45 ವರ್ಷಗಳ ಹಿಂದೆ 90 ಕೆಜಿ ಗೋಧಿ ಕದ್ದಿದ್ದ ಕಳ್ಳ ಈಗ ಅರೆಸ್ಟ್ – Kannada News | 45 Years Later Madhya Pradesh Man Arrested Over Alleged Wheat Theft from 1980
ಭೋಪಾಲ್, ಫೆಬ್ರವರಿ 12: ನಲವತ್ತೈದು ವರ್ಷಗಳ ಹಿಂದೆ 90 ಕೆಜಿ ಗೋಧಿ(Wheat) ಕದ್ದಿದ್ದ ವ್ಯಕ್ತಿಯನ್ನು ಈಗ ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 1980ರಲ್ಲಿ ಈ ಘಟನೆ ನಡೆದಿತ್ತು. ಅದಾದ ಬಳಿಕ ವ್ಯಕ್ತಿ ತಲೆ ಮರೆಸಿಕೊಂಡಿದ್ದ. ಈ ಘಟನೆ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಸಲೀಂ(59)ಎಂದು ಗುರುತಿಸಲಾಗಿದ್ದು,ಪಕ್ಕದ ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ಬಂಧಿಸಲಾಗಿದೆ. ಆತ ರಹಸ್ಯವಾಗಿ ವಾಸಿಸುತ್ತಿದ್ದ ಮತ್ತು ತನ್ನ ಮಗನೊಂದಿಗೆ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ. ಕಳ್ಳತನ ನಡೆದ ಸಮಯದಲ್ಲಿ ಗೋಧಿಯ ಮೌಲ್ಯ 184…