Headlines

ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು: ಗ್ರಹಣ ಶುಭ ಕಾರ್ಯಗಳಿಗೆ ಅಡ್ಡಿಯಲ್ಲ – Kannada News | Puttaraja Gavai Jayanti: Gadag Hosts 19 Interfaith Marriages During Eclipse

ಗದಗ, ಮಾ.3: ಸಾಮಾನ್ಯವಾಗಿ ಗ್ರಹಣವೆಂದರೆ ಅಶುಭ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎಂಬ ನಂಬಿಕೆ ಬಲವಾಗಿದೆ. ಆದರೆ, ಗದಗ ನಗರದಲ್ಲಿ ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಹೋಳಿ ಹುಣ್ಣಿಮೆ ಹಾಗೂ ಚಂದ್ರಗ್ರಹಣದ ದಿನದಂದೇ 19 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಧರ ಬಾಳಿನ ಬೆಳಕು, ಪಂಡಿತ ಪುಟ್ಟರಾಜ ಗವಾಯಿಗಳ 112ನೇ ಜಯಂತೋತ್ಸವದ ಅಂಗವಾಗಿ ಈ ಅರ್ಥಪೂರ್ಣ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ದಿ. ಕೆ.ಎಚ್. ಪಾಟೀಲ್ ಅಭಿಮಾನಿಗಳ ಬಳಗವು ಗದಗ ಎಪಿಎಂಸಿ ಆವರಣದ ಪುಟ್ಟರಾಜ ಗವಾಯಿಗಳ…

Read More

ರೋಗಿಗಳ ರಕ್ಷಣೆಗೆ ಇರುವ ಆ್ಯಂಬುಲೆನ್ಸ್​ನಲ್ಲಿ ಜನರ ಸಾಗಾಟ! ಕುರಿಗಳಂತೆ ಜನ ತುಂಬಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್

ಗದಗ, ಮಾರ್ಚ್ 9: ರೋಗಿಗಳ ತುರ್ತು ಚಿಕಿತ್ಸೆಗೆ ಬಳಸಬೇಕಾದ ಆ್ಯಂಬುಲೆನ್ಸ್ ವಾಹನವನ್ನು ಜನರ ಸಾಗಾಟಕ್ಕೆ ಬಳಸಲಾಗಿದೆ ಎಂಬ ಆರೋಪ ಗದಗದಲ್ಲಿ ಕೇಳಿಬಂದಿದೆ. ಗದಗದ ಜಿಮ್ಸ್ (GIMS) ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ಸಾಗಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆ್ಯಂಬುಲೆನ್ಸ್ ಬಂದು ನಿಲ್ಲುತ್ತಿದ್ದಂತೆ ಹಲವರು ಅದಕ್ಕೆ ಮುಗಿಬಿದ್ದು ಹತ್ತುವ ದೃಶ್ಯಗಳು ಕಂಡುಬಂದಿವೆ. ರೋಗಿಗಳ ರಕ್ಷಣೆಗೆ ಇರಬೇಕಾದ ಆ್ಯಂಬುಲೆನ್ಸ್‌ನಲ್ಲಿ ಸಾಮಾನ್ಯ ಜನರನ್ನು ಸಾಗಾಟ ಮಾಡುತ್ತಿರುವುದು…

Read More

ಹೋಟೆಲ್, ರೆಸ್ಟೋರೆಂಟ್ ಬಿಲ್​​​ನಲ್ಲಿ ಎಲ್​ಪಿಜಿ ಚಾರ್ಜ್ ಹಾಕಿದರೆ ನೀವು ಏನು ಮಾಡಬೇಕು?

