Headlines

ಮತ್ತೆ ಬರುತ್ತಿದ್ದಾರೆ ಮಹಾನ್ ಕಳ್ಳರು, ಮುಗಿದಿಲ್ಲ ‘ಮನಿ ಹೈಸ್ಟ್’ – Kannada News | Netflix Released Money Hiest new teaser says story not ended

‘ಗೇಮ್ ಆಫ್ ಥ್ರೋನ್ಸ್’, ‘ಬ್ರೇಕಿಂಗ್ ಬ್ಯಾಡ್’, ‘ಡಾರ್ಕ್’ ಇನ್ನಿತರೆ ವಿಶ್ವ ವಿಖ್ಯಾತ ವೆಬ್ ಸರಣಿಗಳ ಸಾಲಿಗೆ ಸೇರುತ್ತದೆ ‘ಮನಿ ಹೈಸ್ಟ್’. ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರವಾಗಿದ್ದ ಈ ಸ್ಪ್ಯಾನಿಷ್ ಶೋ ಕೋವಿಡ್ ಸಮಯದಲ್ಲಿ ಭಾರಿ ಹಿಟ್ ಆಗಿತ್ತು. ಈ ಸರಣಿಯ ಐದು ಸೀಸನ್​​ಗಳು ಈ ವರೆಗೆ ಪ್ರಸಾರ ಆಗಿದ್ದು, ಐದನೇ ಸೀಸನ್ ಅನ್ನು ಈ ವೆಬ್ ಸರಣಿಯ ಕೊನೆಯ ಸರಣಿ ಎನ್ನಲಾಗಿತ್ತು. ಕತೆಯನ್ನು ಸಹ ಮುಗಿಸಲಾಗಿತ್ತು. ಆದರೆ ಇದೀಗ ನೆಟ್​​ಫ್ಲಿಕ್ಸ್​ ಹೊಸದೊಂದು ಟೀಸರ್ ಬಿಡುಗಡೆ ಮಾಡಿದ್ದು, ‘ಮನಿ ಹೈಸ್ಟ್’ ಮತ್ತೆ…

Read More

ವಾಣಿಜ್ಯ ಮಂಡಳಿ ಚುನಾವಣೆ: ಗೆದ್ದು ಬೀಗಿದ ಜಯಮಾಲ – Kannada News | Karnataka film chamber of commerce election Jayamala won

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (karnataka film chamber of commerce) ಚುನಾವಣೆ ಇಂದು (ಜನವರಿ 31) ನಡೆದಿದ್ದು, ಭಾಮಾ ಹರೀಶ್ ವಿರುದ್ಧ ಜಯಮಾಲ ಅವರು ವಿಜೇತರಾಗಿದ್ದು, ವಾಣಿಜ್ಯ ಮಂಡಳಿಯ ಮುಂದಿನ ಅಧ್ಯಕ್ಷರಾಗುವುದು ಬಹುತೇಕ ಖಾತ್ರಿ ಆಗಿದೆ. ಇಂದು ಬೆಳಿಗ್ಗೆ ಆರಂಭವಾದ ಮತದಾನದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್​​ಕುಮಾರ್ ಸೇರಿದಂತೆ ಹಲವಾರು ನಟ, ನಟಿಯರು, ತಂತ್ರಜ್ಞರುಗಳು ಆಗಮಿಸಿ ವಿವಿಧ ಸ್ಥಾನಗಳಿಗೆ ಚುನಾವಣೆ ಎದುರಿಸಿದ್ದ ಸ್ಪರ್ಧಿಗಳಿಗೆ ತಮಗೆ…

Read More

ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್: ಬೆಂಗಳೂರಿನ ಮೂವರು ಇನ್ಸ್​​​ಪೆಕ್ಟರ್​​​ಗಳ ತಲೆದಂಡ – Kannada News | Maharashtra police bust three illegal drug manufacturing units in Bengaluru, 3 inspectors Suspended

