Headlines

ArivuPro Academy: ಸಿಎ, ಎಸಿಸಿಎ ಸೇರಿದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೋರ್ಸ್​ಗಳಿಗೆ ಗುಣಮಟ್ಟದ ತರಬೇತಿ ನೀಡುವ ಅರಿವುಪ್ರೋ

ಅರಿವುಪ್ರೋ ಅಕಾಡೆಮಿ ವಿದ್ಯಾರ್ಥಿಗಳುImage Credit source: Arivupro Academy ಇಂದಿನ ತೀವ್ರ ಸ್ಪರ್ಧಾತ್ಮಕ ಶೈಕ್ಷಣಿಕ ವಲಯದಲ್ಲಿ, ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಪದವಿಗಳಿಗಷ್ಟೇ ಸೀಮಿತವಾಗದೆ ಕೌಶಲ್ಯಾಧಾರಿತ ಕಲಿಕೆ, ಜಾಗತಿಕ ಮನ್ನಣೆ ಹೊಂದಿರುವ ಕೋರ್ಸ್‌ಗಳು ಮತ್ತು ಉತ್ತಮ ವೃತ್ತಿಜೀವನದ ಅವಕಾಶಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಬದಲಾವಣೆಯನ್ನು ಮನಗಂಡಿರುವ ‘ಅರಿವುಪ್ರೋ ಅಕಾಡೆಮಿ’ (ArivuPro Academy), ಹಣಕಾಸು (Finance) ಮತ್ತು ಅಕೌಂಟಿಂಗ್ ಕ್ಷೇತ್ರಗಳಲ್ಲಿ ಯಶಸ್ವಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಪ್ರಮುಖ ವೃತ್ತಿಪರ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ….

Read More

ಅನಿಷ್ಟ ಪದ್ಧತಿ ಜೀವಂತ: ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ಡಿ ದರ್ಜೆ ನೌಕರ ಸೇರಿ ಮರ್ತೋವನ ಮೇಲೆ ಹಲ್ಲೆ

ಯಾದಗಿರಿ, ಮಾರ್ಚ್​ 22: ಎಐ ತಂತ್ರಜ್ಞಾನದ ಜಮಾನಾದಲ್ಲಿ ಸಮಾಜದಲ್ಲಿ ಇನ್ನೂ ಅನಿಷ್ಟ ಪದ್ದತಿ ಜೀವಂತವಾಗಿದೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಸ್ವಸಮಾಜದವರೇ ತಮ್ಮದೇ ಸಮಾಜದ 12 ಕುಟುಂಬಗಳನ್ನ ಬಹಿಷ್ಕಾರ ಹಾಕಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. ದೇವಸ್ಥಾನದ ಕಟ್ಟೆಯ ಮೇಲೆ ಕೂತಿದ್ದಕ್ಕೆ ಇಬ್ಬರು ದಲಿತ (Dalits) ಯುವಕರ ಮೇಲೆ ಸವರ್ಣೀಯರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿ ನಡೆದಿದೆ. ನಡೆದಿದ್ದೇನು? ಅನೀಲ್​ ಕುಮಾರ್ ಹಾಗೂ ಸಿದ್ದಲಿಂಗಪ್ಪ ಎನ್ನುವವರು ಸಂಬಂಧಿಕರ ಮಗನ ಜವಳ ಕಾರ್ಯಕ್ರಮಕ್ಕೆ ತೆರಳಿದ್ದರು….

Read More

ದೇಶವೇ ತಲೆತಗ್ಗಿಸುವ ಕೆಲಸ; ಎಐ ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಆಕ್ರೋಶ – Kannada News | Congress became a national shame BJP slams Rahul Gandhi over Indian Youth Congress shirtless protest at AI Summit

ನವದೆಹಲಿ, ಫೆಬ್ರವರಿ 20: ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ (AI Impact Summit) ಆವರಣದೊಳಗೆ ಪ್ರಧಾನಿ ಮೋದಿ ಹಾಗೂ ಟ್ರಂಪ್ ಫೋಟೋ ಹಾಗೂ ಅವರ ವಿರುದ್ಧ ಘೋಷಣೆ ಇರುವ ಟಿ-ಶರ್ಟ್​ ಹಾಕಿಕೊಂಡು ಬಂದಿದ್ದ ಯುವ ಕಾಂಗ್ರೆಸ್ ಕಾರ್ಯರ್ತರು ಆ ಅಂಗಿಯನ್ನು ಬಿಚ್ಚಿ ‘ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ್ದರು. ಕೈಯಲ್ಲಿ ಅಂಗಿಯನ್ನು ಬೀಸುತ್ತಾ ಅರೆಬೆತ್ತಲೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಎಫ್​ಐಆರ್ ದಾಖಲಿಸಿದ್ದಾರೆ….