ನವದೆಹಲಿ, ಮಾರ್ಚ್ 25: ಕಮರ್ಷಿಯಲ್ ಎಲ್​ಪಿಜಿಯ ಬಿಕ್ಕಟ್ಟು (LPG Crisis)  ಶುರುವಾದಾಗಿನಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್​​ಗಳು ಅಡುಗೆ ಮಾಡಲು ಪರದಾಡುತ್ತಿವೆ. ಕೆಲವು ರೆಸ್ಟೋರೆಂಟ್​​ಗಳು ಬಾಯ್ಲರ್, ಎಲೆಕ್ಟ್ರಿಕ್ ಸ್ಟೌವ್​ಗಳನ್ನು ಬಳಸುತ್ತಿವೆ. ಕೆಲವು ಹೋಟೆಲ್​ಗಳಲ್ಲಿ ಗ್ಯಾಸ್​ ಅಭಾವದ ನೆಪ ಹೇಳಿ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ (CCPA) ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಒಂದುವೇಳೆ ನೀವು ಹೋಗುವ ಹೋಟೆಲ್ ಬಿಲ್​​ಗಳಲ್ಲಿ ಗ್ಯಾಸ್ ಚಾರ್ಜ್​ ಅಥವಾ ಎಲ್​ಪಿಜಿ ಚಾರ್ಜ್ ಎಂದು ನಮೂದಿಸಿದ್ದರೆ ಅವರ…

Read More

ನಕಲಿ ಉದ್ಯೋಗದ ಜಾಹೀರಾತು ಮೂಲಕ ಬೇರೆ ದೇಶಗಳ ರಹಸ್ಯ ಮಾಹಿತಿ ಕದಿಯಲು ಚೀನಾ ಯತ್ನ! – Kannada News

ಲಂಡನ್, ಜೂನ್ 4: ವಿಶ್ವದ ಅತ್ಯಂತ ಶಕ್ತಿಶಾಲಿ ಗುಪ್ತಚರ ಮಾಹಿತಿ ಹಂಚಿಕೆ ಒಕ್ಕೂಟವಾದ ‘ಫೈವ್ ಐಸ್’ (ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಬ್ರಿಟನ್ ಮತ್ತು ಅಮೆರಿಕ) ದೇಶಗಳ ಸರ್ಕಾರಿ ಮತ್ತು ಮಿಲಿಟರಿ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಚೀನಾ (China) ಆನ್‌ಲೈನ್‌ನಲ್ಲಿ ನಕಲಿ ಉದ್ಯೋಗದ ಜಾಲ ಬೀಸಿದೆ ಎಂದು ಒಕ್ಕೂಟವು ಗಂಭೀರ ಎಚ್ಚರಿಕೆ ನೀಡಿದೆ. ಲಿಂಕ್ಡ್‌ಇನ್ (LinkedIn), ಇಂಡೀಡ್​ನಂತಹ ವೃತ್ತಿಪರ ಜಾಲತಾಣಗಳ ಮೂಲಕ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಪಡೆಯಲು ಚೀನಾ ಈ ಕುತಂತ್ರ ನಡೆಸುತ್ತಿದೆ ಎನ್ನಲಾಗಿದೆ. ಚೀನಾದ ಮಿಲಿಟರಿ ಗುಪ್ತಚರ…

Read More

ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ

ಮಗು ಹುಟ್ಟಿದರೆ ನೆಲಭೋಜನ ಮಾಡುವುದಾಗಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ ಅವರು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಗಂಡು ಮಗು ಜನಿಸಿತು. ಈಗ ಮಗನೊಂದಿಗೆ ಬಂದು ಶ್ರೀಕೃಷ್ಣನ ದರ್ಶನ ಪಡೆದ ಅವರು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನೆಲಭೋಜ‌ನ (Nela Bhojana) ಪ್ರಸಾದ ಸ್ವೀಕರಿಸಿದ್ದಾರೆ. ಜನಸಾಮಾನ್ಯರೊಂದಿಗೆ ಕುಳಿತು ನೆಲಭೋಜ‌ನ ಸ್ವೀಕರಿಸಿದ ಸ್ಟಾರ್ ದಂಪತಿಯ ವಿಡಿಯೋ ಲಭ್ಯವಾಗಿದೆ. ಮಗನೊಂದಿಗೆ ದೇವರ ದರ್ಶನ ಮಾಡಿದ ಬಳಿಕ ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದವನ್ನು ಕೂಡ ಅವರು ಪಡೆದರು. ‘ಬಹಳ…

