ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವವರಿಗೆ ಯುಟಿ ಖಾದರ್ ಬಿಗ್ ಗಿಫ್ಟ್! ದೂರುಗಳ ನಿವಾರಣೆಗೆ ಬರಲಿದೆ 24×7 ಹೆಲ್ಪ್‌ಲೈನ್ – Kannada News | Karnataka Health Minister UT Khader Announces 24×7 Helpline to Address Patient Grievances in Hospitals
ಯುಟಿ ಖಾದರ್ (ಚಿತ್ರ ಲೃಪೆ: ಯಟಿ ಖಾದರ್ ಫೇಸ್ಬುಕ್ ಖಾತೆ)Image Credit source: Facebook ಬೆಂಗಳೂರು, ಜೂನ್ 22: ಸರ್ಕಾರಿ ಆಸ್ಪತ್ರೆಗಳಿಗೆ (Government Hospitals) ಚಿಕಿತ್ಸೆಗಾಗಿ ಬರುವ ಬಡ ಮತ್ತು ಸಾಮಾನ್ಯ ರೋಗಿಗಳಿಗೆ ಸ್ಪಂದಿಸಲು ಆರೋಗ್ಯ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಗೊಂದಲಗಳು ಹಾಗೂ ಸಿಬ್ಬಂದಿಗಳ ನಡೆಗಳ ಕುರಿತಾದ ದೂರುಗಳನ್ನು ಆಲಿಸಲು ಆರೋಗ್ಯ ಸಚಿವರ ಕಚೇರಿಯಿಂದಲೇ ನೇರವಾಗಿ ನಿಯಂತ್ರಿಸಲ್ಪಡುವ 24×7 ಹೆಲ್ಪ್‌ಲೈನ್ (ಸಹಾಯವಾಣಿ) ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ…