Headlines

ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ ಎಂದ ಡಿಕೆಶಿ: ಬಸ್ ಪ್ರಯಾಣ ದರ ಏರಿಕೆಗೆ ಚಿಂತನೆ – Kannada News | Karnataka CM Eyes Transport Fare Hike Amidst Stark Diesel Price Differences.

ಬೆಂಗಳೂರು, ಜೂ.20: ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳದ ಬಗ್ಗೆ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳು ಈಗಾಗಲೇ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದು, ಈ ಬಗ್ಗೆ ಸರ್ಕಾರ, ಎಷ್ಟು ಏರಿಕೆ ಮಾಡಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿದೆ. ಈ ಬಗ್ಗೆ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಡೀಸೆಲ್ ಬೆಲೆ ತೀವ್ರ ಹೆಚ್ಚಾಗಿದೆ.ಡಿಪೋದ ಬೆಲೆಗೂ, ಖಾಸಗೀಯಾಗಿ ಸಿಗುವ ಡಿಸೆಲ್ ಗೂ ಅಜಗಾಂತರ ವ್ಯತ್ಯಾಸ ಇದ್ದು, ಡೀಸೆಲ್ ದರ ನೋಡಿದ್ರೆ ಗಾಬರಿಯಾಗುತ್ತೆ…

Read More

NEET UG Re-Exam: ನಾಳೆ ನೀಟ್ ಮರುಪರೀಕ್ಷೆ; ಪರೀಕ್ಷಾ ಕೇಂದ್ರಕ್ಕೆ ಏನು ತರಲೇಬೇಕು, ಯಾವುದು ನಿಷೇಧ? ಡ್ರೆಸ್ ಕೋಡ್ ಏನು? – Kannada News | NEET UG 2026 Re Exam Tomorrow; What To Carry, What Not To Bring To Centre, Dress Code, Gate closing Time details here

ನವದೆಹಲಿ, ಜೂನ್ 20: ನಾಳೆ (ಜೂನ್ 21) ನಡೆಯಲಿರುವ ನೀಟ್-ಯುಜಿ (NEET UG 2026) ಮರುಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಗೊಂದಲಗಳಿಗೆ ಅವಕಾಶ ನೀಡದಂತೆ ಡ್ರೆಸ್ ಕೋಡ್ ಹಾಗೂ ಕೊಂಡೊಯ್ಯಬೇಕಾದ ವಸ್ತುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಯಮ ಉಲ್ಲಂಘಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನಿಷೇಧಿಸಲಾಗುವುದು. ಹೀಗಾಗಿ, ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಈ ಕೆಳಗಿನ ವಿಷಯಗಳನ್ನು ಮರೆಯಬೇಡಿ. ಪರೀಕ್ಷಾ ಕೇಂದ್ರಕ್ಕೆ ಏನು…

Read More

MLC ಮಾಡುವಂತೆ ರಾಹುಲ್ ಗಾಂಧಿಗೆ ಮೈಸೂರು ಕಾಂಗ್ರೆಸ್ ಕಾರ್ಯಕರ್ತ ಪತ್ರ – Kannada News | Mysuru Congress Worker Basavanna writes Letter To Rahul gandhi For MLC Post

ಮೈಸೂರು, (ಏಪ್ರಿಲ್ 19): ಒಂದೆಡೆ ಸಂಪುಟ ಪುನಾರಚನೆ ಮಾಡಬೇಕೆಂದು ಕೆಲ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಬಂದಿದ್ದಾರೆ. ಇದರ ಮಧ್ಯೆ ಮೈಸೂರಿನ ಕಾಂಗ್ರೆಸ್ ಕಾರ್ಯಕರ್ತ ಬಸವಣ್ಣ ಎನ್ನುವರು ವಿಧಾನಪರಿಷ್ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಮೂರು ಬಾರಿ ಪತ್ರ ಬರೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈಗ ನಾಲ್ಕನೇ ಬಾರಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದು, ವಿಧಾನಪರಿಷತ್​ ಸದಸ್ಯ ಸ್ಥಾನ ಕೊಡಿ ಇಲ್ಲ ದಯಾಮರಣ ಕೊಡಿ ಎಂದಿದ್ದಾರೆ. ಈ ಬಗ್ಗೆ…

Read More

IPL 2026 Final: ಸತತ 2ನೇ ಟ್ರೋಫಿ; ಸಿಎಸ್​​ಕೆ, ಮುಂಬೈ ದಾಖಲೆ ಸರಿಗಟ್ಟಿದ ಆರ್​ಸಿಬಿ

2026 ರ ಐಪಿಎಲ್ ಫೈನಲ್‌ನಲ್ಲಿ, ರಜತ್ ಪಾಟಿದಾರ್ ನಾಯಕತ್ವದ ಆರ್​ಸಿಬಿ, ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿ ಸತತ ಎರಡನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ, ಆರ್​ಸಿಬಿ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದ ಮೂರನೇ ತಂಡವೆಂಬ ದಾಖಲೆಯನ್ನು ಬರೆಯಿತು (PC-PTI). ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಾತ್ರ ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದವು. ಇದೀಗ ಆರ್‌ಸಿಬಿ ಈ ಎರಡು ತಂಡಗಳ…

