Ugadi 2026: ಆರೋಗ್ಯ ಮತ್ತು ಅಧ್ಯಾತ್ಮದ ಸಂಗಮ; ಯುಗಾದಿಯ ಬೇವು-ಬೆಲ್ಲ ಸೇವನೆಯ ಹಿಂದಿನ ರಹಸ್ಯ ಇಲ್ಲಿ ತಿಳಿದುಕೊಳ್ಳಿ
ಯುಗಯುಗಾಂತರಗಳಿಂದ ಯುಗಾದಿ ಹಬ್ಬವು ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಪ್ರತಿಯೊಂದು ಹಬ್ಬದಂತೆ ಯುಗಾದಿಯೂ ತನ್ನ ವಿಶಿಷ್ಟತೆಯನ್ನು ಹೊಂದಿದೆ, ವಿಶೇಷವಾಗಿ ಬೇವು ಬೆಲ್ಲದ ಸೇವನೆಯ ಮೂಲಕ. ಈ ಬಗ್ಗೆ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಆಯುರ್ವೇದದ ದೃಷ್ಟಿಯಿಂದ ಬೇವು ಮತ್ತು ಬೆಲ್ಲ ಎರಡೂ ಆರೋಗ್ಯ ಮತ್ತು ಶಕ್ತಿವರ್ಧಕಗಳಾಗಿವೆ. ಬೇವಿನು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಸಹಕಾರಿ. ಬೆಲ್ಲವೂ…