ಬೆಂಗಳೂರು, (ಡಿಸೆಂಬರ್ 29): ಕರ್ನಾಟಕವನ್ನ ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಎನ್ನುವ ಪೋಲಿಸರ ಕನಸು,ಸರ್ಕಾರದ ಯೋಜನೆಗೆ ಜನ ಶಬ್ಬಾಶ್ ಅಂದಿದ್ರು. ಆದರೆ, ಸಿಲಿಕಾನ್ ಸಿಟಿಯಲ್ಲೇ ಡ್ರಗ್ಸ್ ಫ್ಯಾಕ್ಟರಿ (drug manufacturing units) ಇರೋದನ್ನ ಪತ್ತೆ ಮಾಡಿದ್ದಾರೆ. ಹೌದು…ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿದ್ದ ಡ್ರಗ್ಸ್​ ಫ್ಯಾಕ್ಟರಿಯನ್ನು ಪತ್ತೆ ಮಾಡಿದ್ದು, ಈ ಸಂಬಂಧ ಇದೀಗ ಮೂವರು ಇನ್ಸ್​​ಪೆಕ್ಟರ್​ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ (Bengaluru) ಕೊತ್ತನೂರು, ಆವಲಹಳ್ಳಿ ಮತ್ತು ಬಾಗಲೂರು ಠಾಣೆಯ ಇನ್ಸ್​​ಪೆಕ್ಟರ್​​ಗಳನ್ನು ಅಮಾನತು ಮಾಡಿ ಕಮಿನಷರ್ ಆದೇಶ ಹೊರಡಿಸಿದ್ದಾರೆ. ಮೂರು ಠಾಣೆಯ…

Read More

Chanakya Niti: ಈ ಗುಣಗಳು ವ್ಯಕ್ತಿಗೆ ಯಶಸ್ಸು, ಗೌರವವನ್ನು ತಂದುಕೊಡುತ್ತದೆ – Kannada News | Chanakya Niti: If you have these qualities, you will definitely be successful in life

ಯಶಸ್ಸನ್ನು (success) ಸಾಧಿಸಬೇಕು, ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕಾಗಿ ಕಠಿಣ ಪರಿಶ್ರಮವನ್ನೂ ಪಡುತ್ತಾರೆ. ಪರಿಶ್ರಮದ ಜೊತೆಗೆ ದೃಢ ಮನಸ್ಸು ಸಾಧಿಸುವ ಛಲ ಇದ್ದರೆ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ದೃಢ ಮನಸ್ಸಿನ ಜೊತೆಗೆ ಈ ಕೆಲವೊಂದಿಷ್ಟು ಗುಣಗಳನ್ನು ಸಹ ಬೆಳೆಸಿಕೊಳ್ಳಬೇಕು. ಅಂತಹ ಗುಣಗಳಿರುವ ಯಾರೇ ಆದರೂ ಸಹ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾರಂತೆ. ಹಾಗಿದ್ರೆ ಲೈಫಲ್ಲಿ ಸಕ್ಸಸ್‌ ಆಗಲು ಚಾಣಕ್ಯರು ಹೇಳಿರುವ ಯಾವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು…

Read More

ರಾಯಚೂರು ಶೈಕ್ಷಣಿಕ ಕ್ರಾಂತಿ: SSLC ಫಲಿತಾಂಶದಲ್ಲಿ 32 ರಿಂದ 21ನೇ ಸ್ಥಾನಕ್ಕೆ ಜಿಗಿತ – Kannada News | SSLC Excellence: Raichur District Jumps Ranks, Felicitation for State Toppers