Read More

IND vs SA: 13 ವರ್ಷಗಳ ಹಳೆಯ ವಿಶ್ವ ದಾಖಲೆ ಮುರಿದ ವೈಭವ್ ಸೂರ್ಯವಂಶಿ

ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿಯೇ ವೈಭವ್ ಸೂರ್ಯವಂಶಿ ತಂಡವನ್ನು ಮುನ್ನಡೆಸುವ ಮೂಲಕ ಅಂಡರ್-19 ತಂಡವನ್ನು ಮುನ್ನಡೆಸಿದ ವಿಶ್ವದ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವ ದಾಖಲೆ ಸೃಷ್ಟಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದು ಮತ್ತೊಂದು ವಿಶ್ವದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ದಕ್ಷಿಣ ಆಪ್ರಿಕಾ ತಂಡವನ್ನು 233 ರನ್​​ಗಳಿಂದ…

Read More

ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ – Kannada News | Bigg Boss Kannada: Spandana and Rashika engaged in a fight

ಬಿಗ್​​ಬಾಸ್ (Bigg Boss) ಮನೆಯಲ್ಲಿ ಜಗಳ, ಪ್ರೀತಿ, ಗಲಾಟೆ ಎಲ್ಲವೂ ಮಾಮೂಲು. ಟಾಸ್ಕ್ ಬಂದಾಗಲಂತೂ ಮೆತ್ತಗಿದ್ದವರೂ ಸಹ ಗಟ್ಟಿಯಾಗಿ ಜಗಳಕ್ಕೆ ನಿಲ್ಲುತ್ತಾರೆ. ಕೆಲವೊಮ್ಮೆ ಕೈ-ಕೈ ಮಿಲಾಯಿಸಿದ್ದೂ ಸಹ ಇದೆ. ಸ್ಪಂದನಾ ಬಿಗ್​​ಬಾಸ್ ಮನೆಯಲ್ಲಿ ದಂತದ ಬೊಂಬೆಯಂತೆ ಇದ್ದಾರೆ. ಹೆಚ್ಚಾಗಿ ಟಾಸ್ಕ್​​ಗಳಲ್ಲಿ ಇನ್ನಿತರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಾದರೂ ತಮ್ಮ ಅಂದ, ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಆದರೆ ಅವಶ್ಯಕತೆ ಬಂದರೆ ತಾವು ಕೈ-ಕೈ ಮಾಲಿಸುವುದಕ್ಕೂ ಸೈ ಎಂಬುವನ್ನು ಅವರು ತೋರಿಸಿಕೊಟ್ಟಿದ್ದಾರೆ. ಇದೀಗ ಟಾಸ್ಕ್ ಒಂದಕ್ಕೆ ಸಂಬಂಧಿಸಿದಂತೆ ರಾಶಿಕಾ ಮೇಲೆ ಕುಸ್ತಿ ಮಾಡಿದ್ದಾರೆ….

Read More

Daily Devotional: ಸಣ್ಣ ವಿಷಯಗಳಿಗೆ ಕೋಪ ಬರೋದು ಯಾಕೆ ಗೊತ್ತಾ? – Kannada News | Daily Devotional: Why you get Angry on small things, managing anger

ಬೆಂಗಳೂರು, ಜನವರಿ 28: ಮಾನವನಲ್ಲಿ ತಾಮಸ, ರಜೋ, ಸತ್ವ ಗುಣಗಳಿದ್ದರೂ, ಪರಿಸ್ಥಿತಿಗಳು ಕೆಲವೊಮ್ಮೆ ವ್ಯಕ್ತಿಗಳನ್ನು ಕೋಪಿಷ್ಟರನ್ನಾಗಿ ಮಾಡಬಹುದು. ಅತಿಯಾದ ಕೋಪವು ದುಃಖಕ್ಕೆ ಮೂಲವಾಗಿದ್ದು, “ಅತಿ ಸರ್ವತ್ರ ವರ್ಜಯೇತ್” ಎಂಬ ತತ್ವದಂತೆ ಎಲ್ಲವೂ ಮಿತಿಯಲ್ಲಿರಬೇಕು. ಅನಗತ್ಯ ಕೋಪವು ಮನುಷ್ಯನ ಸರ್ವನಾಶಕ್ಕೆ ಕಾರಣವಾಗುತ್ತದೆ. ಅಧಿಕಾರದ ದರ್ಪ, ದುಡ್ಡಿನ ವ್ಯಾಮೋಹ, ಶ್ರೀಮಂತಿಕೆಯ ದರ್ಪ ಮತ್ತು ಅಹಂಕಾರದಿಂದ ಉಂಟಾಗುವ ಕೋಪ ವ್ಯಕ್ತಿಯ ಅವನತಿಗೆ ದಾರಿ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ, ಬುದ್ಧಿಕಾರಕನಾದ ಬುಧ ಗ್ರಹ ದುರ್ಬಲವಾಗಿದ್ದಾಗ, ಪಾಪಗ್ರಹಗಳ ದೃಷ್ಟಿ ಇದ್ದಾಗ ಅಥವಾ ನೀಚನಾಗಿದ್ದಾಗ ವ್ಯಕ್ತಿಗಳಲ್ಲಿ…

