Headlines

ಪ್ರಯಾಣಿಕರ ಪವರ್ ಬ್ಯಾಂಕ್​ನಿಂದ ಬೆಂಕಿ; ಇಂಡಿಗೋ ವಿಮಾನದಲ್ಲಿ ತಪ್ಪಿದ ಭಾರೀ ದುರಂತ – Kannada News | IndiGo plane evacuated in Chandigarh Airport after passengers power bank catches fire

ಚಂಡೀಗಢ, ಮೇ 5: ಚಂಡೀಗಢಕ್ಕೆ ಬಂದಿಳಿದ ಇಂಡಿಗೋ (IndiGo) ವಿಮಾನದೊಳಗೆ ಹೊಗೆ ಕಾಣಿಸಿಕೊಂಡಿದೆ. ಇಂಡಿಗೋ ಪ್ರಯಾಣಿಕರೊಬ್ಬರು ತಮ್ಮ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಮಾನದ ಸಿಬ್ಬಂದಿಗೆ ತಿಳಿಸಿದ ನಂತರ ತುರ್ತು ಸ್ಥಳಾಂತರಕ್ಕೆ ಆದೇಶಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲು ತುರ್ತು ಸ್ಲೈಡ್‌ಗಳನ್ನು ಸಹ ನಿಯೋಜಿಸಲಾಯಿತು. ಸ್ಥಳಾಂತರಿಸುವ ಪ್ರಕ್ರಿಯೆಯ ಸಮಯದಲ್ಲಿ ಪ್ರಯಾಣಿಕರಲ್ಲಿ ಒಬ್ಬರು ಗಾಯಗೊಂಡರು. 198 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಹೈದರಾಬಾದ್‌ನಿಂದ ಹೊರಟು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸುಮಾರು ಮಧ್ಯಾಹ್ನ 3.29ಕ್ಕೆ ಇಳಿಯಿತು. ಈ…

Read More

ತಕ್ಷಣ ಬರುವ ತೀವ್ರ ತಲೆನೋವು ಮತ್ತು ಆತಂಕ ಮೆದುಳಿನ ಅಸ್ವಸ್ಥತೆಯ ಲಕ್ಷಣವೇ? – Kannada News | Headache and Anxiety: Could It Be Serious?

ಇದ್ದಕ್ಕಿದ್ದಂತೆ ತೀವ್ರ ತಲೆನೋವಿನ ಜೊತೆಗೆ ಆತಂಕವಾದರೆ ಯಾರಿಗಾದರೂ ಭಯವಾಗುವುದು ಸಹಜ. ಈ ರೀತಿಯಾಗುವುದು ಗಂಭೀರ ಮೆದುಳಿನ ಅಸ್ವಸ್ಥತೆಯ ಸಂಕೇತವಾಗಿರಬಹುದು. ಸಾಮಾನ್ಯವಾಗಿ ಇಂತಹ ಲಕ್ಷಣಗಳು ಇದ್ದಕ್ಕಿದ್ದಂತೆ ಕಂಡುಬರುತ್ತದೆ, ವ್ಯಕ್ತಿಯಲ್ಲಿ ಆತಂಕ (Anxiety) ಉಂಟುಮಾಡಿ, ವಿಚಲಿತಗೊಳಿಸಿ, ಭಯಭೀತರನ್ನಾಗಿ ಮಾಡುತ್ತವೆ. ಆದರೆ ಈ ರೀತಿ ಬರುವ ಎಲ್ಲಾ ತಲೆನೋವು (Headache) ಅಥವಾ ಆತಂಕ ಮೆದುಳಿನ ಕಾಯಿಲೆಯನ್ನು ಸೂಚಿಸುವುದಿಲ್ಲ, ಆದರೆ ಅದನ್ನು ನಿರ್ಲಕ್ಷಿಸುವುದು ಸಹ ಸೂಕ್ತವಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದರಿಂದ ಅನಗತ್ಯ ಭಯವನ್ನು ಕಡಿಮೆ ಮಾಡಬಹುದು. ಇಂತಹ ಸಂದರ್ಭದಲ್ಲಿ, ಈ ಸ್ಥಿತಿ…

Read More

ಪತಿ ವಿಜಯ್ ತೊಡೆಯಮೇಲೆ ಕುಳಿತು ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ವಿವಾಹ ಆಗಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿದ್ದವು. ಈಗ ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋ ಗಮನ ಸೆಳೆದಿವೆ. ರಶ್ಮಿಕಾ ಮಂದಣ್ಣ ಅವರ ಹೊಸ ಫೋಟೋ ಗಮನ ಸೆಳೆದಿದೆ. ಈ ಫೋಟೋದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ತೊಡೆಯ ಮೇಲೆ ಕುಳಿತು ರಶ್ಮಿಕಾ ಪೋಸ್ ಕೊಟ್ಟಿದ್ದಾರೆ. ಫೋಟೋ ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡು ಹಾಗೂ ವಿಜಯ್ ಸಹೋದರ…

