ಉಡುಪಿ: ಕರಾವಳಿಯಲ್ಲಿ ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟು ನಿರ್ವಹಣೆಯೇ ಸವಾಲು – Kannada News | Udupi Water Crisis: Kindi Annekattu Management Fails, Saltwater Threatens Fresh Supply
ಉಡುಪಿ, ಫೆಬ್ರವರಿ 26: ಕರಾವಳಿ ಜಿಲ್ಲೆಯ ಉಡುಪಿಯಲ್ಲಿ (Udupi) ಈ ಬಾರಿ ಅತೀ ಹೆಚ್ಚು ಮಳೆಯಾಗಿದೆ. ಬೇಸಿಗೆ ಬಂದರೆ ಕುಡಿಯುವ ನೀರಿಗೆ (Water) ಸಮಸ್ಯೆ ಎದುರಾಗುವುದಿಲ್ಲ ಅಂದುಕೊಂಡ್ರೆ ಅದು ಹುಸಿಯಾಗಿದೆ. ಈಗಾಗಲೇ ಹಲವು ಕಡೆ ನೀರಿನ ಸಮಸ್ಯೆ ಆರಂಭವಾಗಿದೆ. ಸರಿಯಾದ ನೀರಿನ ನಿರ್ವಹಣೆ ಇಲ್ಲದೆ ಇರುವುದೇ ಸಮಸ್ಯೆಗೆ ಮೂಲ ಕಾರಣ. 600 ಕಿಂಡಿ ಅಣೆಕಟ್ಟುಗಳಲ್ಲಿ ಬಹುತೇಕ ಸಿಹಿ ನೀರಿನ ಮೂಲವಾಗಿ ಉಳಿದಿಲ್ಲ. 600ಕ್ಕೂ ಹೆಚ್ಚು ಕಡೆಗಳಲ್ಲಿ ಕಿಂಡಿ ಅಣೆಕಟ್ಟು ಕರಾವಳಿಯಲ್ಲಿ ನದಿಗಳು ಸಮುದ್ರ ತೀರ ಪ್ರದೇಶದಲ್ಲಿ ಹರಿಯುವುದರಿಂದ…