ರಾಯಚೂರು, ಏ.28: ಜಿಲ್ಲೆಯು ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಜಿಲ್ಲೆಯು ಹಿಂದಿನ 32ನೇ ಸ್ಥಾನದಿಂದ 21ನೇ ಸ್ಥಾನಕ್ಕೆ ಏರಿರುವುದು ಐತಿಹಾಸಿಕ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಈ ಶೈಕ್ಷಣಿಕ ಸಾಧನೆಗಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಖದೇವ್ ಸೇರಿದಂತೆ ಐವರು ಉನ್ನತ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತವು ಸನ್ಮಾನಿಸಿತು. ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಪೋಷಕರು, ಶಿಕ್ಷಕರು ಮತ್ತು ಸಂಸ್ಥೆಗಳ ಬೆಂಬಲವನ್ನು ಶ್ಲಾಘಿಸಿದ್ದಾರೆ. ಎಂಡಿಆರ್ಎಸ್ ಅಡವಿಭಾವಿಯ ಪ್ರವೀಣ್ ಮತ್ತು ಬಿವಿಆರ್ ಶಾಲೆಯ ಸುಖದೇವ್ ಸೇರಿದಂತೆ…

Read More

ವೆಲ್​ಕಮ್ ಟು ರೋಮ್, ಮೈ ಫ್ರೆಂಡ್, ರೋಮ್​ಗೆ ಬಂದಿಳಿದ ಪ್ರಧಾನಿ ಮೋದಿಯನ್ನು ಸ್ವಾಗತಿಸಿ, ಸೆಲ್ಫಿ ಹಂಚಿಕೊಂಡ ಜಾರ್ಜಿಯಾ ಮೆಲೋನಿ – Kannada News | Giorgia Meloni Welcomes Narendra Modi During Visit to Rome

ರೋಮ್, ಮೇ 20: ಭಾರತ ಮತ್ತು ಇಟಲಿ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಇತಿಹಾಸ ಬರೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಜಾಗತಿಕ ಪ್ರವಾಸದ ಕೊನೆಯ ಹಾಗೂ ಅಂತ್ಯಂತ ಮಹತ್ವದ ಹಂತ ಇಟಲಿಯಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಇಟಲಿಯ ರಾಜಧಾನಿ ರೋಮ್‌ಗೆ ಆಗಮಿಸುವ ಮೂಲಕ ತಮ್ಮ ಐದು ರಾಷ್ಟ್ರಗಳ ಸುದೀರ್ಘ ಯುರೋಪಿಯನ್ ಪ್ರವಾಸದ ಕೊನೆಯ ಮತ್ತು ಅತ್ಯಂತ ಪ್ರಮುಖ ಘಟ್ಟವನ್ನು ತಲುಪಿದ್ದಾರೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 3ರ ದಿನಭವಿಷ್ಯ

ಪ್ರೀತಿಯಲ್ಲಿ ಇದ್ದು, ವಿರಸಗಳು ಪದೇ ಪದೇ ಆಗುತ್ತಾ ಇದ್ದಲ್ಲಿ ಹಾಗೂ ಮದುವೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ನಾನಾ ರೀತಿ ಅಡೆತಡೆಗಳು ಎದುರಾಗುತ್ತಾ ಇದ್ದಲ್ಲಿ ‘ರೋಸ್ ಕ್ವಾರ್ಟ್ಜ್’ ಸ್ಟೋನ್ ಉಂಗುರ, ಹಾರ ಅಥವಾ ಬ್ರೇಸ್ ಲೆಟ್ ಹಾಕಿದಲ್ಲಿ ಶುಭ ಬೆಳವಣಿಗೆಗಳು ಆಗಲಿವೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ನಿಮ್ಮ ಬಳಿ ಇರುವಂಥ ಉಳಿತಾಯ- ಹೂಡಿಕೆ ಹಣವನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡುವುದಕ್ಕೆ ಇದು ಸೂಕ್ತ…

Read More

Uttara Kannada: ಮೋಜು ಮಸ್ತಿಗಾಗಿ ಅರಣ್ಯ ಅಧಿಕಾರಿಗಳಿಂದಲೇ ಮರಗಳ ಮಾರಣ ಹೋಮ? ತನಿಖೆಗೆ ಆದೇಶ – Kannada News | Kali Tiger Reserve: Forest Officials Accused of Illegal Tree Felling for Pergola

