ಮೊಮ್ಮಗನ ಎದುರೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದಿದ್ದ ಆರೋಪಿ ನೇಣಿಗೆ ಶರಣು – Kannada News | Bengaluru: Elderly Woman Axe Murder; Accused Commits Suicide
ನೆಲಮಂಗಲ, ಜನವರಿ 14: ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯನ್ನು ಕೊಂದಿದ್ದ (Murder) ಆರೋಪಿ ನೇಣಿಗೆ ಶರಣಾಗಿರುವಂತಹ (Suicide) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ದಾಕ್ಷಾಯಿಣಮ್ಮ(55) ಕೊಂದು ಪರಾರಿಯಾಗಿದ್ದ ವೀರಭದ್ರಯ್ಯ(60) ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ಸದ್ಯ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಳೆದ ಶನಿವಾರದಂದು ಮಟಮಟ ಮಧ್ಯಾಹ್ನ ದಾಕ್ಷಾಯಿಣಮ್ಮನನ್ನು ಆರೋಪಿ ವೀರಭದ್ರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿತ್ತು….