ಆದಾಯ ಕೊರತೆ ನೀಗಿಸಲು ಫ್ರೀಡಂ ಪಾರ್ಕ್ ಆವರಣ ಬಾಡಿಗೆ ನೀಡಲು ಮುಂದಾದ ಜಿಬಿಎ – Kannada News | GBA’s Plan to Commercially Rent Out Freedom Park Sparks Massive Opposition
ಬೆಂಗಳೂರು, ಫೆಬ್ರವರಿ 24: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪ್ರತಿಭಟನೆ ಅಂದ್ರೆ ಮೊದಲಿಗೆ ನೆನಪಾಗೋದೇ ಫ್ರೀಡಂ ಪಾರ್ಕ್. ರಾಜಕೀಯ ಪಕ್ಷಗಳಿಂದ ಹಿಡಿದು, ಸಂಘ ಸಂಸ್ಥೆಗಳು ಕೂಡ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸುತ್ತವೆ. ಹೀಗಾಗಿ ಯಾವಾಗ ನೋಡಿದರೂ ಫ್ರೀಡಂ ಪಾರ್ಕ್ನಲ್ಲಿ ಒಂದಿಲ್ಲೊಂದು ಪ್ರೊಟೆಸ್ಟ್ ಇದ್ದೇ ಇರುತ್ತೆ. ಆದರೆ ಸದ್ಯದ ಮಾಹಿತಿಯ ಪ್ರಕಾರ ಇಡೀ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋದಕ್ಕೆ ಇರುವ ಏಕೈಕ ಈ ಜಾಗವನ್ನೂ ಹಣ ಸಂಪಾದನೆಗೆ ಬಳಕೆ ಮಾಡಿಕೊಳ್ಳಲು ತಯಾರಿ ನಡೆದಿದ್ದು, ಫ್ರೀಡಂ ಪಾರ್ಕ್ನ ಬಾಡಿಗೆ ನೀಡಲು ಜಿಬಿಎ ಮುಂದಾಗಿದೆ….