Headlines

ಖಮೇನಿ ಇದ್ದ ನಿಖರವಾದ ಸ್ಥಳ, ಅಮೆರಿಕ ಹಾಗೂ ಇಸ್ರೇಲ್​ಗೆ ತಿಳಿದಿದ್ಹೇಗೆ? – Kannada News | Iran Leader Khamenei Killed: US Israel Spy Operation Uncovered Through Traffic Cam Hacks

ಟೆಹ್ರಾನ್, ಮಾರ್ಚ್​ 03: ಅಮೆರಿಕ ಹಾಗೂ ಇಸ್ರೇಲ್(Israel) ಜಂಟಿಯಾಗಿ ಇರಾನ್ ಮೇಲೆ ಸಮರ ಸಾರುತ್ತಿವೆ. ಕಳೆದ ಮೂರು ದಿನಗಳಿಂದ ದಾಳಿ, ಪ್ರತಿದಾಳಿಗಳು ನಡೆಯುತ್ತಿವೆ. ಅಮೆರಿಕ ಹಾಗೂ ಇಸ್ರೇಲ್ ಸೇನೆಯು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಅಲಿ ಖಮೇನಿಯನ್ನು ಹತ್ಯೆ ಮಾಡಿದೆ. ಹಾಗಾದರೆ ಖಮೇನಿ ಇದ್ದ ಜಾಗ ಅಮೆರಿಕ ಹಾಗೂ ಇಸ್ರೇಲ್ ಪಡೆಗಳಿಗೆ ಅಷ್ಟು ನಿಖರವಾಗಿ ಹೇಗೆ ತಿಳಿಯಿತು ಎನ್ನುವುದಕ್ಕೆ ಉತ್ತರ ಇಲ್ಲಿದೆ. ಇಸ್ರೇಲ್ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಅವರ ಭದ್ರತಾ ಸಿಬ್ಬಂದಿಯ ಚಲನವಲನಗಳನ್ನು ಮೇಲ್ವಿಚಾರಣೆ…

Read More

ಮೊದಲ ಭಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​: ಮೆಟ್ರೋದಲ್ಲಿ ಸಂಚರಿಸಲು ಸಿಎಂ ನಿರ್ಧಾರ – Kannada News

ಬೆಂಗಳೂರು, ಜೂನ್​​ 07: ಸಿಎಂ ಡಿ.ಕೆ. ಶಿವಕುಮಾರ್​ ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಭಾರಿಗೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನಲ್ಲಿ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದಲಿದ್ದಾರೆ. ವಿಧಾನಸೌಧದ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಸಿಎಂ ಪ್ರಯಾಣಿಸಲಿದ್ದಾರೆ. ಜೀರೋ ಟ್ರಾಫಿಕ್​ನಿಂದ ವಾಹನ ಸವಾರರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಕನಕಪುರ ರಸ್ತೆ ತಲುಪಿದ ಬಳಿಕ ಅಲ್ಲಿಂದ ರಸ್ತೆ…

Read More

ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ? ಪರಮೇಶ್ವರ್ ಹೇಳಿದ್ದಿಷ್ಟು – Kannada News | Tumakur: Will Congress Sadhana Samavesh Enter the Guinness Book of Records Here’s What G. Parameshwara Said

ತುಮಕೂರು, ಮೇ 18: ಕಾಂಗ್ರೆಸ್ ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶವು ಮೇ 19 ಬೆಳಗ್ಗೆ 11 ಗಂಟೆಗೆ ತುಮಕೂರಿನ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿರುವುದು ಹಾಗೂ ರಾಜ್ಯದಲ್ಲಿ 13.5 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಿರುವುದು ಸರ್ಕಾರದ ಪ್ರಮುಖ ಸಾಧನೆ ಎಂದು ತಿಳಿಸಿದರು. ತುಮಕೂರು ಜಿಲ್ಲೆಯೊಂದರಲ್ಲೇ 1,52,492 ಜನರಿಗೆ ಹಕ್ಕುಪತ್ರ ನೀಡಲಾಗಿದ್ದು, ಆ…