Read More

Vastu for Wedding Cards: ಮದುವೆಯ ಆಮಂತ್ರಣ ಪತ್ರಿಕೆ ಮುದ್ರಿಸುವ ಮುನ್ನ ಈ ವಾಸ್ತು ನಿಯಮ ತಿಳಿದುಕೊಳ್ಳಿ – Kannada News | Vastu for Wedding Cards: Auspicious Colors and Designs for a Blessed Marriage

ಸನಾತನ ಧರ್ಮದ ಗ್ರಂಥಗಳಲ್ಲಿ ಮದುವೆ ಸೇರಿದಂತೆ 16 ಸಂಸ್ಕಾರಗಳನ್ನು ವಿವರಿಸಲಾಗಿದೆ. ಅವುಗಳಲ್ಲಿ ವಿವಾಹವನ್ನು ಮಾನವನ ಜೀವನದ ಅತ್ಯಂತ ಪವಿತ್ರ ಮತ್ತು ಮಹತ್ವದ ಹಂತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕೇ ಮದುವೆಯ ಆಮಂತ್ರಣ ಪತ್ರಿಕೆಗೂ ವಿಶೇಷ ಮಹತ್ವವಿದೆ. ಅದು ಕೇವಲ ಆಮಂತ್ರಣ ಪತ್ರವಲ್ಲ, ಬದಲಾಗಿ ಹೊಸ ಜೀವನದ ಆರಂಭವನ್ನು ಘೋಷಿಸುವ ಮೊದಲ ಅಧಿಕೃತ ಸಂದೇಶವಾಗಿದೆ. ಪ್ರಾಚೀನ ವಾಸ್ತು ಶಾಸ್ತ್ರವು ಜೀವನದ ಎಲ್ಲ ಹಂತಗಳಿಗೂ ಮಾರ್ಗದರ್ಶನ ನೀಡುವ ವಿಜ್ಞಾನವಾಗಿದೆ. ಮದುವೆಯ ಆಮಂತ್ರಣ ಪತ್ರಿಕೆ ಹೇಗಿರಬೇಕು, ಅದರಲ್ಲಿ ಯಾವ ಬಣ್ಣಗಳು, ಪದಗಳು ಮತ್ತು…

Read More

ರಿಷಬ್ ಶೆಟ್ಟಿಗೆ ಐಎನ್​​ಸಿಎ ಅವಾರ್ಡ್: ಧನ್ಯವಾದ ಹೇಳಿದ್ದು ಯಾರಿಗೆ? – Kannada News | Rishab Shetty got three INCA awards for Kantaran Chapter 1

‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾಗಳು ರಿಷಬ್ ಶೆಟ್ಟಿಯನ್ನು (Rishab Shetty) ಪ್ಯಾನ್ ಇಂಡಿಯಾ ಸ್ಟಾರ್ ನಟ ಮತ್ತು ನಿರ್ದೇಶಕರನ್ನಾಗಿ ಮಾಡಿವೆ. ಈ ಎರಡು ಸಿನಿಮಾಗಳು ರಿಷಬ್ ಅವರಿಗೆ ಹಲವು ವೇದಿಕೆಗಳಲ್ಲಿ ಗೌರವ ಪ್ರಾಪ್ತವಾಗುವಂತೆ ಮಾಡಿದೆ. ‘ಕಾಂತಾರ’ ಮತ್ತು ‘ಕಾಂತಾರ 1’ ಸಿನಿಮಾಗಳಿಗೆ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದು, ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಐಎನ್​​ಸಿಎ ಪ್ರಶಸ್ತಿ ಸಹ ಲಭಿಸಿದೆ. ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ, ಅತ್ಯುತ್ತಮ…

Read More

Bengaluru Air Quality: ಬೆಳಗಾವಿ, ಹುಬ್ಬಳ್ಳಿ ಸೇರಿ ಹಲವೆಡೆ ವಾಯುಗುಣಮಟ್ಟದಲ್ಲಿ ಸುಧಾರಣೆ! – Kannada News | Bangalore Air Pollution Crisis: Belagavi Air Quality is getting better

ಬೆಳಗಾವಿ, ಹುಬ್ಬಳ್ಳಿ ಸೇರಿ ಹಲವೆಡೆ ವಾಯುಗುಣಮಟ್ಟದಲ್ಲಿ ಸುಧಾರಣೆ! ಬೆಂಗಳೂರು, ಏಪ್ರಿಲ್ 20: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality)  ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ…

Read More