Headlines

ಅಬ್ಬರಿಸಿ ಬೊಬ್ಬಿರಿದರೂ ಅಭಿಷೇಕ್​ ಶರ್ಮಾಗೆ ಸಿಕ್ಕಿಲ್ಲ ಪಂದ್ಯ ಶ್ರೇಷ್ಠ ಪ್ರಶಸ್ತಿ..! – Kannada News | Instead of Abhishek Sharma, Jasprit Bumrah won the Player of the Match award

ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ (Abhishek Sharma) ಅಕ್ಷರಶಃ ಅಬ್ಬರಿಸಿದ್ದರು. ಈ ಅಬ್ಬರದೊಂದಿಗೆ ಅಭಿಷೇಕ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದರು. Source link

Read More

‘ರಿಚರ್ಡ್ ಆಂಟನಿ’ ಸಿನಿಮಾ ಕುರಿತು ರಾಜ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ – Kannada News | Rakshit Shetty’s ‘Richard Anthony’: Raj B Shetty’s Hint Sparks Delay Speculation

ರಕ್ಷಿತ್ ಶೆಟ್ಟಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಕಳೆದ ಕೆಲ ಸಮಯದಿಂದ ಯಾರ ಕಣ್ಣೀಗು ಕಾಣಿಸುತ್ತಿಲ್ಲ. ಅವರು ‘ರಿಚರ್ಡ್ ಆಂಟನಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಿರುವಾಗಲೇ ರಾಜ್ ಅವರು ನೀಡಿದ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಆ ಚಿತ್ರಕ್ಕಾಗಿ ಇನ್ನೂ ಎಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ಮೂಡಿದೆ. ರಾಜ್ ಬಿ. ಶೆಟ್ಟಿ ಅವರು ‘45’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಟ್ರೇಲರ್​​ನಲ್ಲಿ ಹಿಂಟ್…

Read More

Karthyayani Amma: 90ನೇ ವಯಸ್ಸಿನಲ್ಲಿ ಅಕ್ಷರ ಕಲಿತು, ಪರೀಕ್ಷೆಯಲ್ಲಿ 100 ಕ್ಕೆ 98 ಅಂಕ ಪಡೆದ ಕೇರಳದ ಮಾದರಿ ಮಹಿಳೆ – Kannada News | Karthyayani Amma: Kerala’s 90 Year Old Literacy Icon Inspires Millions to Learn

ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ ತಿರುವನಂತಪುರಂ: “ಕಲಿಯುವುದಕ್ಕೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಮನಸ್ಸಿದ್ದರೆ ಮಾರ್ಗ” ಎಂಬುದನ್ನು ಇಡೀ ದೇಶಕ್ಕೆ ಸಾಬೀತುಪಡಿಸಿದ ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ. ಬಾಲ್ಯದಿಂದಲೂ ಓದಬೇಕೆಂಬ ತೀವ್ರ ಹಂಬಲವಿದ್ದರೂ, ಬಡತನದ ಕಾರಣದಿಂದಾಗಿ ಬರೋಬ್ಬರಿ 90 ವರ್ಷಗಳ ಕಾಲ ಅಕ್ಷರ ಲೋಕದಿಂದ ವಂಚಿತರಾಗಿದ್ದ ಈ ಅಜ್ಜಿ, ತಮ್ಮ ಇಳಿ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿ ಇಂದಿನ ಯುವ ಪೀಳಿಗೆಗೆ ರೋಲ್ ಮಾಡೆಲ್ ಆಗಿದ್ದಾರೆ. ಬಾಲ್ಯದ ಕಣ್ಣೀರು ಮತ್ತು 90 ವರ್ಷಗಳ ಅನಕ್ಷರತೆ: ಕೇರಳದ ಬಡ ಕುಟುಂಬವೊಂದರಲ್ಲಿ…

Read More

ಅನರ್ಹ BPL ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಭರ್ಜರಿ ಶಾಕ್​​: 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಆಘಾತ – Kannada News | Karnataka BPL Card Crackdown: 15 Lakh Ineligible Holders Hit, Cards Canceled and Converted