Read More

Chanakya Niti: ಈ ತಪ್ಪುಗಳು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರೂ ಸಹ ಜೀವನದಲ್ಲಿ ಉದ್ಧಾರವಾಗಬೇಕು, ಯಶಸ್ಸನ್ನು (Success) ಸಾಧಿಸಬೇಕು, ನಾಲ್ಕು ಜನ ನಮ್ಮನ್ನು ಕೊಂಡಾಡುವ ಹಾಗೆ ಬದುಕಬೇಕು ಎಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ಮಾಡುವಂತಹ ಕೆಲವೊಂದು ತಪ್ಪುಗಳು ನಮ್ಮ ಸಂಪೂರ್ಣ ಜೀವನವನ್ನೇ ಹಾಳು ಮಾಡುತ್ತದೆ. ಆದ್ದರಿಂದ, ಜೀವನದಲ್ಲಿ ಯಶಸ್ವಿಯಾಗಲು, ಪ್ರತಿಯೊಬ್ಬ ವ್ಯಕ್ತಿಯು ಈ ನಾಲ್ಕು ತಪ್ಪುಗಳನ್ನು ಎಂದಿಗೂ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ದರೆ ವ್ಯಕ್ತಿಯ ಜೀವನವನ್ನು ಹಾಳು ಮಾಡುವಂತಹ ಆ ಅಭ್ಯಾಸಗಳು, ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ. ಈ ತಪ್ಪುಗಳಿಂದ…

Read More

‘ಧುರಂಧರ್ 2’ ಯಶಸ್ಸು: ಸಂಜಯ್ ದತ್ ಬಗ್ಗೆ ಮೆಚ್ಚುಗೆಯ ಮಾತಾಡಿದ ರಾಘವ್ ಚಡ್ಡಾ

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಪ್ರೇಕ್ಷಕರಿಂದ ಅಪಾರ ಪ್ರೀತಿ ವ್ಯಕ್ತವಾಗುತ್ತಿದೆ. ಈ ನಡುವೆ, ರಾಜಕಾರಣಿ ರಾಘವ್ ಚಡ್ಡಾ ಅವರು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಇತ್ತೀಚೆಗೆ ರಾಜಕೀಯದ ಏರಿಳಿತಗಳ ಕಾರಣದಿಂದ ಸುದ್ದಿಯಲ್ಲಿದ್ದ ರಾಘವ್ ಚಡ್ಡಾ (Raghav Chadha) ಅವರು ಈಗ ಬಾಲಿವುಡ್​ ನಟನ ಸ್ನೇಹದ…

Read More

VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..! – Kannada News | WPL 2026: Sneh Rana bowls most expensive over in WPL history

ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ಎಸೆದ ಹೀನಾಯ ದಾಖಲೆಯೊಂದು ಸ್ನೇಹ್ ರಾಣಾ ಹೆಸರಿಗೆ ಸೇರ್ಪಡೆಯಾಗಿದೆ. ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್​ನ ಒಂದು ಓವರ್​ನಲ್ಲಿ ಅತ್ಯಧಿಕ ರನ್​ಗಳಿಸಿದ ಭರ್ಜರಿ ದಾಖಲೆಯೊಂದು ಸೋಫಿ ಡಿವೈನ್ ಹೆಸರಿಗೆ ಸೇರ್ಪಡೆಯಾಗಿದೆ. ಹೌದು, ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಸ್ನೇಹ್ ರಾಣಾ ವಿರುದ್ಧ ಸೋಫಿ ಡಿವೈನ್ ಬರೋಬ್ಬರಿ 32 ರನ್​ ಚಚ್ಚಿದ್ದಾರೆ. ಈ ಪಂದ್ಯದ 6ನೇ ಓವರ್​ನಲ್ಲಿ…

