ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಮೈಸೂರು ಪೊಲೀಸರು – Kannada News | Mysuru SP Team Nabs Illegal Kerala Lottery Sellers in Periyapatna Raids
ಮೈಸೂರು, ಫೆ.12: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ವಿಶೇಷ ತಂಡ ಪತ್ತೆಹಚ್ಚಿ ಭರ್ಜರಿ ಕಾರ್ಯಾಚರಣೆ ನಡೆಸಿದೆ.ಪಿರಿಯಾಪಟ್ಟಣದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅರುಣ್ ಕುಮಾರ್ ಹಾಗೂ ಸ್ವಾಮಿ ಎಂದು ಹೇಳಲಾಗಿದೆ. ಅರುಣ್ ಕುಮಾರ್ ಪಿರಿಯಾಪಟ್ಟಣದ ವೆಂಕಟೇಶ್ವರ ವೇ ಬ್ರಿಡ್ಜ್ (Weigh Bridge) ಬಳಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಸ್ವಾಮಿಯನ್ನು ಪಿರಿಯಾಪಟ್ಟಣದ ಸಿಂಚನ ಹೋಟೆಲ್‌ನಲ್ಲಿ…