ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು! – Kannada News | Bangalore Rental Home Cyber Fraud: AI Photo Scams Target Renters Online
ಆನ್ಲೈನ್ ನಲ್ಲಿ ಬಾಡಿಗೆ ಮನೆ ಹುಡುಕುವವರೇ ಎಚ್ಚರ! ನೀವು ಹೀಗೂ ಮೋಸ ಹೋಗಬಹುದು! ಬೆಂಗಳೂರು, ಫೆಬ್ರವರಿ 18: ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಹುಡುಕುವವರನ್ನೇ ಟಾರ್ಗೆಟ್ ಮಾಡಿಕೊಂಡು ಸೈಬರ್ ವಂಚಕರು ಹೊಸ ತಂತ್ರದ ಮೂಲಕ ಹಣ ದೋಚುತ್ತಿರುವ ಪ್ರಕರಣಗಳು ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿವೆ. ಐಷಾರಾಮಿ ಫ್ಲಾಟ್‌ಗಳ ಎಐ ಫೋಟೋಗಳನ್ನು ಬಳಸಿ ಜಾಹೀರಾತು ಹಾಕಿ, ನಂತರ ಅಡ್ವಾನ್ಸ್ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದ್ದು, ವಂಚಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಡ್ವಾನ್ಸ್ ಹೆಸರಿನಲ್ಲಿ ಸಾವಿರಾರು ರೂ. ಜೇಬಿಗೆ!…