Shubman Gill the Next Leader After Asian Games?

ರೆವ್ ಸ್ಪೋರ್ಟ್ಸ್ ವರದಿಯ ಪ್ರಕಾರ, ಆಯ್ಕೆ ಸಮಿತಿಯು ಶುಭ್​ಮನ್ ಗಿಲ್ ಅವರನ್ನು ಟಿ20 ತಂಡಕ್ಕೂ ಮರಳಿ ಕರೆತಂದು ಅವರಿಗೆ ನಾಯಕತ್ವ ವಹಿಸುವ ಬಗ್ಗೆ ಚಿಂತಿಸಲಾರಂಬಿಸಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟದವರೆಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಆಯ್ಕೆದಾರರು ಅಂತಿಮವಾಗಿ ನಿರ್ಧರಿಸಿದ್ದು, ಈ ಕ್ರೀಡಾಕೂಟ ಮುಗಿದ ಬಳಿಕ ಇವರಿಬ್ಬರಲ್ಲಿ ಒಬ್ಬರನ್ನು ಟಿ20 ತಂಡದ ಖಾಯಂ ನಾಯಕನಾಗಿ ನೇಮಿಸುವ ಇರಾದೆಯಲ್ಲಿ ಆಯ್ಕೆ ಸಮಿತಿ ಇದೆ ಎಂದು ವರದಿಯಾಗಿದೆ (PC-PTI). Source link

Read More

 ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್:​ 12 ಅಂಕಗಳು ಕಡಿತ..! – Kannada News | England docked 12 WTC points

ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಿಗ್ ಶಾಕ್ ನೀಡಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸದ (ಸ್ಲೋ ಓವರ್ ರೇಟ್) ಕಾರಣಕ್ಕಾಗಿ ಇಂಗ್ಲೆಂಡ್‌ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC)  ಸರಣಿಯ 12 ಅಂಕಗಳನ್ನು ಕಡಿತಗೊಳಿಸಲಾಗಿದೆ. ಹಾಗೆಯೇ ಆಟಗಾರರಿಗೆ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಿದ್ದಾರೆ. 12 ಅಂಕಗಳು ಕಡಿತವೇಕೆ? ವಿಶ್ವ…

Read More

ನವ ಭಾರತದ ನಾಯಕತ್ವ ಈಗ ಮಹಿಳೆಯರ ಕೈಗೆ: ಸರ್ವಪಕ್ಷಗಳ ಸಹಕಾರದೊಂದಿಗೆ ಇತಿಹಾಸ ಬರೆಯಲು ದೇಶ ಸಿದ್ಧ: ಪ್ರಧಾನಿ ಮೋದಿ ಜೈಕಾರ

ನವದೆಹಲಿ, ಏಪ್ರಿಲ್ 13: ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತಕ್ಕೆ ಹತ್ತಿರದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ‘‘ಇದು 21 ನೇ ಶತಮಾನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಾನು ಬಹಳ ಖುಷಿಯಿಂದ ಹೇಳುತ್ತಿದ್ದೇನೆ, ಇದು ಮಹಿಳಾ ಶಕ್ತಿಗೆ ಸಮರ್ಪಿತವಾಗಿದೆ. ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತಕ್ಕೆ ಹತ್ತಿರದಲ್ಲಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ಚರ್ಚಿಸಿ ಸುಮಾರು ನಲವತ್ತು ವರ್ಷಗಳು ಕಳೆದಿವೆ. ಇದರಲ್ಲಿ…

Read More

ಈದ್ ಹಬ್ಬದ ದಿನವೇ ಜೆರುಸಲೆಮ್ ಮೇಲೆ ಇರಾನ್ ಕ್ಷಿಪಣಿ ದಾಳಿ

ಜೆರುಸಲೇಂ, ಮಾರ್ಚ್ 21: ಈದ್ ಅಲ್-ಫಿತರ್ ದಿನದಂದೇ ಜೆರುಸಲೇಂ ಮೇಲೆ ಇರಾನಿನ (Iran War) ಕ್ಷಿಪಣಿ ದಾಳಿ ನಡೆದಿದೆ. ಅಲ್-ಅಕ್ಸಾ ಮಸೀದಿಯಿಂದ ಕೆಲವೇ ನೂರು ಮೀಟರ್ ದೂರದಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ನೂರಾರು ಮುಸ್ಲಿಂ ಆರಾಧಕರು ಮಸೀದಿಯ ಗೇಟ್ ಹೊರಗೆ ತಮ್ಮ ಈದ್ ಪ್ರಾರ್ಥನೆಗಳನ್ನು ನಡೆಸಬೇಕಾಯಿತು. ಸುಮಾರು 60 ವರ್ಷಗಳಲ್ಲಿ ಮೊದಲ ಬಾರಿಗೆ ಮಸೀದಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಯಿತು. ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳಿಗೆ ವಿಶ್ವದ ಕೆಲವು ಪವಿತ್ರ ಸ್ಥಳಗಳಿಂದ ಕೆಲವೇ ಮೀಟರ್ ದೂರದಲ್ಲಿರುವ ಈದ್ ಅಲ್-ಫಿತರ್…

Read More

ಹೊಟ್ಟೆಗೂ ಇಲ್ಲ, ಜುಟ್ಟಿಗೂ ಇಲ್ಲ: ಬಿಸಿಲ ತಾಪಕ್ಕೆ ಕಮರಿದ ಹೂ; ನಷ್ಟದ ಸುಳಿಯಲ್ಲಿ ಬೆಳೆಗಾರರು – Kannada News | Chikkaballapur flower cultivation withers heatwave devastates farmers and blooms

ತಂಪಾದ ಹವಗುಣಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಈಗ ಉಷ್ಣಾಂಶ ದಾಖಲೆ ಮಟ್ಟಕ್ಕೇರಿದೆ. ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ತಳಿಯ ಹೂವುಗಳು ಗಿಡದಲ್ಲೇ ಒಣಗುತ್ತಿದ್ದು, ಬಿಸಿಲಿನ ತಾಪ ಹೂ ಬೆಳೆಗಾರರ ಬದುಕನ್ನು ಕಮರಿಸುತ್ತಿದೆ. Source link

Read More