Read More

ಮನೆಯಲ್ಲಿದ್ದ ಹಳೆಯ ಟಿವಿಯೊಳಗಿತ್ತು 8 ಅಡಿ ಉದ್ದದ ಬೃಹತ್ ಹಾವು! ಮನೆಮಂದಿ ಶಾಕ್; ವಿಡಿಯೋ ನೋಡಿ

ಚಾಮರಾಜನಗರ, ಮಾರ್ಚ್ 27: ಉಪಯೋಗಿಸದೇ ಇದ್ದ ಟಿವಿಯೊಳಗೆ ಭಾರೀ ಹಾವು ಅಡಗಿದ್ದ ಘಟನೆ ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ದೊಡ್ಡಮಾದಪ್ಪ ಎಂಬವರ ಮನೆಯಲ್ಲಿ ನಡೆದಿದೆ. ಈ ದೃಶ್ಯ ಕಂಡು ಮನೆಮಂದಿ ಬೆಚ್ಚಿಬಿದ್ದಿದ್ದು, ಬಳಿಕ ಉರಗ ತಜ್ಞರ ಸಹಾಯದಿಂದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಹಳೆಯ ಟಿವಿಯೊಳಗೆ ಸುಮಾರು 8 ಅಡಿ ಉದ್ದದ ಕೇರೆಹಾವು ಸೇರಿಕೊಂಡಿತ್ತು. ಟಿವಿಯೊಳಗೆ ಹಾವು ಇರುವುದನ್ನು ಗಮನಿಸಿದ ಮನೆಮಂದಿ ಭಯಗೊಂಡು ತಕ್ಷಣವೇ ಉರಗ ತಜ್ಞರಾದ ಸ್ನೇಕ್ ಚಾಂಪ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ…

Read More

ಜನಪ್ರಿಯತೆಯಲ್ಲಿ ವಿಜಯ್, ಪ್ರಭಾಸ್​ ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದ 20 ವರ್ಷದ ನಟಿ – Kannada News | Sara Arjun Tops IMDb Popularity: Beats Vijay, Prabhas with ‘Dhurandhar’ Success

ಭಾರತೀಯ ಸಿನಿಮಾ ರಂಗದಲ್ಲಿ ಸೂಪರ್‌ಸ್ಟಾರ್‌ಗಳೇ ಪ್ರಾಬಲ್ಯ ಹೊಂದಿರುತ್ತಾರೆ. ಆದರೆ ಈ ಬಾರಿ 20 ವರ್ಷದ ನಟಿಯೊಬ್ಬರು ಎಲ್ಲರೂ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಈ ನಟಿ, IMDbಯಲ್ಲಿ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ದಕ್ಷಿಣ ಸಿನಿಮಾ ರಂಗದ ದಳಪತಿ ವಿಜಯ್ ಮತ್ತು ಪ್ರಭಾಸ್‌ರಂತಹ ದೊಡ್ಡ ನಟರನ್ನು ಮೀರಿಸಿದ್ದಾರೆ. ಈ ನಟಿ ಬೇರೆ ಯಾರೂ ಅಲ್ಲ, ‘ಧುರಂಧರ್’ ತಾರೆ ಸಾರಾ ಅರ್ಜುನ್. ‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ನಂತರ, ಅವರು…

Read More

ಬಾಕ್ಸ್ ಆಫೀಸ್‌ನಲ್ಲಿ ‘ಏಕ್ ದಿನ್’ ಸಿನಿಮಾಗೆ ಸೋಲು; 2ನೇ ದಿನ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ – Kannada News | Junaid Khan Sai Pallavi starrer Ek Din Box Office Collection day 2 report

ಆಮಿರ್ ಖಾನ್ ಪುತ್ರ ಜುನೈದ್ ಖಾನ್ (Junaid Khan) ಮತ್ತು ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಏಕ್ ದಿನ್’ (Ek Din) ಸಿನಿಮಾ ಕಳೆದ ಶುಕ್ರವಾರವಷ್ಟೇ ತೆರೆಕಂಡಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾ ವಿಫಲವಾಗಿದೆ. ಮೊದಲ ದಿನವೇ ನೆಗೆಟಿವ್ ವಿಮರ್ಶೆ ಪಡೆದುಕೊಂಡಿದ್ದ ಈ ಚಿತ್ರ, ಎರಡನೇ ದಿನವೂ (ಶನಿವಾರ, ಮೇ 2) ಚೇತರಿಕೆ ಕಾಣದೆ ಗಳಿಕೆಯಲ್ಲಿ ಕುಸಿತ ಕಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಚಿತ್ರತಂಡಕ್ಕೆ ದೊಡ್ಡ ಪ್ರಮಾಣದ ನಷ್ಟ ಆಗಲಿದೆ….

