Headlines

ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತವಾಗಿ ಆರ್ಭಟಿಸಿದ ಲಕ್ಷ್ಮೀ ಆನೆ

ಕೋಲಾರ, ಮೇ 27: ಅನಾರೋಗ್ಯ ಹಿನ್ನೆಲೆ ವಿಜಯನಗರ ಜಿಲ್ಲೆಯ ಹಂಪಿಯ ವಿರುಪಾಕ್ಷೇಶ್ವರ ದೇವಾಲಯದಿಂದ ಸ್ಥಳಾಂತರಿಸಲಾಗಿರುವ ಲಕ್ಷ್ಮೀ ಆನೆ, ಕೋಲಾರ ತಾಲ್ಲೂಕು ನರಸಾಪುರ ಬಳಿಯ ಆನೆ ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದ ಕೂಡಲೇ ಸ್ವಲ್ಪ ವಿಚಲಿತಗೊಂಡು ಆರ್ಭಟಿಸಿದೆ. ಅರಣ್ಯ ಇಲಾಖೆಯಿಂದ ನಿರ್ಮಾಣವಾಗಿರುವ ರಾಜ್ಯದ ಏಕೈಕ ಆನೆ ಪುನರ್ವಸತಿ ಕೇಂದ್ರಕ್ಕೆ ಲಕ್ಷ್ಮೀ ಆನೆಯನ್ನು ಬುಧವಾರ ಸ್ಥಳಾಂತರಿಸಲಾಗಿತ್ತು. ಹೊಸ ಜಾಗಕ್ಕೆ ಬಂದಿರುವ ಕಾರಣಕ್ಕೆ ಲಕ್ಷ್ಮೀ ಆನೆ ಕೊಂಚ ವಿಚಲಿತಗೊಂಡು ಆರ್ಭಟಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮೀ ಆನೆಯನ್ನು ಹಂಪಿಯಿಂದ…

Read More

ಹುಡುಗಿಗಾಗಿ ಟವರ್ ಏರಿದ್ದ ಯವಕನನ್ನ ಮನವೊಲಿಸಿ ಕೆಳಗಿಳಿಸಿದ್ಹೇಗೆ? ಹೇಳಿ ನಿಟ್ಟುಸಿರು ಬಿಟ್ಟ ಅಧಿಕಾರಿ

ಬೆಂಗಳೂರು, (ಮೇ 21): ಆನೇಕಲ್ (Anekal) ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೀತಿಸಿದ (Love) ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಸೋಮಶೇಖರ್ ಎಂಬ ಯುವಕ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆಯೇ ಕುಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಯುವಕನ್ನ ಕೆಳಗಿಳಿಸಲು ಹರಸಾಹಸವೇ ಪಟ್ಟರು. ಆರಂಭದಲ್ಲಿ ಎಷ್ಟು ಮನವೊಲಿಸಿದರೂ ಸಹ ಸೋಮಶೇಖರ್ ಕೆಳಗೆ ಇಳಿಯಲೇ ಇಲ್ಲ. ಅಂತಿಮವಾಗಿ ಅದ್ಹೇಗೋ ಕಸರತ್ತು ಮಾಡಿ ಮನವೊಲಿಸಿ ಸೋಮಶೇಖರ್ ನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸೋಮಶೇಖರ್ ಮನವೊಲಿಸಿ ಟವರ್…

Read More

ತಮಿಳು ಚಿತ್ರರಂಗದಲ್ಲಿ ರಾಜಕೀಯ: ವಿಜಯ್ ಕೊನೆ ಸಿನಿಮಾ ಟಾರ್ಗೆಟ್ – Kannada News | Movie politics in Tamil Nadu, Parashakti vs Jana Nayagan

ತಮಿಳುನಾಡಿನಲ್ಲಿ ಚಿತ್ರರಂಗಕ್ಕೂ (Movie) ರಾಜಕೀಯಕ್ಕೂ ಬಹಳ ಆಪ್ತ ಬಂಧ. ಸ್ವಾತಂತ್ರ್ಯ ಬಂದಾಗಿನಿಂದಲೂ ತಮಿಳು ಚಿತ್ರರಂಗದಲ್ಲಿರುವವರೇ ತಮಿಳುನಾಡಿನ ರಾಜಕೀಯದಲ್ಲೂ ಅಬ್ಬರಿಸಿದ್ದಾರೆ. ಅಣ್ಣಾದೊರೈ, ಶಿವಾಜಿ ಗಣೇಶನ್, ಕರುಣಾನಿಧಿ, ಎಂಜಿಆರ್, ಜಯಲಲಿತಾ, ವಿಜಯ್​ಕಾಂತ್, ಶರತ್​​ಕುಮಾರ್ ಇನ್ನೂ ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ತಮಿಳುನಾಡು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಈಗಲೂ ಸಹ ಈ ಪದ್ಧತಿ ಚಾಲ್ತಿಯಲ್ಲಿದ್ದು, ಇತ್ತೀಚೆಗಷ್ಟೆ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಕಾಲಿರಿಸಿದ್ದಾರೆ. ಆದರೆ ತಮಿಳುನಾಡಿನಲ್ಲಿ ಅರ್ಧ ಶತಮಾನದಿಂದಲೂ ಸಿನಿಮಾಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರೂಢಿ ಇದೆ, ಈಗಲೂ ಅದೇ ನಡೆಯುತ್ತಿದೆ. ವಿಜಯ್…

