ದೋಸ್ತಿ ಜತೆ ಎಣ್ಣೆ ಪಾರ್ಟಿ ಮಾಡುವಾಗ ಎಚ್ಚರ: ಕುಡಿದ ಮತ್ತಿನಲ್ಲಿ ಗೆಳಯನನ್ನೇ ಕಲ್ಲು ಎತ್ತಿ ಹಾಕಿ ಕೊಂದ ಸ್ನೇಹಿತರು – Kannada News | Gajanoor Horror: Man Stripped, Stoned to Death by Friends in Shivamogga
ಗೆಳೆಯನ್ನು ಕೊಲೆ ಮಾಡಿದ ಸ್ನೇಹಿತರು ಶಿವಮೊಗ್ಗ, ಫೆ.13: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ (Shivamogga) ಭೀಕರ ಕೊಲೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೇ ಸೇರಿ ತನ್ನವನನ್ನೇ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ನಡೆದಿದೆ. ಶ್ರೀನಿವಾಸ (36) ಎಂಬುವವರೇ ಕೊಲೆಯಾದ ದುರ್ದೈವಿ. ಶಿವಮೊಗ್ಗ ನಗರದ ಹೊಸಮನೆ ನಿವಾಸಿಯಾಗಿದ್ದ ಶ್ರೀನಿವಾಸ್ ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ನೆಲೆಸಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಸ್ನೇಹ ಬಾರ್ ಎದುರಿಗಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…