Read More

‘ವಿನಾಶ ಕಾಲೆ’ ಸಿನಿಮಾಗೆ ಸಾಥ್ ನೀಡಿದ ಮಲ್ಲಮ್ಮ, ಡಾಗ್ ಸತೀಶ್, ಕರಿಬಸಪ್ಪ – Kannada News | Bigg Boss Mallamma new movie Vinasha Kale muhurtha attended by Dog Satish and Karibasappa

‘ವಿನಾಶ ಕಾಲೆ ವಿಪರೀತ ಬುದ್ದಿ’ ಎಂಬ ಮಾತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎನ್ನುತ್ತಾರೆ. ‘ವಿನಾಶ ಕಾಲೆ’ (Vinasha Kale) ಎಂಬುದನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡು ಹೊಸ ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗೆ ಈ ಸಿನಿಮಾಗೆ ಮುಹೂರ್ತ ಮಾಡಲಾಯಿತು. ರಾಜಾಜಿನಗರದ ಕೈಗಾರಿಕಾ ಕೇಂದ್ರದಲ್ಲಿರುವ ಮದ್ದುರಮ್ಮ ದೇವಿ ಹಾಗೂ ಯಲ್ಲಮ್ಮ ದೇವಿ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್ ಅವರು ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು….

Read More

ಮನೆ ಮುಂದೇ ಓಡಾಡ್ತಿತ್ತು ಚಿರತೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ – Kannada News | Leopard Enters At A House At Naduru Village In Udupi, Panic Grips Residents

ಉಡುಪಿ,ಜನವರಿ 26: ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದಲ್ಲಿ ಚಿರತೆ ಓಡಾಟ ಜನರಲ್ಲಿ ಆತಂಕ ಹುಟ್ಟಿಸಿದೆ. ನಡೂರು ಹೈಸ್ಕೂಲ್ ಸಮೀಪದ ಪುಟ್ಟಯ್ಯ ಶೆಟ್ಟಿಯವರ ಮನೆಯ ಆವರಣದಲ್ಲಿ ಚಿರತೆ ಸಂಚರಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಮನೆ ಆವರಣದಲ್ಲಿ ಚಿರತೆ ಓಡಾಟ ಕಂಡುಬಂದಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ನಡೂರು ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಸಂಚಾರ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಹೊರಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚಿರತೆಗಳನ್ನು ಶೀಘ್ರವಾಗಿ…

Read More

Trigraha Yoga: ಜುಲೈನಲ್ಲಿ ‘ತ್ರಿಗ್ರಹ ಯೋಗ’; ಈ 5 ರಾಶಿಯವರಿಗೆ ಒಲಿಯಲಿದೆ ಅಪಾರ ಧನಸಂಪತ್ತು ಮತ್ತು ಕೀರ್ತಿ! – Kannada News | July 2026 Astrology: 5 Zodiac Signs to Get Bumper Profits and Career Success

ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಗ್ರಹಗಳ ಸ್ಥಿತಿಯಲ್ಲೂ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ ತಿಂಗಳು ಗ್ರಹ ಮತ್ತು ನಕ್ಷತ್ರಗಳ ಚಲನೆಯ ದೃಷ್ಟಿಯಿಂದ ಅತ್ಯಂತ ವಿಶೇಷವಾಗಿರಲಿದೆ. ಈ ತಿಂಗಳು ಸೂರ್ಯ, ಬುಧ ಮತ್ತು ಗುರು ಗ್ರಹಗಳು ಸೇರಿ ಅತ್ಯಂತ ಶುಭಕರವಾದ ‘ತ್ರಿಗ್ರಹ ಯೋಗ’ವನ್ನು ರೂಪಿಸುತ್ತಿವೆ. ಇದರೊಂದಿಗೆ, ಜುಲೈ 27 ರಂದು ನ್ಯಾಯದೇವನಾದ ಶನಿ ದೇವನು ಮೀನ ರಾಶಿಯಲ್ಲಿ ಹಿಮ್ಮೆಟ್ಟಲಿದ್ದಾನೆ (Retrograde). ಜ್ಯೋತಿಷಿಗಳ ಪ್ರಕಾರ, ಗೋಚಾರದಲ್ಲಿರುವ ಗುರು ಮತ್ತು ಹಿಮ್ಮುಖ ಚಲನೆಯ ಶನಿಯು ಎಲ್ಲಾ ರಾಶಿಗಳ ಮೇಲೆ…

Read More

ಮೇ 1ರಿಂದ ಹೊಸ ಗೇಮಿಂಗ್ ರೂಲ್ಸ್; ಆಟಗಾರರಿಗೆ ಬದಲಾವಣೆಗಳೇನು? ಇಲ್ಲಿದೆ ಡೀಟೇಲ್ಸ್ – Kannada News | New online gaming rules from 2026 May 1st, know what new for players