Read More

ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ಹೋರಾಟದ ವೇಳೆ ರೈತರು, ಪೊಲೀಸರ ನಡುವೆ ಘರ್ಷಣೆ – Kannada News | Chikkaballapur Farmers Clash with Police Over KIADB Land Acquisition Protest

ಚಿಕ್ಕಬಳ್ಳಾಪುರ, ಏಪ್ರಿಲ್​​ 29: ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಭಾರಿ ಹೈಡ್ರಾಮಾವೇ ನಡೆದಿದೆ. ರೈತರ ಕೊರಳುಪಟ್ಟಿಗೆ ಕೈ ಹಾಕಿ ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪ ಕಾರಣಕ್ಕೆ ಕೆಲ ಕಾಲ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದ್ದು, ರೈತರು ಹಾಗೂ ಪೊಲೀಸರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಪೊಲೀಸರ ವಿರುದ್ದ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ ಬಣ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ದೌರ್ಜನ್ಯ…

Read More

ಕಬ್ಬನ್ ಪಾರ್ಕ್‌ನಲ್ಲಿ ಮಾವು ಮೇಳಕ್ಕೆ ವಾಕರ್ಸ್ ಅಸೋಸಿಯೇಷನ್ ವಿರೋಧ: ಏಕೆ? – Kannada News | Cubbon Park Walkers Association Opposes Mango Mela Inside Park Premises

ಮಾವು ಮೇಳಕ್ಕೆ ವಿರೋಧ (ಎಐ ಚಿತ್ರ)Image Credit source: tv9 kannada ಬೆಂಗಳೂರು, ಮೇ 07: ನಗರದ ಕಬ್ಬನ್ ಪಾರ್ಕ್ ಆವರಣದಲ್ಲಿ ನಾಳೆಯಿಂದ ತೋಟಗಾರಿಕೆ ಇಲಾಖೆಯು ಹಮ್ಮಿಕೊಂಡಿರುವ ‘ಮಾವು ಮೇಳ’ಕ್ಕೆ (Mango Mela) ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ (CPWA) ತೀವ್ರ ವಿರೋಧ ವ್ಯಕ್ತಪಡಿಸಿದೆ. ಉದ್ಯಾನವನದ ಆವರಣವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಘವು ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದೆ. ಮುಖ್ಯಾಂಶಗಳು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ತೋಟಗಾರಿಕೆ ಇಲಾಖೆ ಗಾಳಿಗೆ ತೂರಿತಾ? ಬೃಹತ್ ಮೇಳಗಳ…

Read More

IPL 2026: ಆರ್​ಸಿಬಿ ವಿರುದ್ಧ ಕಣಕ್ಕಿಳಿಯುತ್ತಾರಾ ಹಾರ್ದಿಕ್, ಸೂರ್ಯ? – Kannada News | IPL 2026: RCB vs MI – Hardik Pandya Injury Update, Suryakumar Yadav Captaincy News

ವರದಿಯ ಪ್ರಕಾರ, ಪಂದ್ಯಕ್ಕೆ ಒಂದು ದಿನ ಮೊದಲು, ಅಂದರೆ ಮೇ 9 ರ ಶನಿವಾರದಂದು ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಪರೀಕ್ಷೆಯಲ್ಲಿ ಹಾರ್ದಿಕ್ ಪಾಸ್ ಆದರೆ, ರಾಯ್ಪುರದಲ್ಲಿ ತಂಡವನ್ನು ಕೂಡಿಕೊಳ್ಳುವುದರ ಜೊತೆಗೆ ಮೇ 10 ರಂದು ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇಲ್ಲದಿದ್ದರೆ ಹಾರ್ದಿಕ್ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ (PC- IPL X). Source link

Read More

RCB ಫ್ರಾಂಚೈಸಿಗೆ ಗಡುವು ನೀಡಿದ BCCI

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಣಕ್ಕಿಳಿಯುವುದು ಎಲ್ಲಿ? ಈ ಪ್ರಶ್ನೆಗೆ ಇನ್ನೂ ಸಹ ಸ್ಪಷ್ಟ ಉತ್ತರ ದೊರೆತಿಲ್ಲ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ನಿರ್ಬಂಧ. ಐಪಿಎಲ್ 2025ರ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಆರ್​ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ದುರ್ಘಟನೆಯ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ನಿಷೇಧಕ್ಕೊಳಪಡಿಸಲಾಗಿದೆ. ಇದೀಗ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯವಾಡಲು ಕರ್ನಾಟಕ ಸರ್ಕಾರ ಕೆಲ ಷರತ್ತುಗಳೊಂದಿಗೆ ಗ್ರೀನ್ ಸಿಗ್ನಲ್…