Read More

Horoscope Today: ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 25​, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೃಗಶಿರಾ ನಕ್ಷತ್ರ, ಸೌಭಾಗ್ಯ ಯೋಗ, ವಣಿಕ ಕರಣಗಳನ್ನು ಒಳಗೊಂಡಿದೆ. ಇಂದು ರವಿ ಮೀನ ರಾಶಿಯಲ್ಲಿ, ಚಂದ್ರ ಮಿಥುನ ರಾಶಿಯಲ್ಲಿ ಸಂಚರಿಸಲಿದ್ದಾರೆ. ಸಂತಾನ ಸಪ್ತಮಿ, ಸೂರ್ಯ ದವನಾರ್ಪಣೆ, ಹಾಗೂ ನವಿಲೆ ಆಂಜನೇಯ…

Read More

ವೈಭವ್ ಸೂರ್ಯವಂಶಿ ಹಾದಿಗೆ ಹಾಕಬೇಕಿದೆ ‘ಮಾನಸಿಕ’ ಬೇಲಿ! – Kannada News | How BCCI Hopes to Shield Vaibhav Sooryavanshi From On Field Sledging

ಭಾರತೀಯ ಕ್ರಿಕೆಟ್‌ನ ಹೊಸ ಆಶಾಕಿರಣ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇತ್ತೀಚೆಗೆ ಶ್ರೀಲಂಕಾ ‘ಎ’ ತಂಡದ ವಿರುದ್ಧದ ಪಂದ್ಯದಲ್ಲಿ ದೈಹಿಕ ಜಗಳಕ್ಕೆ ಇಳಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೂಪರ್ ಓವರ್‌ನ ರೋಮಾಂಚಕ ಕ್ಷಣಗಳಲ್ಲಿ ಶ್ರೀಲಂಕಾ ಆಟಗಾರರು “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಕೆಣಕಿದಾಗ, ತಾಳ್ಮೆ ಕಳೆದುಕೊಂಡ ವೈಭವ್ ಎದುರಾಳಿ ಆಟಗಾರ ವಿಶೇನ್ ಹಲಂಬಾಗೆ ಜೊತೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಬಿಸಿಸಿಐ  ಸದ್ಯಕ್ಕೆ ಈ ಯುವ ಆಟಗಾರನಿಗೆ ಯಾವುದೇ ಕಠಿಣ…

Read More

‘ಬೆಂಗಳೂರು ಇನ್’ ಸಿನಿಮಾ ಮತ್ತು ನಟಿ ಅನುಷಾ ರೈ ಬಗ್ಗೆ ಧರ್ಮ ಕೀರ್ತಿ ಮಾತು: ವಿಡಿಯೋ

ಧರ್ಮ ಕೀರ್ತಿ (Dharma Keerthy) ನಟನೆಯ ‘ಬೆಂಗಳೂರು ಇನ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರಾರ್ಥ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಧರ್ಮ ಕೀರ್ತಿ ಮಾತನಾಡಿದರು. ಧರ್ಮ ಕೀರ್ತಿ ಹಾಗೂ ಅನುಷಾ ರೈ ಒಟ್ಟಿಗೆ ನಟಿಸಿರುವ ಮೂರನೇ ಸಿನಿಮಾ ಇದು. ಅನುಷಾ ರೈ ಅವರೊಟ್ಟಿಗಿನ ತಮ್ಮ ಕೆಮಿಸ್ಟ್ರಿ ಬಗ್ಗೆ ಹಾಗೂ ಅನುಷಾ ರೈ ಅವರ ನಟನೆ, ವ್ಯಕ್ತಿತ್ವದ ಬಗ್ಗೆ ಧರ್ಮ ಕೀರ್ತಿ ಮಾತನಾಡಿದರು. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…

Read More

ದ್ವಿತೀಯ ಪಂದ್ಯದ ಕಂಟಕ: ಘಾನಾ ವಿರುದ್ಧ ಗೆಲ್ಲದ ಇಂಗ್ಲೆಂಡ್..! – Kannada News | FIFA World Cup 2026: England stumble to Ghana draw

