Headlines

IND vs AFG: ಏಕದಿನದಲ್ಲಿ ವಿಶೇಷ ಮೈಲಿಗಲ್ಲು ದಾಟಲಿದ್ದಾರೆ ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜೂನ್ 12 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈಗಾಗಲೇ ಧರ್ಮಶಾಲಾಕ್ಕೆ ಬಂದಿಳಿದಿವೆ. ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯ ಮೇಲೂ ಕಣ್ಣಿಟ್ಟಿದೆ (PC- BCCI X). ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ವಿಶೇಷ ಮೈಲಿಗಲ್ಲು ಸ್ಥಾಪಿಸುವ ಅವಕಾಶವನ್ನು ಹೊಂದಿದ್ದಾರೆ. ವಾಸ್ತವವಾಗಿ…

Read More

ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ

ತುಮಕೂರು, ಮಾರ್ಚ್​ 29: ನಿಮ್ಮ ಬಳಿಯಿರುವ ಗ್ಯಾಸ್​ನ್ನು ವ್ಯರ್ಥ ಮಾಡಬೇಡಿ, 5 ಬಾರಿ ಚಿಂತಿಸಿ ಬಳಸಿ ಎಂದು ಸಿದ್ದಲಿಂಗಶ್ರೀ ಮನವಿ ಮಾಡಿದರು. ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು, ವಿದ್ಯುತ್, ನೀರು, ಎಲ್​ಪಿಜಿ, ತೈಲ ಅತ್ಯಂತ ಅಮೂಲ್ಯವಾದುದು. ನಮಗೆ ಸಿಕ್ಕಿದ್ದು ಮತ್ತೊಬ್ಬರಿಗೂ ಸಿಗಲಿ ಎಂದು ಉದಾರತೆ ಇರಲಿ. ಪ್ರತಿಯೊಂದು ವಸ್ತು ಬಳಸುವಾಗ 5 ಬಾರಿ ಯೋಚಿಸಿ ಬಳಸಿ. ನಮ್ಮ ಬಳಿ ಅಧಿಕವಾಗಿದ್ದರೂ ಮುಂದಿನ ದಿನಗಳಲ್ಲಿ ಕೊರತೆಯಾಗಬಹುದು. ಸಿದ್ಧಗಂಗಾ ಮಠದಲ್ಲಿ ಸೌದೆ, ಅಡಕೆ ಸಿಪ್ಪೆಯನ್ನು ಇಂಧನವಾಗಿ…

Read More

ಧರ್ಮಸ್ಥಳ ಪ್ರಕರಣ: ಸಿಕ್ಕ 7 ಬುರುಡೆಗಳ ರಹಸ್ಯ ಪತ್ತೆಯೇ ಎಸ್​​ಐಟಿ ಅಧಿಕಾರಿಗಳಿಗೀಗ ಸವಾಲು – Kannada News | Dharmasthala Skull Case: Decoding Banglegudde Skull Mystery Remains Biggest Challenge for SIT; Probe Team to Use Isotope Analysis

ಧರ್ಮಸ್ಥಳದಲ್ಲಿ ನಡೆದಿದ್ದ ಉತ್ಖನನ ಕಾರ್ಯ (ಫೈಲ್​​ ಚಿತ್ರ)Image Credit source: PTI ಮಂಗಳೂರು, ಜೂನ್​​ 21: ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ನಟ ಪ್ರಕಾಶ್​​ ರಾಜ್​​ ಹೆಸರು ಕೂಡ ಇದರಲ್ಲಿ ತಳುಕಿಹಾಕಿಕೊಂಡಿರುವ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪತ್ತೆಗೆ ಎಸ್ಐಟಿ ಹರಸಾಹಸ ಪಡುತ್ತಿದ್ದು, ಫೈನಲ್ ರಿಪೋರ್ಟ್ ಸಲ್ಲಿಸಲು ಏಳು ಬುರುಡೆಗಳ ಮೂಲ ಪತ್ತೆಯೇ ಸವಾಲಾಗಿ ಮಾರ್ಪಟ್ಟಿದೆ. ಹೀಗಾಗಿ ಐಸೋಟೋಪ್‌ ಎನಾಲಿಸಿಸ್​​ ತಂತ್ರಜ್ಞಾನ ಬಳಸಿ ಬುರುಡೆಗಳ ಬಗ್ಗೆ ಮಾಹಿತಿ…