Read More

ಮಗಳೇ ಹೋಗಿದ್ದಾಳೆ, ಇನ್ಯಾರ ಮೇಲೆ ದೂರೋಣ!’: ನೀಟ್ ಪರೀಕ್ಷೆಯ ಒತ್ತಡಕ್ಕೆ ಬಲಿಯಾಯ್ತಾ ಮತ್ತೊಂದು ಜೀವ? ಕಣ್ಣೀರಿಟ್ಟ ತಂದೆ – Kannada News | Kalaburagi Student Suicide: NEET Dream Crushed by Exam Pressure, Awaits Results

ಕಲಬುರಗಿ, ಮೇ,23: ವೈದ್ಯಕೀಯ ಶಿಕ್ಷಣದ (Medical Education) ದೊಡ್ಡ ಕನಸು ಹೊತ್ತಿದ್ದ 18 ವರ್ಷದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಅತ್ಯಂತ ದಾರುಣ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಮೇ 2ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಬರೆದಿದ್ದ ಭಾಗ್ಯಶ್ರೀ (18) ಮೃತಪಟ್ಟ ದುರ್ದೈವಿ. ಕಲಬುರಗಿ ನಗರದ ಕೋರ್ಟ್ ವೃತ್ತದ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೃತ ಭಾಗ್ಯಶ್ರೀ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92 ರಷ್ಟು ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಳು. ವೈದ್ಯಕೀಯ…

Read More

ಸುಪ್ರೀಂ ಮೆಟ್ಟಿಲೇರಿದ ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮ ಪ್ರಕರಣ, ಯುಪಿ ಸರ್ಕಾರದಿಂದ ‘ಎಸ್‌ಐಟಿ’ ರಚನೆ – Kannada News | Ayodhya Ram Mandir Donation Scam: SC Petition Filed, UP Govt Forms SIT for Probe

ಲಕ್ನೋ, ಜೂನ್ 15: ಅಯೋಧ್ಯೆ(Ayodhya)ಯ ಶ್ರೀರಾಮ ಜನ್ಮಭೂಮಿ ದೇವಸ್ಥಾಬದ ದೇಣಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪ ಈಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಡೆಸಿದೆ. ಇದೇ ವೇಳೆ, ಪ್ರಕರಣದ ಪಾರದರ್ಶಕತೆ ಮತ್ತು ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು (SIT) ರಚಿಸುವ ಮೂಲಕ ತ್ವರಿತ ಕ್ರಮ ಕೈಗೊಂಡಿದೆ. ವಕೀಲ ಅನೂಪ್…

Read More

ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಭೂಮಿ ಎಲ್ಲಿ? ಹೇಗಿದೆ ನೋಡಿ – Kannada News | BJP Alleged land grab in Kolar Against Minister Krishna Byre Gowda, here Is land details

ಕೋಲಾರ, (ಡಿಸೆಂಬರ್ 18):  ಬೆಂಗಳೂರಿನ ಬ್ಯಾಟರಾಯನಪುರ ಕಾಂಗ್ರೆಸ್‌ ಶಾಸಕ, ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಈವರೆಗೂ ಯಾವ ಹಗರಣದಲ್ಲೂ ಸಿಲುಕದ ಕ್ಲೀನ್‌ ಇಮೇಜ್‌ ರಾಜಕಾರಣಿ. ಆದ್ರೆ, ಇದೇ ಮೊದಲ ಬಾರಿಗೆ ಭೂಕಬಳಿಕೆ ಆರೋಪ ಇವರನ್ನೀಗ ಸುತ್ತಿಕೊಂಡಿದೆ.ಹೌದು..ಕೋಲಾರ ತಾಲೂಕಿನ ಗರುಡಪಾಳ್ಯ ಸಚಿವ ಕೃಷ್ಣಭೈರೇಗೌಡರ ಹುಟ್ಟೂರು. ನರಸುಪುರ ಹೋಬಳಿಯ ಗರುಡಪಾಳ್ಯದಲ್ಲಿ 200ಎಕರೆಗೂ ಹೆಚ್ಚು ಜಾಗವಿದೆ. ಇಲ್ಲಿನ ಸರ್ವೆ ನಂಬರ್‌ 46 ಮತ್ತು 47ರಲ್ಲಿ . ಇದೇ ಸರ್ವೇ ನಂಬರ್‌ನಲ್ಲೇ ಸಚಿವರ ಹೆಸರಿನಲ್ಲಿ 21 ಎಕರೆ ಜಮೀನಿದೆ. ಆದ್ರೆ, ಇದು ಸ್ಮಶಾನ…

Read More