Headlines

ಹಾಲು ನಿಜವಾಗಿಯೂ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ – Kannada News | Milk and Calcium: How Effective Is It for Deficiency?

Milk And Calcium How Effective Is It For DeficiencyImage Credit source: Getty Images ಹಾಲು (Milk) ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ವರೆಗೆ ಒಂದು ಹೊತ್ತಾದರೂ ಹಾಲು ಕುಡಿಯುತ್ತಾರೆ. ಇದು ಬಹಳ ಸಾಮಾನ್ಯ. ದೇಹದ ಬೆಳವಣಿಗೆ ಮತ್ತು ಶಕ್ತಿ ನೀಡುವುದಕ್ಕೆ ಹಾಲು ಪೂರಕ ಎಂದು ಹೇಳಲಾಗುತ್ತದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಹೊರತಾಗಿಯೂ, ಹಾಲನ್ನು ಇನ್ನೂ ಪೌಷ್ಟಿಕಾಂಶದ ಮೂಲವೆಂದು ಪರಿಗಣಿಸಲಾಗುತ್ತದೆ. ಅದರಲ್ಲಿಯೂ…

Read More

ಭಾರೀ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಟಿಸಿಎಸ್​ನಿಂದ ಬ್ಯಾಂಡ್ ಡಿ ಪ್ಲಾನ್? 29,000ಕ್ಕೂ ಹೆಚ್ಚು ಮಂದಿಗೆ ಲೇ ಆಫ್ ಭೀತಿ? – Kannada News | TCS Job Cuts: Up to 29,000 Employees at Risk as ‘Band D’ Signals Mass Layoffs

ನವದೆಹಲಿ, ಮೇ 19: ಇತ್ತೀಚೆಗಷ್ಟೇ ಶೇ 2ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದ ಟಾಟಾ ಕನ್ಸಲ್ಪೆನ್ಸಿ ಸರ್ವಿಸಸ್ ಸಂಸ್ಥೆ (TCS- Tata Consultancy Services) ಈಗ ಇನ್ನೂ ಉಗ್ರ ಹೆಜ್ಜೆ ಇಡುವ ಯೋಜನೆ ಹಾಕಿದೆ. ಮಿಂಟ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಟಿಸಿಎಸ್​ನ ಶೇ. 5ರಷ್ಟು ಉದ್ಯೋಗಿಗಳನ್ನು ‘ಬ್ಯಾಂಡ್ ಡಿ’ಗೆ (Band D) ವರ್ಗೀಕರಿಸಲು ಹೊರಟಿದೆ. ಟಿಸಿಎಸ್​ನ ಮ್ಯಾನೇಜರ್​ಗಳಿಗೆ ಈ ನಿಟ್ಟಿನಲ್ಲಿ ಸೂಚನೆ ಕೊಡಲಾಗಿದೆ. ವರದಿ ಪ್ರಕಾರ ಈಗಾಗಲೇ ಮ್ಯಾನೇಜರ್​ಗಳು 17,500 ಉದ್ಯೋಗಿಗಳನ್ನು ಡಿ ಬ್ಯಾಂಡ್​ಗೆ ವರ್ಗೀಕರಿಸಿದ್ದಾರೆ. ಕಳಪೆ…

Read More

ಮೆಟ್ರೋ ಪ್ರಯಾಣಿಕರೇ ಗಮನಿಸಿ: ನೇರಳೆ ಮಾರ್ಗ ಸಂಬಂಧ ಮಹತ್ವದ ಮಾಹಿತಿ ಹಂಚಿಕೊಂಡ BMRCL

ಬೆಂಗಳೂರು, ಮೇ 31: ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ, ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳು ಇಂದು (ಮೇ 31) ಬೆಳಿಗ್ಗೆ 7 ಗಂಟೆಯಿಂದಲೇ ಸಂಪೂರ್ಣವಾಗಿ ಲಭ್ಯವಿರುತ್ತವೆ. ಹೀಗಾಗಿ ಪ್ರಯಾಣಿಕರು ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಎಂಆರ್​​ಸಿಎಲ್​​ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನೇರಳೆ ಮಾರ್ಗದ ಕೆಲ ನಿಲ್ದಾಣಗಳ ನಡುವೆ ಇಂದು ಸಂಚಾರ ವ್ಯತ್ಯಯದ ಬಗ್ಗೆ ಈ ಹಿಂದೆಯೇ BMRCL ಮಾಹಿತಿ ನೀಡಿತ್ತು. BMRCL ಪ್ರಕಟಣೆಯಲ್ಲಿ ಏನಿದೆ? ಸಾರ್ವಜನಿಕ ಮಾಹಿತಿ-ನಿರ್ವಹಣಾ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ,…

Read More

‘ಟಾಕ್ಸಿಕ್’ ಸಿನಿಮಾ ಆಕ್ಷನ್ ಸಾಮಾನ್ಯವಾಗಿರಲ್ಲ: ಯಶ್ ಹೇಳಿದ್ದೇನು? – Kannada News | Yash talks about Toxic movie’s action and action director JJ Perry