Read More

ಕಾರಲ್ಲೂ ಅಧಿಕಾರಿಗಳ ಜೊತೆ ಮೀಟಿಂಗ್​​: ವಿಡಿಯೋ ಕಾನ್ಫರೆನ್ಸ್​​ ಮೂಲಕ ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಕೃಷ್ಣಭೈರೇಗೌಡ – Kannada News | Bengaluru Development Minister Krishna Byre Gowda Holds High Level Virtual Meeting with Officials While Commuting in Car

ವಿಡಿಯೋ ಕಾನ್ಫರೆನ್ಸ್​​ ಮೂಲಕ ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಕೃಷ್ಣಬೈರೇಗೌಡImage Credit source: Krishna Byre Gowda X Account ಬೆಂಗಳೂರು, ಜೂನ್​​ 23: ಕೃಷ್ಣ ಭೈರೇಗೌಡರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಲಾಖೆಯ ಕಾರ್ಯಗಳಿಗೆ ಚುರುಕು ಮುಟ್ಟಿಸಿದ್ದು, ಮೇಲಿಂದ ಮೇಲೆ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಜಿಬಿಎ, ಬಿಎಂಆರ್​​ಸಿಎಲ್​​ ಮತ್ತು ಬಿ-ಸ್ಮೈಲ್ ಸಭೆಗಳಲ್ಲಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಚಾರ ಭಾರಿ ಸುದ್ದಿಯಾಗಿತ್ತು. ಈ ನಡುವೆ ಸಮಯ ಉಳಿತಾಯ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ…

Read More

Career Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26ರಿಂದ ಮೇ 02ರವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Weekly Career Horoscope: April 26 May 02 – Your Path to Professional Growth

ಏಪ್ರಿಲ್ 26ರಿಂದ ಮೇ 02ರವರೆಗಿನ ಸಮಯದಲ್ಲಿ ವೃತ್ತಿ ಜೀವನದ ಹಲವು ಮಜಲುಗಳ ಪರಿಚಯವಾಗಲಿದೆ. ವೃತ್ತಿಯಲ್ಲಿ ಸುದೀರ್ಘ ಕಾಲ ಇದ್ದವರಿಗೆ ವಿಶೇಷ ಗೌರವ ಸ್ಥಾನ ಮಾನಗಳು ತಾನಾಗಿಯೇ ಬರಲಿವೆ. ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ​ಮೇಷ: ರವಿ ಬಲವಾಗಿರುವುದರಿಂದ ಆಡಳಿತ ಮಂಡಳಿಯಿಂದ ಮನ್ನಣೆ ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿ ಲಾಭವಿದೆ. ನಿಮ್ಮ ಕಠಿಣ ನಿರ್ಧಾರಗಳು ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿವೆ. ಹೊಸ ಜವಾಬ್ದಾರಿ ಸ್ವೀಕರಿಸಲು ಸಿದ್ಧರಾಗಿ. ವೃಷಭ: ಶುಕ್ರ ಮತ್ತು ಬುಧನ ಸ್ಥಿತಿಗತಿಯಿಂದಾಗಿ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ಉತ್ತಮ…

Read More

ಎರಡು ವರ್ಷದ ಮಗುವಿಗೆ ಚಿತ್ರಹಿಂಸೆ ಕೊಟ್ಟು, ಹೊಡೆದು ಚರಂಡಿಗೆ ಎಸೆದ ತಂದೆ

ಲಕ್ನೋ, ಜೂನ್ 1: ಎರಡೂವರೆ ವರ್ಷದ ತನ್ನ ಪುಟ್ಟ ಹೆಣ್ಣುಮಗಳ ಮೇಲೆ ಅತಿಮಾನುಷವಾಗಿ ಹಲ್ಲೆ ನಡೆಸಿ, ರಸ್ತೆ ಬದಿಯ ಚರಂಡಿಗೆ ತಳ್ಳಿ ಕೊಲ್ಲಲು ಯತ್ನಿಸಿದ ತಂದೆಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೋನು ಅಲಿಯಾಸ್ ಯೋಗೇಂದ್ರ ಸಿಂಗ್ (50) ಎಂದು ಗುರುತಿಸಲಾಗಿದೆ. ಶನಿವಾರ ನಡೆದ ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ವಿಡಿಯೋ ಮೇ 30 ರಂದು ಮಧ್ಯಾಹ್ನ 2.30 ರ…

Read More

ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು, 21 ಜನರಿಗೆ ಗಾಯ – Kannada News | Russian drone attack on Ukraine Dnipro 4 dead over 21 injured

