ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ ದಂಡ: ಈ ವಿನೂತನ ರೂಲ್ಸ್ ಏಕೆ ಗೊತ್ತಾ? – Kannada News | No ‘chugli’ rule in Chhattisgarh village: Gram committee introduces Rs 5,000 fine
ಛತ್ತೀಸ್‌ಗಢದ (Chhattisgarh )ಬಾಲೋದ್ ಜಿಲ್ಲೆಯ ಮೆಡ್ಡಿ ಎಂಬ ಗ್ರಾಮದಲ್ಲಿ ವಿಶಿಷ್ಟವಾದ ಕಾನೂನನ್ನು ಇತ್ತೀಚೆಗೆ ಅನುಷ್ಠಾನ ಮಾಡಲಾಗಿದೆ. ಅದರಂತೆ ಒಂದು ವೇಳೆ ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸುವುದು ಕಂಡುಬಂದಲ್ಲಿ ಅಂತಹವರಿಗೆ 5,000 ರೂ. ದಂಡ ವಿಧಿಸುವ ನಿಯಮ ಜಾರಿ ಮಾಡಲಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವಂತಹವರಿಗೆ ದಂಡ ವಿಧಿಸುವ ಮೂಲಕ ಸುಳ್ಳು ಸುದ್ದಿಯಿಂದ ಉಂಟಾಗುವ ಘರ್ಷಣೆಗಳನ್ನು ತಡೆದು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಪ್ರಯತ್ನ ಇದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ವದಂತಿ ಹರಡಿ ಸಾಮಾಜಿಕ ಸ್ವಾಸ್ಥ್ಯ…