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳ ಮೇಲೆ ಕೆಲ ದಿನಗಳಷ್ಟೆ ಇದೆ. ಯಶ್ ಅವರು ಇದೀಗ ಅಧಿಕೃತವಾಗಿ ಸಿನಿಮಾದ ಬಹಿರಂಗ ಪ್ರಚಾರ ಆರಂಭಿಸಿದ್ದಾರೆ. ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026ಗೆ ಹೋಗಿದ್ದ ಯಶ್, ತಮ್ಮ ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ಅದರಲ್ಲೂ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಯಶ್ ಅವರು ವಿಶೇಷವಾಗಿ ಮಾತನಾಡಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಕರಾಗಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಯಶ್ ಅವರು ಸಿನಿಮಾದ ಆಕ್ಷನ್…

Read More

ಫಸ್ಟ್​ ನೈಟ್​ಗೂ ಮೊದಲು ಹೆಂಡತಿಯ ಬೇಡಿಕೆ ಕೇಳಿ ಶಾಕ್ ಆದ ಗಂಡ! – Kannada News | Delhi Bride demands 90 lakh Rs to Touch her on First night groom shocked

ನವದೆಹಲಿ, ಏಪ್ರಿಲ್ 15: ಮದುವೆಯಾದ ಮೊದಲ ರಾತ್ರಿ ಹೆಂಡತಿಗಾಗಿ ಬೆಡ್​ ರೂಂನಲ್ಲಿ ಕಾದು ಕುಳಿತಿದ್ದ ಗಂಡನಿಗೆ ಶಾಕ್ (Viral News) ಕಾದಿತ್ತು. ಪ್ರೀತಿಯಿಂದ ಹೆಂಡತಿಯನ್ನು ಮುಟ್ಟಲು ಹೋದ ಗಂಡ ತನ್ನ ಹೆಂಡತಿಯ ಡಿಮ್ಯಾಂಡ್ ಕೇಳಿ ಆಘಾತಗೊಂಡಿದ್ದಾನೆ. ರೂಂನೊಳಗೆ ಬಂದ ಗಂಡನಿಗೆ ತನ್ನನ್ನು ಮುಟ್ಟಬೇಕೆಂದರೆ 90 ಲಕ್ಷ ರೂ. ಹಣ ಕೊಡಬೇಕೆಂದು ಹೆಂಡತಿ ಬೇಡಿಕೆ ಇಟ್ಟಿದ್ದಾಳೆ. ಇದನ್ನು ಕೇಳಿ ಗಂಡ ತಲೆ ತಿರುಗಿ ಬೀಳುವುದೊಂದೇ ಬಾಕಿ. ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಮೊದಲ ರಾತ್ರಿಯೇ…

Read More

Optical Illusion: ಗಿಳಿಗಳ ನಡುವೆ ಅಡಗಿದೆ ಬಣ್ಣದ ಚಿಟ್ಟೆ;‌ ಜಸ್ಟ್ 15 ಸೆಕೆಂಡುಗಳಲ್ಲಿ ಗುರುತಿಸಿ – Kannada News | Optical illusion: Ready to accept this challenge; Find the butterfly hidden among the parrots

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಒಂದು ರೀತಿಯ ಸವಾಲಿನ ಆಟಗಳು. ಹೀಗಾಗಿ ಈ ಸವಾಲಿನ ಆಟಗಳನ್ನು ಆಡಿ ಮುಗಿಸುವಷ್ಟರಲ್ಲಿ ಸುಸ್ತೋ ಸುಸ್ತು ಆಗಿರುತ್ತದೆ. ಹೌದು, ಇಂತಹ ಮೋಜಿನ ಆಟಗಳು ಸ್ವಲ್ಪ ಟ್ರಿಕ್ಕಿ ಅನಿಸಿದರೂ ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಇದು ಬುದ್ಧಿವಂತಿಕೆಗೆ ಸವಾಲೆಸುವ ಕಾರಣ ಹೆಚ್ಚಿನವರು ಈ ಒಗಟನ್ನು ಬಿಡಿಸುವಲ್ಲಿ ವಿಫಲರಾಗುತ್ತಾರೆ. ಇದೀಗ ಮೆದುಳಿಗೆ ಕೆಲಸ ನೀಡುವ ಕಠಿಣ ಸವಾಲಿನ ಚಿತ್ರವೊಂದು ವೈರಲ್‌ ಆಗಿದೆ….

