ಟ್ರಂಪ್ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ
ವಾಷಿಂಗ್ಟನ್, ಮಾರ್ಚ್ 17: ಇಸ್ರೇಲ್ ಜೊತೆ ಸೇರಿಕೊಂಡು ಇರಾನ್ (Iran War) ಮೇಲೆ ಅಮೆರಿಕ ಕೂಡ ದಂಡೆತ್ತಿ ಹೋಗಿತ್ತು. ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ, ಸುಪ್ರೀಂ ನಾಯಕ ಖಮೇನಿಯನ್ನು ಕೊಂದರೆ ಸೋಲೊಪ್ಪಿಕೊಂಡು ಇರಾನ್ ತಮ್ಮ ಅಡಿಯಾಳಾಗುತ್ತದೆ ಎಂಬ ಭ್ರಮೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ (Donald Trump) ಇರಾನ್ ಸರಿಯಾಗೇ ಬೆವರಿಳಿಸುತ್ತಿದೆ. ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸುತ್ತಲೇ ಇರುವ ಇರಾನ್ ತಾನು ನಾಶವಾಗುವುದಾದರೆ ಅಮೆರಿಕ ಮತ್ತು ಇಸ್ರೇಲ್ ಅನ್ನು ನಾಶಮಾಡಿಯೇ ತೀರುತ್ತೇನೆ…