ಆಂಧ್ರದ ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು – Kannada News | Russian Devotees Offer Prayers at Tirupati Srikalahasti Temple Follows Traditional Rahu Ketu Puja
ತಿರುಪತಿ, ಡಿಸೆಂಬರ್ 19: ಆಂಧ್ರಪ್ರದೇಶದ ಶ್ರೀ ಕಾಳಹಸ್ತಿ ದೇವಸ್ಥಾನದಲ್ಲಿ (Srikalahasti Temple) ಡಜನ್ಗಟ್ಟಲೆ ರಷ್ಯನ್ನರು ರಾಹು ಕೇತು ಪೂಜೆಯನ್ನು ಮಾಡಿದ್ದಾರೆ. ಈ ವೇಳೆ ರಷ್ಯಾದ ಭಕ್ತರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ದೇವಾಲಯದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ್ದಾರೆ. ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ಐತಿಹಾಸಿಕ ಕಲಾಕೃತಿಗಳನ್ನು ನೋಡಿ ಅವರು ಸಂತೋಷಗೊಂಡಿದ್ದಾರೆ. ಪುರೋಹಿತರಿಂದ ದೇವಾಲಯದ ವಿಶಿಷ್ಟತೆಯ ಬಗ್ಗೆ ತಿಳಿದುಕೊಂಡ ನಂತರ ದೇವರ ಮೇಲಿನ ಅವರ ಭಕ್ತಿ ಮತ್ತು ನಂಬಿಕೆ ಹೆಚ್ಚಾಯಿತು. ರಷ್ಯಾದಿಂದ ಬಂದ ಸುಮಾರು 40 ಭಕ್ತರು ಶಿಲ್ಪಗಳಿಂದ ನಿರ್ಮಿಸಲಾದ…