ಕೈವ್, ಏಪ್ರಿಲ್ 25: ಉಕ್ರೇನಿಯನ್ ನಗರವಾದ ಡ್ನಿಪ್ರೊ ಮೇಲೆ ರಷ್ಯಾದ (Russian Drone Attack) ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ 4 ಜನರು ಸಾವನ್ನಪ್ಪಿದ್ದು, 21 ಜನರು ಗಾಯಗೊಂಡಿದ್ದಾರೆ. ರಾತ್ರಿಯಿಡೀ ನಡೆದ ದಾಳಿಯಲ್ಲಿ ನಾಶವಾದ ಮನೆಯ ಅವಶೇಷಗಳಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ. ” ರಷ್ಯಾದ ದಾಳಿಯ ನಂತರ ಡ್ನಿಪ್ರೊದಲ್ಲಿನ ಆಸ್ಪತ್ರೆಗಳಲ್ಲಿ 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ರಷ್ಯನ್ನರು ರಾತ್ರಿಯಿಡೀ ಡ್ನಿಪ್ರೊ, ಇತರೆ ನಗರಗಳು ಮತ್ತು…

Read More

ಐಪಿಎಲ್​ ಆರಂಭಕ್ಕೂ ಮುನ್ನವೇ ಹೊಸ ಕಂಡೀಷನ್ ಹಾಕಿದ ರೋಹಿತ್ ಶರ್ಮಾ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಇತ್ತ ಎಲ್ಲಾ ಫ್ರಾಂಚೈಸಿಗಳು ಪ್ರೀ ಸೀಸನ್ ಕ್ಯಾಂಪ್ ಶುರು ಮಾಡಿದೆ. ಈ ಕ್ಯಾಂಪ್​ಗೆ ಸೇರುವ ಮುನ್ನವೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್​ಗೆ ಹೊಸ ಕಂಡೀಷನ್ ಹಾಕಿದ್ದಾರೆ ಎಂದು ವರದಿಯಾಗಿದೆ. ಆ ಕಂಡೀಷನ್ ಏನೆಂದರೆ ‘ ನೋ ಇಂಪ್ಯಾಕ್ಟ್ ಪ್ಲೇಯರ್’. ಅಂದರೆ ಐಪಿಎಲ್ 2026 ರಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಆಡಲು ರೋಹಿತ್ ಶರ್ಮಾ ನಿರಾಕರಿಸಿದ್ದಾರೆ. ಈ ಬಗ್ಗೆ ಅವರು ಮುಂಬೈ ಇಂಡಿಯನ್ಸ್  ಮ್ಯಾನೇಜ್‌ಮೆಂಟ್‌ಗೆ ಸ್ಪಷ್ಟ…

Read More

ಮದುವೆ ಸಂಭ್ರಮದ ವೇಳೆ ದೈವಕ್ಕೆ ಅವಮಾನ ಆರೋಪ: ಮುಸ್ಲಿಂ ಯುವಕನಿಂದ ಕ್ಷಮೆಯಾಚನೆ

ಮಡಿಕೇರಿ, ಮಾರ್ಚ್​​ 31: ಕೊಡಗು ಜಿಲ್ಲೆಯಲ್ಲಿ ದೈವ ಮತ್ತು ದೈವ ನರ್ತಕರನ್ನು ಅವಹೇಳನ ಮಾಡಿದ ಘಟನೆ ಸಂಬಂಧ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬೆನ್ನಲ್ಲೇ ಆರೋಪಿ ಫೈಜಲ್ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ವಿವಾಹವೊಂದರ ನಂತರ ಖಾಸಗಿಯಾಗಿ ಮಾತನಾಡಿದ ಮಾತುಗಳು ವೈರಲ್ ಆಗಿಬಿಟ್ಟವು. ಇದರಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ, ತಾವು ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

Chitradurga Bus Accident: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ತಾಯಿ-ಮಗಳು ಅಗ್ನಿಗೆ ಆಹುತಿ – Kannada News | Chitradurga Bus Tragedy: Five Passengers, Including a Child and the Lorry Driver Died

ಚಿತ್ರದುರ್ಗ, ಡಿಸೆಂಬರ್​​ 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಖಾಸಗಿ ಸ್ಲೀಪರ್​​ ಬಸ್​​ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಜನ ಸಜೀವ ದಹನವಾಗಿದ್ದಾರೆ. ಲಾರಿ ಚಾಲಕ ಸೇರಿ ಬಸ್​​ನಲ್ಲಿದ್ದ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್​​​ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಿತ್ರದುರ್ಗ, ಶಿರಾ, ಹಿರಿಯೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗು ದಾರುಣ…

Read More