ಬೆಂಗಳೂರು, ಮಾರ್ಚ್​ 05: ಅನರ್ಹವಾಗಿ ಬಿಬಿಎಲ್​​ ಕಾರ್ಡ್​​ ಹೊಂದಿರುವವರ ವಿರುದ್ಧ ಸಮರ ಮುಂದುವರಿಸಿರುವ ರಾಜ್ಯ ಸರ್ಕಾರ ಕಳೆದ 5 ತಿಂಗಳಲ್ಲಿ 15.12 ಲಕ್ಷ ಮಂದಿಗೆ ಭಾರಿ ಆಘಾತ ನೀಡಿದೆ. ಅನರ್ಹರನ್ನು ಹೆಕ್ಕಿ ಹೆಕ್ಕಿ ಗುರುತಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಈ ಪೈಕಿ ಸುಮಾರು ಐದೂವರೆ ಸಾವಿರ ಬಿಪಿಎಲ್​​ ಕಾರ್ಡ್​​ಗಳನ್ನು ಶಾಶ್ವತವಾಗಿ ರದ್ದು ಮಾಡಿದೆ. 4 ಲಕ್ಷಕ್ಕೂ ಹೆಚ್ಚು ಕಾರ್ಡ್​​ಗಳನ್ನು ಬಿಪಿಎಲ್​​ನಿಂದ ಎಪಿಎಲ್​​ ಆಗಿ ಬದಲಾವಣೆ ಮಾಡಲಾಗಿದೆ. 23 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳು ತಾತ್ಕಾಲಿಕವಾಗಿ…

Read More

ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ: 2.34 ಕೋಟಿ ರೂ. ಹಣ ಸೀಜ್

ಆನೇಕಲ್, ಮಾರ್ಚ್ 18: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಜೂಜುವಾಡಿ ಚೆಕ್​ಪೋಸ್ಟ್​ನಲ್ಲಿ ಚುನಾವಣಾಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಹಿಟಾಚಿ ಕ್ಯಾಷ್ ಮ್ಯಾನೇಜ್​ಮೆಂಟ್​ ಸರ್ವೀಸ್​ಗೆ ಸೇರಿದ ಎಟಿಎಂ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಚುನಾವಣಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ, ದಾಖಲೆಗಳಿಲ್ಲದ 2.34 ಕೋಟಿ ರೂ. ನಗದು ಕೊಂಡೊಯ್ಯುತ್ತಿರುವುದು ಗಮನಕ್ಕೆ ಬಂದಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ. ವಾಹನ ತಡೆದು ಪರಿಶೀಲನೆ ನಡೆಸಿದಾಗ, ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳು ಮತ್ತು ಅಗತ್ಯ ಭದ್ರತಾ ವ್ಯವಸ್ಥೆಗಳು ಇರಲಿಲ್ಲ ಎಂದು ಚುನಾವಣಾ…

Read More

‘ಸರ್ಸೆ ಸೆರಗು’ ಹಾಡು ವಿವಾದ: ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ಪ್ರೇಮ್

ಧ್ರುವ ಸರ್ಜಾ (Dhrva Sarja) ನಟನೆಯ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿದ್ದು, ಪ್ರೇಮ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ನೋರಾ ಫತೇಹಿ ಸ್ವತಃ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಮುಗಿದ ಬಳಿಕ ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ…

Read More

Viral Story: ಪ್ರತಿ ದಿನ 100 ಜೀವಂತ ಕೀಟಗಳನ್ನು ತಿನ್ನುವ ವ್ಯಕ್ತಿ, ಕಾರಣವೇನು ಗೊತ್ತೇ? – Kannada News | Man Eats 100 Live Insects Daily: Carlos’s Bizarre Addiction Explained

ಜಗತ್ತಿನಲ್ಲಿ ವಿಚಿತ್ರ ಮನುಷ್ಯರಿದ್ದಾರೆ, ಅವರ ಅಭ್ಯಾಸಗಳು ಕೂಡ ವಿಚಿತ್ರವಾಗಿಯೇ ಇರುತ್ತದೆ. ಅದು ಬೇರೆಯವರಿಗೆ ವಿಚಿತ್ರವೆನಿಸಬಹುದು. ಕೆಲವರು ಮಾಂಸಾಹಾರಿಗಳಿದ್ದರೆ, ಇನ್ನು ಕೆಲವರು ಸಸ್ಯಾಹಾರಿಗಳಿದ್ದಾರೆ. ಸಾಮಾನ್ಯವಾಗಿ ಮಾಂಸಾಹಾರಿಗಳು(Non Vegetarian) ಕೋಳಿ, ಕುರಿ, ಮೊಟ್ಟೆ ಅಥವಾ  ಮೀನುಗಳನ್ನು ತಿನ್ನುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ನಿತ್ಯ 100 ಜೀವಂತ ಕೀಟಗಳನ್ನು ತಿನ್ನುತ್ತಾರಂತೆ. ಈ ವ್ಯಕ್ತಿಯ ಹೆಸರು ಕಾರ್ಲೋಸ್, ಇವರು ಅಮೆರಿಕದ ಚಿಕಾಗೋದಲ್ಲಿ ವಾಸಿಸುತ್ತಾರೆ. ಅವರೇ ಹೇಳುವಂತೆ ಕೀಟಗಳು ಅವರ ನೆಚ್ಚಿನ ತಿಂಡಿಗಳಲ್ಲಿ ಒಂದು, ಅವುಗಳ ರುಚಿ ತುಂಬಾ ಇಷ್ಟ, ಅವು ಬೆಣ್ಣೆ ಸವರಿದ…