Read More

IPL 2026: ರೋಹಿತ್ ಕಂಬ್ಯಾಕ್ ಬಗ್ಗೆ ಆಘಾತಕ್ಕಾರಿ ಮಾಹಿತಿ ನೀಡಿದ ಹಾರ್ದಿಕ್ – Kannada News | Rohit Sharma Injury Update: MI Star Misses IPL 2026 Matches, Hardik Pandya Faces Pressure

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ (Mumbai Indians) ಐಪಿಎಲ್ 2026 (IPL 2026) ಸೀಸನ್ ಉತ್ತಮವಾಗಿ ಆರಂಭವಾಗಿಲ್ಲ. ಮೊದಲ ಪಂದ್ಯವನ್ನು ಗೆದ್ದ ನಂತರ, ಸತತ ಮೂರು ಪಂದ್ಯಗಳನ್ನು ಸೋತಿದೆ. ಇದು ಹಾರ್ದಿಕ್ ಪಾಂಡ್ಯ ತಂಡವನ್ನು ಚಿಂತೆಗೀಡುಮಾಡಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಐದನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿ ಮುಂಬೈ ತಂಡವಿದೆ. ಆದರೆ ಇದಕ್ಕೆ ಹಿನ್ನಡೆ ಎಂಬಂತೆ ತಂಡದ ಸ್ಟಾರ್ ಆರಂಭಿಕ ಆಟಗಾರ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಈ ಪಂದ್ಯಕ್ಕೆ…

Read More

ಕಸ ತಿಂದು ‘ಚಿನ್ನ’ ಕೊಡುವ ಪುಟ್ಟ ಕಾರ್ಮಿಕರು! ಉಡುಪಿಯ ವಂಡ್ಸೆಯಲ್ಲಿ ಕೀಟಗಳ ನೆರವಿನಿಂದ ಕಸ ಮುಕ್ತ ಕ್ರಾಂತಿ – Kannada News | Udupi Vandse Gram Panchayat’s Eco Friendly Waste Management Using Black Soldier Fly Larvae Sparks Revolution

‘ಬ್ಲಾಕ್ ಸೋಲ್ಜರ್ ಫ್ಲೈ’ ಗೊಬ್ಬರ ತಯಾರಿಕಾ ಘಟಕ ಉಡುಪಿ, ಜುಲೈ 4: ಮನೆಯಲ್ಲಿ ಉಳಿದ ಹಸಿ ಕಸವನ್ನು ಹೊರಗೆ ಎಸೆಯುವುದು ಸಾಮಾನ್ಯ ಸಂಗತಿ. ಆದರೆ, ಇದೇ ತ್ಯಾಜ್ಯವನ್ನು ಕೆಲವೇ ಗಂಟೆಗಳಲ್ಲಿ ಅಮೂಲ್ಯವಾದ ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸುವ ಪುಟ್ಟ ಕಾರ್ಮಿಕರ ಸೈನ್ಯವೊಂದು ಉಡುಪಿಯಲ್ಲಿದೆ! ಇವು ಸಂಬಳ ಕೇಳುವುದಿಲ್ಲ, ರಜೆ ಬೇಡುವುದಿಲ್ಲ, ಮುಷ್ಕರವನ್ನೂ ಮಾಡುವುದಿಲ್ಲ! ಹಗಲು-ರಾತ್ರಿ ನಿರಂತರವಾಗಿ ಕೆಲಸ ಮಾಡುತ್ತಾ ಪರಿಸರವನ್ನು ಕಾಪಾಡುತ್ತಿರುವ ಈ ವಿಶೇಷ ಜೀವಿಗಳೇ ‘ಬ್ಲಾಕ್ ಸೋಲ್ಜರ್ ಫ್ಲೈ (ಕಪ್ಪು ಸೈನಿಕ ನೊಣ)’ ಎಂಬ ಕೀಟಗಳು. ಉಡುಪಿ…

Read More