Read More

ಬಿಜೆಪಿ ಶಾಸಕ ಬೆನ್ನಲ್ಲೇ ಗದಗ ASI ಲೋಕಾಯುಕ್ತ ಬಲೆಗೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸಪ್ಪ – Kannada News | Gadag Police Station ASI caught taking Rs 5 thousand bribe by Lokayukta

ಗದಗ, (ಫೆಬ್ರವರಿ 25): ಲೋಕಾಯುಕ್ತ (Lokayukta) ಅಧಿಕಾರಿಗಳ ದಾಳಿ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani) ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಸದ್ಯ ಮೂವರನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ. ಇದರ ಬೆನ್ನಲ್ಲೇ ಇದೀಗ ಗದಗ (Gadag)  ಶಹರ ಠಾಣೆ ASI ಚನ್ನಬಸಪ್ಪ ಇಂಗಳಳ್ಳಿ ಸಹ ಲೋಕಾಯುಕ್ತ ಬಲೆಬಿದ್ದಿದ್ದಾರೆ. ಪಿಟಿಷನ್ ಅರ್ಜಿ ವಿಚಾರಣೆಗೆ ಲಂಚ 10 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ…

Read More

ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ – Kannada News

ನವದೆಹಲಿ, ಜೂನ್ 3: ಜಾಗತಿಕ ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯೊಂದು ಮೌನವಾಗಿ ಆದರೆ ಅತ್ಯಂತ ಶಕ್ತಿಯುತವಾಗಿ ನಡೆಯುತ್ತಿದೆ. ದಶಕಗಳಿಂದ ಚೀನಾವನ್ನು ತಮ್ಮ ಪ್ರಮುಖ ಹೂಡಿಕೆಯ ತಾಣವಾಗಿ ನೆಚ್ಚಿಕೊಂಡಿದ್ದ ಜಪಾನ್‌ನ ದೈತ್ಯ ಹೂಡಿಕೆದಾರರು (Japanese investors) ಮತ್ತು ಬ್ಯಾಂಕುಗಳು, ಈಗ ಚೀನಾದಿಂದ ಮುಖತಿರುಗಿಸಿ ಭಾರತದತ್ತ ಮುಖ ಮಾಡುತ್ತಿದ್ದಾರೆ. ಜಪಾನ್‌ನ ಈ ದಿಕ್ಕು ಬದಲಾವಣೆಯು (Pivot) ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಭಾರಿ ಪ್ರಮಾಣದ ಬಂಡವಾಳವನ್ನು ತಂದುಕೊಡಲಿದೆ ಎಂದು ಜಾಗತಿಕ ಹಣಕಾಸು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ದೀರ್ಘಕಾಲದವರೆಗೆ…

Read More

ವಾರ ಭವಿಷ್ಯ: ಜೂನ್ 14 ರಿಂದ 20 ರವರೆಗೆ ಈ 4 ರಾಶಿಯವರಿಗೆ ಒಲಿಯಲಿದೆ ಧನಲಕ್ಷ್ಮಿ ಯೋಗ! – Kannada News | Weekly Horoscope June 14 to 20: Planetary Changes to Bring Fortune for These Zodiac Signs

2026ರ ಜೂನ್ 14ರಿಂದ ಜೂನ್ 20ರವರೆಗೆ ಮೂರನೇ ವಾರವಾಗಿದ್ದು, ಈ ಅವಧಿಯಲ್ಲಿ ಸೂರ್ಯ ಮತ್ತು ಬುಧ ಮಿಥುನದಲ್ಲೂ, ಶುಕ್ರ ಮತ್ತು ಗುರು ಕರ್ಕಾಟಕದಲ್ಲೂ, ಶನಿ ಮೀನ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ. ಸ್ವಕ್ಷೇತ್ರ ಹಾಗೂ ಉಚ್ಚಕ್ಷೇತ್ರದಲ್ಲಿ ಇರುವ ಗ್ರಹಗಳು ಶುಭಫಲವನ್ನು ನೀಡುವರು. ​ಮೇಷ ರಾಶಿ: ಮಂಗಳನ ಸ್ವಕ್ಷೇತ್ರ ಸಂಚಾರದಿಂದ ಧೈರ್ಯ ಹೆಚ್ಚಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ​ವೃಷಭ ರಾಶಿ: ಧನಲಾಭದ ಯೋಗವಿದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು…

Read More

ಮೂರು ಮದುವೆಯಾಗಿ ಲಕ್ಷಾಂತರ ರೂ. ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ! ಹೇಳಿದ್ದೇನು ನೋಡಿ – Kannada News | Woman Marries Three Men, Cheats Lakhs: Second Husband Reveals Details in Doddaballapura

ದೇವನಹಳ್ಳಿ, ಜನವರಿ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಮಹಿಳೆ, ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಮೂವರನ್ನು ವಂಚಿಸಿರುವುದು ಬಯಲಾಗಿದೆ. ಆಕೆ ಪ್ರೀತಿಸಿ ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದ್ದು, ಇದೀಗ ಆಕೆಯ ಮೋಸದಾಟದ ಬಗ್ಗೆ ಎರಡನೇ ಗಂಡ ಮಾಧ್ಯಮದ ಎದುರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಮೊದಲ ಪತಿ ತೀರಿಕೊಂಡಿದ್ದಾರೆ ಎಂದು ಸುಳ್ಳು ಹೇಳಿ ಸುಧಾರಾಣಿ ತನ್ನನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಸುಮಾರು 25 ಲಕ್ಷ ರೂಪಾಯಿಗಳಷ್ಟು ಹಣವನ್ನು ತೆಗೆದುಕೊಂಡಿದ್ದಾಳೆ. ನಂತರ,…

Read More