ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್ಪಿಜಿ ಟ್ಯಾಂಕರ್ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?
ನವದೆಹಲಿ, ಮಾರ್ಚ್ 18: ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಗೆ (Hormuz Strait) ತಡೆ ಬಿದ್ದಿದ್ದು, ಗಲ್ಫ್ ರಾಷ್ಟ್ರಗಳಿಂದ ತೈಲ ಮತ್ತಿತರ ಸರಕುಗಳನ್ನು ಹೊತ್ತ ಹಡಗುಗಳು ಹೊರ ಹೋಗಲಾಗದೆ ಸಮುದ್ರದ ನೀರಿನಲ್ಲೇ ನೆಲೆ ನಿಂತಿವೆ. ಈ ಸಮುದ್ರ ಮಾರ್ಗದಿಂದಲೇ ಭಾರತಕ್ಕೆ ಬೇಕಾದ ಹೆಚ್ಚಿನ ಎಲ್ಪಿಜಿ ಸರಬರಾಜು (LPG supply) ಆಗುವುದು. ದೇಶದಲ್ಲಿ ಎಲ್ಪಿಜಿಗೆ ಹಾಹಾಕಾರ ನಡೆಯುತ್ತಿರುವಂತೆಯೇ ಹಾರ್ಮುಜ್ ಜಲಸಂಧಿ ಮೂಲಕ ಮೂರು ಭಾರತೀಯ ಎಲ್ಪಿಜಿ ಟ್ಯಾಂಕರ್ಗಳು ಭಾರತವನ್ನು ತಲುಪಿವೆ. ಈ ಮೂರು ಹೊರತುಪಡಿಸಿ ಇನ್ನೂ 22 ಭಾರತೀಯ ನೌಕೆಗಳು…