ನಿರ್ಮಾಣ ಮಾಡಲಾಗಿರುವ ಪ್ಯಾರಾಗೋಲಾ ಉತ್ತರ ಕನ್ನಡ, ಜನವರಿ 21: ಮೋಜು ಮಸ್ತಿ, ಪಾರ್ಟಿ ಮಾಡಲು ಅರಣ್ಯ ಅಧಿಕಾರಿಗಳೇ ಮರಗಳ ಮಾರಣ ಹೋಮ ಮಾಡಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ಯಾರಾಗೋಲಾ ನಿರ್ಮಾಣ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಅರಣ್ಯ ವಲಯ ಪ್ರದೇಶದಲ್ಲಿ ಪ್ಯಾರಾಗೋಲಾ ನಿರ್ಮಿಸಲಾಗುತ್ತಿದ್ದು, ಅರಣ್ಯ ಸಂಪತ್ತನ್ನು ಉಳಿಸ ಬೇಕಿದ್ದ ಅಧಿಕಾರಿಗಳೇ ಕಾಡು ನಾಶ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ದಟ್ಟ ಅರಣ್ಯ ಮಧ್ಯ ಎರಡರಿಂದ ಮೂರು ಮರಗಳ ಕಟಾವು ಶಂಕೆ…

Read More

ಬಳ್ಳಾರಿಯಲ್ಲಿ ಲಾಡ್ಜ್ ಮಾತ್ರವಲ್ಲ ಮನೆಗಳಲ್ಲೂ ವೇಶ್ಯಾವಾಟಿಕೆ: 8 ಮಹಿಳೆಯರ ರಕ್ಷಣೆ

ಬಳ್ಳಾರಿ, ಮೇ 21: ವಿವಿಧ ಏರಿಯಾಗಳಲ್ಲಿ ನಡೆದಿದ್ದ ವೇಶ್ಯಾವಾಟಿಕೆ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸತ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಧಿನಗರ, ಎಪಿಎಂಸಿ ಮತ್ತು ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಏಕಕಾಲದಲ್ಲಿ ದಿಢೀರ್ ದಾಳಿ ಮಾಡಿದ್ದಾರೆ. ಈ ವೇಳೆ ದಂಧೆಯಲ್ಲಿ ತೊಡಗಿದ್ದ 6 ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ 8 ಮಹಿಳಾ ಸಂತ್ರಸ್ತೆಯರನ್ನು…

Read More

ಬೈಕ್​ನಲ್ಲಿ ಬರುವಾಗ ಗಾಳಿಪಟದ ದಾರ ತಪ್ಪಿಸಲು ಹೋಗಿ ಪತ್ನಿ, ಮಗಳ ಸಮೇತ ಸೇತುವೆಯಿಂದ ಬಿದ್ದ ಸವಾರ, ಮೂವರು ಸಾವು – Kannada News | Surat Kite String Tragedy: Family of 3 Dies After Bike Falls 70 Feet from Bridge

ಸೂರತ್, ಜನವರಿ 16: ಹುಟ್ಟು ಸಾವು ಎರಡೂ ದೈವ ನಿರ್ಣಯ ಅಂತಾರೆ, ಯಾವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ತಪ್ಪಿಸಲು ಹೋದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೈಕ್​ನಲ್ಲಿ ಬರುವಾಗ ಗಾಳಿಪಟ(Kite)ದ ದಾರವನ್ನು ತಪ್ಪಿಸಲು ಹೋಗಿ ವ್ಯಕ್ತಿಯೊಬ್ಬ ಪತ್ನಿ, ಮಗಳ ಸಮೇತ ಸೇತುವೆಯಿಂದ ಕೆಳಗೆಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ. ಮಕರ ಸಂಕ್ರಾಂತಿ ದಿನದಂದು ಆಕಸ್ಮಿಕವಾಗಿ ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದ 35 ವರ್ಷದ…

Read More