Headlines

9 ವರ್ಷಗಳ ಬಳಿಕ ಚೀನಾಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ: ಟ್ರಂಪ್-ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ! – Kannada News | US China Summit: Trump & Xi Jinping Discuss Trade, Taiwan and Middle East Crisis

ಬೀಜಿಂಗ್, ಮೇ.11: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13 ರಿಂದ 15 ರವರೆಗೆ ಚೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಪ್ರಕಟಿಸಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರೊಬ್ಬರು ಚೀನಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಈ ಭೇಟಿಯು ಅತ್ಯಂತ ನಿರ್ಣಾಯಕ ಸಮಯದಲ್ಲಿ ನಡೆಯುತ್ತಿದೆ. ಪ್ರಸ್ತುತ ಅಮೆರಿಕ-ಇಸ್ರೇಲ್-ಇರಾನ್ ನಡುವೆ ಸುದೀರ್ಘ ಯುದ್ಧ ನಡೆಯುತ್ತಿದ್ದು, ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಜಾಗತಿಕ…

Read More

Horoscope Today: ಇಂದು ಈ ರಾಶಿಯವರಿಗೆ ಇಂದು ಆರ್ಥಿಕ ಸಮಸ್ಯೆ! – Kannada News | Horoscope Today 03 May​ 2026: Dr. Basavaraj Gurujis Predictions for Zodiac Signs

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 3, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಬಿದಿಗೆ ತಿಥಿ, ವರಿಯನ್ ಯೋಗ, ತೈತಲ ಕರಣ ಮತ್ತು ಅನುರಾಧ ನಕ್ಷತ್ರವಿರುವ ಈ ದಿನದ ವಿಶೇಷಗಳನ್ನು ಗುರೂಜಿ ವಿವರಿಸಿದ್ದಾರೆ. ಈ ದಿನ ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಪ್ರತಿಯೊಂದು…

Read More

‘ಧುರಂಧರ್ 2’ ಕತೆ ನಡೆಯುವುದು ಪಾಕಿಸ್ತಾನದಲ್ಲಿ, ಆದರೆ ಚಿತ್ರೀಕರಣ ಆಗಿದ್ದೆಲ್ಲಿ?

ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ (Dhurandahr 2) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಆದಿತ್ಯ ಧರ್ ನಿರ್ದೇಶಿಸಿರುವ ಈ ಸಿನಿಮಾ ಭಾರತದ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ವಿರುದ್ಧ ಏಕಾಂಗಿಯಾಗಿ ಹೋರಾಡುವ ಕತೆ ಹೊಂದಿದೆ. ಸಹಜವಾಗಿಯೇ ಸಿನಿಮಾದ ಇಡೀ ಕತೆ ನಡೆಯುವುದು ಪಾಕಿಸ್ತಾನದಲ್ಲಿಯೇ. ಅದರಲ್ಲೂ ಪಾಕಿಸ್ತಾನದ ಕರಾಚಿಯ ಲಯಾರಿ ಎಂಬ ಸ್ಥಳದಲ್ಲಿ. ಸಿನಿಮಾ ನೋಡಿದವರು, ನಿರ್ದೇಶಕ ಆದಿತ್ಯ ಧರ್, ಪಾಕಿಸ್ತಾನವನ್ನು ಇರುವ ಹಾಗೆಯೇ ತೋರಿಸಿದ್ದಾರೆ ಎನ್ನುತ್ತಿದ್ದಾರೆ. ಸಿನಿಮಾದ ಕತೆ ನಡೆಯುವುದು ಪಾಕಿಸ್ತಾನದಲ್ಲಿ ಆದರೆ…

Read More

ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ? – Kannada News | Iran US Israel war aggression, how it affects gold, silver, stock markets this week

ಇರಾನ್ ಮೇಲೆ ಇಸ್ರೇಲ್ ಏರ್​ಸ್ಟ್ರೈಕ್ ನವದೆಹಲಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗಳನ್ನು ಎಸಗಿರುವುದು ಈಗ ಪಶ್ಚಿಮ ಏಷ್ಯಾದಲ್ಲಿ (West Asia crisis) ದೊಡ್ಡ ಸಂಘರ್ಷ ವಾತಾವರಣ ಏರ್ಪಟ್ಟಿದೆ. ಈ ಯುದ್ದ ಅನಿರೀಕ್ಷಿತವಲ್ಲವಾದರೂ, ಮಾರುಕಟ್ಟೆಗಳಿಗೂ ಈ ಸಂದರ್ಭವು ಅನಿರೀಕ್ಷಿತವಲ್ಲವಾದರೂ, ಸಾಕಷ್ಟು ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಸ್ಟ್ರೇಟ್​ಗೆ (Strait of Hormuz) ತಡೆಯಾಗುವ ಸಂಭವ ಇರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಇದೂ ಸೇರಿದಂತೆ ವಿವಿಧ…

Read More

ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ? – Kannada News | Vignesh Shivan said he wrote a story for Ajit Kumar inspiring with KGF