Read More

ಕೋಲ್ಕತಾದ ಠಂಠಣಿಯಾ ಕಾಳಿಬಾರಿ ಮಂದಿರಕ್ಕೆ ಪ್ರಧಾನಿ ಭೇಟಿ; ನಗರದ ಹುಟ್ಟಿಗೂ ಮೊದಲೇ ಇದ್ದ ಈ ಮಂದಿರದ ವಿಶೇಷತೆಗಳೇನು? – Kannada News | PM Modi took the blessings of Ma Kali at Thanthania Kalibari before his historic Roadshow in North Kolkata

ಠಂಠಣಿಯಾ ಕಾಳಿಬಾರಿ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ ಕೋಲ್ಕತಾ, ಏಪ್ರಿಲ್ 26: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಕೋಲ್ಕತ್ತಾದಲ್ಲಿ ತಮ್ಮ ಐತಿಹಾಸಿಕ ರೋಡ್‌ಶೋ ಆರಂಭಿಸುವ ಮುನ್ನ ಪ್ರಸಿದ್ಧ ‘ಠಣಠಣಿಯಾ ಕಾಳಿಬಾರಿ’ (Thanthania Kalibari) ದೇವಸ್ಥಾನಕ್ಕೆ ಭೇಟಿ ನೀಡಿ ಮಾ ಕಾಳಿಯ ಆಶೀರ್ವಾದ ಪಡೆದರು. ಠಣಠಣಿಯಾ ಕಾಳಿಬಾರಿ ಕೋಲ್ಕತಾದ ಅತ್ಯಂತ ಹಳೆಯ ಕಾಳಿ ಮಂದಿರಗಳಲ್ಲಿ ಒಂದು. ಕೋಲ್ಕತ್ತಾದ ಅತ್ಯಂತ ಹಳೆಯ ಮತ್ತು ಪೂಜ್ಯ ಕಾಳಿ ದೇವಾಲಯಗಳಲ್ಲಿ ಇದೂ ಒಂದು. 1703 ರಲ್ಲಿ ಸ್ಥಾಪನೆಯಾದ ಈ ದೇವಾಲಯದ ಇತಿಹಾಸ…

Read More

RCB ಗೆಲುವಿನ ಬೆನ್ನಲ್ಲೇ ಐಪಿಎಲ್​​ನಿಂದ 2 ತಂಡಗಳು ಔಟ್! – Kannada News | RCB’s win has eliminated MI and LSG from the playoff race

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​​ನ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರೋಚಕ ಜಯ ಸಾಧಿಸಿದೆ. ರಾಯ್​ಪುರ್​ನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. (PC: IPL) ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20ನೇ…

Read More

ಒತ್ತಡಕ್ಕೆ ಬಲಿಯಾಯಿತೇ ಮರಿ?: ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆಯ ಮರಿಯೂ ಗರ್ಭದಲ್ಲೇ ಸಾವು!

ಶಿವಮೊಗ್ಗ, ಏ.11: ಕಳೆದ ಮಾರ್ಚ್ 19 ರಂದು ತ್ಯಾವರೆಕೊಪ್ಪ ಸಫಾರಿಯಲ್ಲಿ ತರಬೇತಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ಗರ್ಭಿಣಿ ನೀರಾನೆ ಹಂಸಿನಿಯ (Hamsini Hippo) ಆರೋಗ್ಯ ತಪಾಸಣೆ ನಡೆಸುತ್ತಿದ್ದಾಗ, ಹಂಸಿನಿ ಏಕಾಏಕಿ ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿತ್ತು. ಈಗ ಅದೇ ನೀರಾನೆಯ ಮರಿಯು ಗರ್ಭದಲ್ಲೇ ಸಾವನ್ನಪ್ಪಿದೆ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಹೀಗೆ ಸರಣಿ ದುರಂತಗಳು ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಕೂಡ ಹೆಚ್ಚಿನ ತನಿಖೆಯನ್ನು…

Read More