ಸಂಜು ಸ್ಯಾಮ್ಸನ್ ಸೇರಿದಂತೆ ಟೀಂ ಇಂಡಿಯಾದ ಈ ಮೂವರಿಗೆ ಶೀಘ್ರದಲ್ಲೇ ಗೇಟ್ಪಾಸ್
ಟಿ20 ಸರಣಿಗಾಗಿ ವಿದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ಕೆಲವು ಆಟಗಾರರ ಕಳಪೆ ಪ್ರದರ್ಶನ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭವಿಷ್ಯದ ಬಲಿಷ್ಠ ಟಿ20 ತಂಡವನ್ನು ಕಟ್ಟುವ ಸಲುವಾಗಿ ಈ ಆಟಗಾರರಿಗೆ ತಂಡದಲ್ಲಿ ಅವಕಾಶಗಳ ಮೇಲೆ ಅವಕಾಶಗಳನ್ನು ನೀಡಲಾಗುತ್ತಿದೆಯಾದರೂ ಅವರ ಪ್ರದರ್ಶನ ಮಾತ್ರ ಸ್ಥಿರವಾಗಿಲ್ಲ. ಒಂದು ಪಂದ್ಯದಲ್ಲಿ ಮಿಂಚಿದರೆ, ಉಳಿದ ಐದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ (PC-BCCI). ಇದರಿಂದಾಗಿ ಭಾರತದಲ್ಲಿರುವ ಉಳಿದ ಯುವ ಪ್ರತಿಭೆಗಳಿಗೂ ತಂಡದಲ್ಲಿ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ತಂಡದಲ್ಲಿರುವ ಆಟಗಾರರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆಯಾದರೂ…