ಇಸ್ರೇಲ್ ಸೇನೆಯ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿ; ಶರಣಾದರೂ ಕಾರಿನ ಮೇಲೆ ಶೂಟಿಂಗ್ – Kannada News
ಜೆರುಸಲೇಂ, ಜೂನ್ 6: ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ (Israel) ಸೇನೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಹೆಬ್ರಾನ್ ನಗರದಲ್ಲಿ ಇಸ್ರೇಲ್ ಸೇನೆಯು ಕುಟುಂಬವೊಂದು ಚಲಾಯಿಸುತ್ತಿದ್ದ ವಾಹನದ ಮೇಲೆ ನಡೆಸಿದ ಗುಂಡಿನ ದಾಳಿಗೆ 7 ತಿಂಗಳ ಪ್ಯಾಲೆಸ್ತೀನ್ ಮಗು ಬಲಿಯಾಗಿದೆ ಎಂದು ಮಗುವಿನ ಕುಟುಂಬಸ್ಥರು ಮತ್ತು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಶಿಶುವನ್ನು ಸ್ಯಾಮ್ ಫಹದ್ ಅಬು ಹೈಕಲ್ ಎಂದು…