ಇಂಗ್ಲೆಂಡ್ ಫುಟ್‌ಬಾಲ್ ತಂಡದ ಪಾಲಿನ ಶಾಪ ಎಂದೇ ಪರಿಗಣಿಸಲಾಗಿರುವ “ಎರಡನೇ ಪಂದ್ಯದ ಕಂಟಕ” 2026ರ ಫಿಫಾ ವಿಶ್ವಕಪ್‌ನಲ್ಲೂ ಮುಂದುವರಿದಿದೆ. ಫಾಕ್ಸ್‌ಬರೋದಲ್ಲಿರುವ ‘ಬಾಸ್ಟನ್ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವು ಘಾನಾ ತಂಡವನ್ನು ಎದುರಿಸಿತ್ತು. ಬಲಿಷ್ಠ ಕ್ರೊಯೇಷಿಯಾ ವಿರುದ್ಧ ಮೊದಲ ಪಂದ್ಯದಲ್ಲಿ 4-2 ಅಂತರದಿಂದ ಗೆದ್ದಿದ್ದ ಇಂಗ್ಲೆಂಡ್ ತಂಡವು ಘಾನಾ ವಿರುದ್ಧ ಕೂಡ ಪ್ರಚಂಡ ಪ್ರದರ್ಶನ ನೀಡಲಿದ್ದಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಈ ನಿರೀಕ್ಷೆಯನ್ನು ಘಾನಾ ಡಿಫೆಂಡರ್​ಗಳು ಮೊದಲಾರ್ಧದಲ್ಲೇ ಸುಳ್ಳಾಗಿಸಿದ್ದರು. ಏಕೆಂದರೆ ಈ ಪಂದ್ಯದಲ್ಲಿ …

Read More

IPL 2026: ಐಪಿಎಲ್ 2026 ರ ಸಮಾರೋಪ ಸಮಾರಂಭಕ್ಕೆ ಬಿಸಿಸಿಐ ಭರ್ಜರಿ ತಯಾರಿ

2026 ರ ಮೇ 31 ರಂದು ನಡೆಯಲಿರುವ ಫೈನಲ್ (IPL 2026) ಪಂದ್ಯದೊಂದಿಗೆ 19ನೇ ಆವೃತ್ತಿಯ ಐಪಿಎಲ್​ಗೆ ತೆರೆ ಬೀಳಲಿದೆ. ಈ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈ-ವೋಲ್ಟೇಜ್ ಫೈನಲ್ ಪಂದ್ಯವನ್ನು ಇನ್ನಷ್ಟು ವಿಶೇಷಗೊಳಿಸಲು ಬಿಸಿಸಿಐ ಕೂಡ ಸಮಾರೋಪ ಸಮಾರಂಭವನ್ನು (IPL 2026 Closing Ceremony) ಪ್ರತಿ ಬಾರಿಯಂತೆ ಈ ಬಾರಿಯೂ ಆಯೋಜಿಸಲಿದೆ ಎಂದು…

Read More

ವಿಶ್ವಕಪ್ ಟ್ರೋಫಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದಿದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ!

ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್​ಗಳಿಂದ ಸೋಲಿಸಿ ಭಾರತ ತಂಡ ವಿಶ್ವಕಪ್ ಅನ್ನು ಎತ್ತಿ ಹಿಡಿದಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಹಾಗೂ ಐಸಿಸಿ ಅಧ್ಯಕ್ಷ ಜಯ್​ ಶಾ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ಟೆಕ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಟೀಮ್ ಇಂಡಿಯಾದ ಈ ನಡೆಗೆ ಭಾರತ ತಂಡದ…

Read More

ತಂದೆ-ಮಗನ ಲಾಕಪ್ ಡೆತ್ ಪ್ರಕರಣ; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಚೆನ್ನೈ, ಏಪ್ರಿಲ್ 6: 2020ರಲ್ಲಿ ಕೊರೊನಾ (Covid-19) ಅವಧಿಯಲ್ಲಿ ರಾತ್ರಿಯಿಡೀ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ಅಂಗಡಿ ಮಾಲೀಕ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಸಾಥನ್‌ಕುಲಂ ಪೊಲೀಸರು ಕ್ರೂರವಾಗಿ ಥಳಿಸಿದ್ದರು. ಕಸ್ಟಡಿಯಲ್ಲಿದ್ದಾಗ ಅವರಿಗೆ ಚಿತ್ರಹಿಂಸೆ ನೀಡಿದ್ದರಿಂದ ಅವರಿಬ್ಬರೂ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಗ್ರ ತನಿಖೆ…

Read More