Read More

Rahul Gandhi Birthday: 56ನೇ ವರ್ಷಕ್ಕೆ ಕಾಲಿಟ್ಟ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಶುಭಾಶಯ – Kannada News | Rahul Gandhi’s 56th Birthday: Modi Wishes and LoP Journey Highlights

ಮೋದಿ, ರಾಹುಲ್ ಗಾಂಧಿ Image Credit source: IB Times India ನವದೆಹಲಿ, ಜೂನ್ 19: ಲೋಕಸಭೆ  ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಇಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಸಂದೇಶ ಪೋಸ್ಟ್ ಮಾಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು…

Read More

ಮೋದಿ ಹೇಳಿದ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ – Kannada News | What Makes Dubai’s ‘Kannada Paatha Shaale’ Special, as Mentioned by Modi in Mann Ki Baat?

ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ಮೋದಿ ಉಲ್ಲೇಖ ಬೆಂಗಳೂರು, ಡಿಸೆಂಬರ್​​ 28: 2025ನೇ ಸಾಲಿನ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ಉಲ್ಲೇಖಿಸಿದ್ದಾರೆ. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆ ಎಂಬ ಉದ್ದೇಶದಿಂದ ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ‌ವಾಯ್ತು ಎಂದಿದ್ದಾರೆ. ಆ ಮೂಲಕ ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘನೆ…

Read More

‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜೊತೆ ಸಲ್ಮಾನ್ ಖಾನ್ ಹೊಸ ಸಿನಿಮಾ? – Kannada News | Salman Khan likely to do action comedy movie with The Family Man director Raj DK

ನಟ ಸಲ್ಮಾನ್ ಖಾನ್ (Salman Khan) ಅವರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಗೆಲುವು ಕಂಡಿಲ್ಲ. ಬೇರೆ ಹೀರೋಗಳೆಲ್ಲ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದರೆ ಸಲ್ಮಾನ್ ಖಾನ್ ಅವರ ಸಿನಿಮಾಗಳು ಜಸ್ಟ್ ಪಾಸ್ ಆಗಲು ಕಷ್ಟಪಡುತ್ತಿವೆ. ಹಾಗಾಗಿ ಅವರು ಒಂದು ಗೊಡ್ಡ ಗೆಲುವಿಗಾಗಿ ಕಾಯುತ್ತಿದ್ದಾರೆ. ಅವರು ನಟಿಸಿರುವ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರ ನಡುವೆ ಅವರು ಹೊಸ ಸಿನಿಮಾದ ಮಾತುಕಥೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೇಳಿಬಂದಿರುವ ಸುದ್ದಿಯ ಪ್ರಕಾರ, ರಾಜ್-ಡಿಕೆ (Raj DK)…

Read More

ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್​ನ ಬಂದರು ಸೇರಿದ ಭಾರತದ ಎಲ್‌ಪಿಜಿ ಟ್ಯಾಂಕರ್

ಅಹಮದಾಬಾದ್, ಮಾರ್ಚ್ 16: ಎಲ್‌ಪಿಜಿ ಸಾಗಿಸುವ ಎರಡು ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಇರಾನಿನ ಅಧಿಕಾರಿಗಳು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಲು ಅನುಮತಿ ನೀಡಿದ್ದರು. ಅವುಗಳಲ್ಲಿ ಒಂದು ಶಿವಾಲಿಕ್, ಇನ್ನೊಂದು ಹಡಗು ನಂದಾ ದೇವಿ. ಹಾರ್ಮುಜ್ ಜಲಸಂಧಿ ದಾಟಿರುವ ಶಿವಾಲಿಕ್ ಹಡಗು ಎಲ್​ಪಿಜಿಯನ್ನು ಹೊತ್ತು ಗುಜರಾತ್​​ನ ಮುಂದ್ರಾ ಬಂದರನ್ನು ತಲುಪಿದೆ. ನಂದಾ ದೇವಿ ಹಡಗು ನಾಳೆ ಕಾಂಡ್ಲಾ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ಈ ಹಡಗುಗಳು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತೊಯ್ದಿವೆ. ಇನ್ನಷ್ಟು…

Read More