Video: ಬಲೆ ಭಾರವಾಗ್ತಿದೆ ದೊಡ್ಡ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು
ತೆಲಂಗಾಣ, ಮಾರ್ಚ್ 10: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಅಪರೂಪದ ಘಟನೆ ನಡೆದಿದೆ. ತೇಕುಲಪಲ್ಲಿ ಮಂಡಲದ ರೋಲ್ಲಪಾಡು ಗ್ರಾಮದ ಕೊಳದಲ್ಲಿ ಮೀನುಗಾರಿಕೆಗೆ ಇಟ್ಟಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಸಿಲುಕಿ ಸಾವನ್ನಪ್ಪಿದೆ.ಪ್ರತಿದಿನದಂತೆ, ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಕೊಳದಲ್ಲಿ ಬಲೆ ಬೀಸಿದ್ದರು. ಮರುದಿನ ಬೆಳಿಗ್ಗೆ, ಕೊಳಕ್ಕೆ ಹೋಗಿ ಬಲೆ ಎಳೆಯುತ್ತಿದ್ದಾಗ, ಒಂದು ದೊಡ್ಡ ಭಾರವಾದ ವಸ್ತು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿದ್ದರು. ಇದು ಮೀನುಗಾರರನ್ನು ಆಶ್ಚರ್ಯಗೊಳಿಸಿತು. ಏನಾಯಿತು ಎಂದು ನೋಡಲು ಅವರು ಬಲೆಯನ್ನು ದಡಕ್ಕೆ ಎಳೆದಾಗ, ಸುಮಾರು 12…