‘ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಹಲವು ಸಿನಿಮಾ ನಿರ್ದೇಶಕರಿಗೆ, ನಾಯಕರಿಗೆ, ನಿರ್ಮಾಪಕರಿಗೆ ಮಾದರಿ ಹಾಕಿಕೊಟ್ಟ ಸಿನಿಮಾಗಳು. ನಾಯಕನ ಎಲಿವೇಶನ್, ಚಿತ್ರೀಕರಣದ ರೀತಿ, ಸಿನಿಮಾದ ಸ್ಕೇಲ್, ಆಧುನಿಕ ಗ್ಯಾಂಗ್​​ಸ್ಟರ್ ಕತೆಗಳು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತಿತ್ತು ಆ ಸಿನಿಮಾ. ‘ಕೆಜಿಎಫ್’ನಿಂದ ಸ್ಪೂರ್ತಿ ಪಡೆದು ಹಲವು ನಿರ್ದೇಶಕರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿದರು. ಕನ್ನಡದಲ್ಲಿ ‘ಕಬ್ಜ’ ಸಿನಿಮಾ ಸಹ ‘ಕೆಜಿಎಫ್’ ಸ್ಪೂರ್ತಿಯಿಂದಲೇ ಬಂದಿದ್ದು. ಅಸಲಿಗೆ ಸ್ಟಾರ್ ನಟಿ ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಸಹ ‘ಕೆಜಿಎಫ್’…

Read More

ಸರ್ಕಾರಿ ವಸತಿ ಕಾಲೇಜ್​ ವಿದ್ಯಾರ್ಥಿಗಳಿಗೆ ಗುಡ್​​​ ನ್ಯೂಸ್​​: ಸಚಿವ ಮಹದೇವಪ್ಪ ಮಹತ್ವದ ಘೋಷಣೆ

ಬೆಂಗಳೂರು, ಏಪ್ರಿಲ್ 10: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ (2nd PUC Result) ಏಪ್ರಿಲ್​ 09ರಂದು ಪ್ರಕಟವಾಗಿದ್ದು, ಈ ಬಾರಿ ಶೇಕಡಾ 86ರಷ್ಟು ಮಕ್ಕಳು ಪಾಸ್​ ಆಗುವ ಮೂಲಕ ಫಲಿತಾಂಶ ದಾಖಲೆ ಮಟ್ಟಕ್ಕೆ ಏರಿಕೆ ಆಗಿದೆ. ಇನ್ನು ಸರ್ಕಾರಿ ವಸತಿ ಶಾಲೆಗಳಲ್ಲಿ ಶೇ.97.22 ಮಕ್ಕಳು ತೇರ್ಗಡೆಯಾಗಿದ್ದಾರೆ. ಆ ಮೂಲಕ ವಸತಿ ಶಾಲೆಗಳಲ್ಲೂ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. 72 ವಸತಿ ಕಾಲೇಜುಗಳಲ್ಲಿ ಜಿಇಇ, ಎಸ್​​ಇಇಟಿ ಮತ್ತು ಕೆಸಿಇಟಿ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತೇವೆ…

Read More

Women’s T20 World Cup: ಭಾರತದ ವಿರುದ್ಧ ಸೋತ ಪಾಕಿಸ್ತಾನ ತಂಡಕ್ಕೆ ದಂಡ – Kannada News | ICC Fines Pakistan Women’s Team in T20 World Cup 2026 for Slow Over Rate After India Defeat

ಭಾರತದ ವಿರುದ್ಧದ ಭಾರೀ ಸೋಲಿನ ನಂತರ, ಪಾಕಿಸ್ತಾನ ಮುಂದಿನ ಸುತ್ತಿಗೆ ಮುನ್ನಡೆಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ತೋರುತ್ತದೆ. ಏಕೆಂದರೆ ಪಾಕ್ ತಂಡ ಪ್ರಸ್ತುತ ಗ್ರೂಪ್ ಎ ನಲ್ಲಿ ಐದನೇ ಸ್ಥಾನದಲ್ಲಿದ್ದು ಅದರ ನೆಟ್ ರನ್​ರೇಟ್ -3,200 ಆಗಿದೆ. ಇದೀಗ ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ, ಈ ಪಂದ್ಯ ಜೂನ್ 17 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ (PC-PTI). Source link

Read More

ಅಪಾಯಕಾರಿ ಪಿಚ್ ಎಂದು ಪರಿಗಣಿಸಿ ಪಂದ್ಯವನ್ನೇ ರದ್ದು ಮಾಡಿದ ಅಂಪೈರ್ – Kannada News | Dangerous Pitch Forces West Indies Championship Match Cancellation After Player Injury

