ಚಾಮರಾಜನಗರ: ಮುಳ್ಳುಹಂದಿಯ ಡೆಡ್ಲಿ ಅಟ್ಯಾಕ್ಗೆ ಚಿರತೆ ಸಾವು! – Kannada News | Gundlupet: Porcupine Quills Kill Leopard in Ranganabetta Forest
ಚಾಮರಾಜನಗರ, ಮಾ.2: ಕಾಡಿನ ಕ್ರೂರ ಬೇಟೆಗಾರ ಚಿರತೆಯೊಂದು ತನ್ನ ಆಹಾರಕ್ಕಾಗಿ ನಡೆಸಿದ ಪ್ರಯತ್ನವೇ ಅದಕ್ಕೆ ಮುಳುವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ರಂಗನಬೆಟ್ಟದಲ್ಲಿ ನಡೆದಿದೆ. ಕಾಡಿನಲ್ಲಿ ಪ್ರಾಣಿಗಳ ನಡುವೆ ಕಾದಾಟ ಉಂಟಾಗುವುದು ಸಹಜ, ಹುಲಿ, ಸಿಂಹ, ಚಿರತೆಗಳು ಹಾಗೂ ಆನೆಗಳ ಮೇಲೆ ಅಷ್ಟೊಂದು ಸುಲಭದಲ್ಲಿ ದಾಳಿ ಮಾಡಲು ಸಾಧ್ಯವಿಲ್ಲ. ಆದರೆ ಇದೀಗ ಚಿಕ್ಕ ಮುಳ್ಳುಹಂದಿಯೊಂದು ಚಿರತೆಯನ್ನು ಸೋಲಿಸಿ, ಕೊಂದಿದೆ. ಮುಳ್ಳುಹಂದಿಯನ್ನು ಬೇಟೆಯಾಡಲು ಹೋದ ಚಿರತೆಯು, ಹಂದಿಯ ತೀಕ್ಷ್ಣವಾದ ಮುಳ್ಳಿನೇಟಿಗೆ ಸಿಲುಕಿ ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದೆ. ಬಂಡೀಪುರ ಹುಲಿ…