ನವದೆಹಲಿ, ಏಪ್ರಿಲ್ 23: ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು (Promotion and Regulation of Online Gaming Act, 2025) ಜಾರಿಗೊಳಿಸಿದೆ. ಈ ನಿಯಮಗಳು ಮೇ 1, 2026 ರಿಂದ ಜಾರಿಗೆ ಬರಲಿವೆ. ಕಳೆದ ವರ್ಷ (2025) ಆಗಸ್ಟ್ ತಿಂಗಳಲ್ಲಿ ಸಂಸತ್ತು ಈ ಆನ್ಲೈನ್ ಗೇಮಿಂಗ್ ಕಾಯ್ದೆಗೆ ಅನುಮೋದನೆ ಕೊಟ್ಟಿತ್ತು. ಇದೀಗ ಕಾರ್ಯಾತ್ಮಕ ನಿಯಮಗಳನ್ನು ಚಾಲನೆಗಳಿಸಲಾಗಿದೆ. ಬಳಕೆದಾರರಿಗೆ ರಕ್ಷಣೆ ಹಾಗೂ ಉದ್ಯಮ ಬೆಳವಣಿಗೆ ಎರಡನ್ನೂ ಸಮತೋಲನಗೊಳಿಸಲು ಸಾಧ್ಯವಾಗುವಂತೆ ಒಂದು ಫ್ರೇಮ್​ವರ್ಕ್ ರೂಪಿಸಲಾಗುತ್ತಿದೆ….

Read More

‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ

‘ಧುರಂಧರ್ 2’ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಾ ಇದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಎಂಬ ವ್ಯಕ್ತಿ ಹಮ್ಜಾ ಅಲಿ ಮಜಾರಿ ಆಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಆತ ಉಗ್ರರ ಜೊತೆ ಸೇರುತ್ತಾನೆ.ಅವರನ್ನೇ ನಾಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಲ್ಲರೂ 1998ರಲ್ಲಿ ಬಂದ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಉಗ್ರರ ಕಥೆಯನ್ನು ಹೊಂದಿತ್ತು. ಪಾರ್ವತಮ್ಮ ರಾಜ್​​​ಕುಮಾರ್ ಅವರು ‘ಸ್ವಸ್ತಿಕ್’ ಚಿತ್ರ ನಿರ್ಮಾಣ ಮಾಡಿದ್ದರು….

Read More

IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..! – Kannada News | IPL 2026 Playoffs: Each of the four qualifying teams have won the IPL only once

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. ಮೊದಲ ಸುತ್ತಿನಲ್ಲಿ ಕಣಕ್ಕಿಳಿದ 10 ತಂಡಗಳಲ್ಲಿ 4 ಟೀಮ್​ಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅದರಂತೆ ಪ್ಲೇಆಫ್ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ತಂಡಗಳು ಕಣಕ್ಕಿಳಿಯಲಿವೆ. ವಿಶೇಷ ಎಂದರೆ ಈ ಬಾರಿಯ ಪ್ಲೇಆಫ್ ಹಂತವು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಅಪರೂಪದ ಹಾಗೂ ಕುತೂಹಲಕಾರಿ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಅಂದರೆ ಟೂರ್ನಿಯ ಇತಿಹಾಸದಲ್ಲೇ…

Read More

NCL Recruitment 2026: ಡಿಪ್ಲೊಮಾ, B.Tech ಪದವೀಧರರಿಗೆ ಸರ್ಕಾರಿ ಉದ್ಯೋಗವಕಾಶ; 270 ತಾಂತ್ರಿಕ ಹುದ್ದೆಗೆ ನೇಮಕಾತಿ – Kannada News | NCL Assistant Foreman Recruitment 2026: 270 Technical Posts Open for Diploma/B.Tech Grads

ತಾಂತ್ರಿಕ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL) ಉತ್ತಮ ಅವಕಾಶವನ್ನು ಘೋಷಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್‌ಗೆ ಸೇರಿರುವ ಈ ಸಂಸ್ಥೆಯು 270 ಸಹಾಯಕ ಫೋರ್‌ಮ್ಯಾನ್ (ತರಬೇತಿ) ಗ್ರೇಡ್–C ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಮಧ್ಯಪ್ರದೇಶದ ಸಿಂಗ್ರೌಲಿ ಮತ್ತು ಉತ್ತರ ಪ್ರದೇಶದ ಸೋನ್‌ಭದ್ರ ಪ್ರದೇಶಗಳಲ್ಲಿರುವ ಕಲ್ಲಿದ್ದಲು ಗಣಿಗಳು ಹಾಗೂ ಸಂಬಂಧಿತ ಘಟಕಗಳಲ್ಲಿ ನಿಯೋಜಿಸಲಾಗುತ್ತದೆ. ಆಸಕ್ತರು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ…

Read More