ವೆಸ್ಟ್ ಇಂಡೀಸ್‌ನ ಸರ್ ವಿವ್ ರಿಚರ್ಡ್ಸ್ ಮೈದಾನದಲ್ಲಿ ನಡೆಯುತ್ತಿದ್ದ ವೆಸ್ಟ್​ ಇಂಡೀಸ್ ಚಾಂಪಿಯನ್​ಶಿಪ್ ಪಂದ್ಯವನ್ನು ಅಪಾಯಕಾರಿ ಪಿಚ್ ಕಾರಣದಿಂದ ರದ್ದು ಮಾಡಲಾಗಿದೆ. ವೆಸ್ಟ್ ಇಂಡೀಸ್‌ನ ಹಿರಿಯ ವೇಗಿ ಜೇಡನ್ ಸೀಲ್ಸ್ ಎಸೆದ ಒಂದು ಬಾಲ್ ಪಿಚ್​​​ ಮೇಲೆ ಬಿದ್ದು ಭಾರೀ ಮಟ್ಟದಲ್ಲಿ ಬೌನ್ಸ್ ಆಗಿ ಬ್ಯಾಟ್ಸಮನ್ ಹೆಲ್ಮೆಟ್​​ಗೆ ಹೊಡೆದಿದೆ. ಇದಾದ ಬಳಿಕ ಅಂಪೈರ್​​ಗಳು ಪಂದ್ಯವನ್ನು ನಿಲ್ಲಿಸಲು ನಿರ್ಧರಿಸಿದರು. ಇದು ಚರ್ಚೆಗೆ ಗ್ರಾಸವಾಗಿದೆ. ಲೀವರ್ಡ್ ಐಲ್ಯಾಂಡ್ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೋ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು. ಲೀವರ್ಡ್…

Read More

ಸಿಖ್ಖರಿಗೆ ಮಾಡಿದ ಅವಮಾನ; ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ – Kannada News | Rahul Gandhi Called Ravneet Singh Bittu as traitor Because He Is Sikh PM Modi says in Parliament

ನವದೆಹಲಿ, ಫೆಬ್ರವರಿ 5: ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಹುಲ್ ಗಾಂಧಿ (Rahul Gandhi) ಇದುವರೆಗೂ ಕಾಂಗ್ರೆಸ್ ತೊರೆದ ಯಾರನ್ನೂ ದೇಶದ್ರೋಹಿ ಎಂದು ಕರೆದಿಲ್ಲ, ಆದರೆ ರವನೀತ್ ಬಿಟ್ಟು ಸಿಖ್ ಆಗಿರುವುದರಿಂದಲೇ ಅವರನ್ನು ದೇಶದ್ರೋಹಿ ಎಂದು ಕರೆದರು. ಸಿಖ್ಖರನ್ನು ಕಂಡರೆ ಕಾಂಗ್ರೆಸ್​​ನವರಿಗೆ ಆಗುವುದಿಲ್ಲ ಎಂದು ಮೋದಿ ಟೀಕಿಸಿದ್ದಾರೆ. “ನಿನ್ನೆ ಸಂಸತ್ ಹೊರಗೆ ಒಂದು ಘಟನೆ ನಡೆಯಿತು. ಈ ಸದನದ ಸಂಸದ ರವನೀತ್…

Read More

ಈ ತಿಂಗಳು ಈ ರಾಶಿಯವರು ಮಹಾತ್ಮರ ಅಥವಾ ದೊಡ್ಡವರ ವಿರೋಧವನ್ನು ಎದುರಿಸಬೇಕಾದೀತು

ಮಕರ ರಾಶಿಗೆ ಉತ್ತರಾಷಾಢ, ಶ್ರವಣ, ಧನಿಷ್ಠಾ ನಕ್ಷತ್ರಗಳು ಇರಲಿದ್ದು ಶ್ರವಣಾ ನಕ್ಷತ್ರಕ್ಕೆ ವಿಶೇಷ ಪರಿಣಾಮ ಬೀರಲಿದೆ. ಮೇ 2026ರಲ್ಲಿ ಮಕರ ರಾಶಿಯವರ ಗೋಚಾರ ಫಲ ಹಾಗೂ ಗ್ರಹಗತಿಗಳ ಪ್ರಭಾವದ ಹೀಗಿರಲಿದೆ. ​ಗ್ರಹಗಳ ಸಂಚಾರ: ಮಕರ ರಾಶಿಯವರಿಗೆ ಈ ತಿಂಗಳು ಗ್ರಹಗತಿಗಳು ಸವಾಲು ಮತ್ತು ಅವಕಾಶಗಳೆರಡನ್ನೂ ನೀಡುತ್ತಿವೆ. ​ಗುರುವು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿರುವುದು ಅಷ್ಟೊಂದು ಶುಭಕರವಲ್ಲ. ಶತ್ರುಗಳ ಕಾಟ ಅಥವಾ ಸಾಲದ ಸುಳಿ ಕಂಡುಬರಬಹುದು. ​ರವಿ ದಶೆ: ನಾಲ್ಕನೇ ಮನೆಯಲ್ಲಿ ರವಿ ಇರುವುದು ಸುಖಸ್ಥಾನಕ್ಕೆ ಕಿರಿಕಿರಿ ಉಂಟುಮಾಡಬಹುದು….

Read More