“ಬ್ರಿಟನ್‌ಗಿಂತಲೂ ದುಬಾರಿಯಾಯಿತೇ ಬೆಂಗಳೂರು? ಒಬ್ಬರ ಸಂಬಳಕ್ಕೆ ವಿದೇಶದಲ್ಲಿ ಮನೆ ಸಿಗುತ್ತೆ, ಇಲ್ಲಿ ಇಬ್ಬರದ್ದೂ ಸಾಲಲ್ಲ! – Kannada News | “One Salary, One House: Viral Post Sparks Debate on India’s Skyrocketing Property Prices
ಬೆಂಗಳೂರು, ಮೇ,15: ಭಾರತದ ಐಟಿ ಹಬ್ ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಎಷ್ಟು ಕಷ್ಟ ಎಂಬ ಬಗ್ಗೆ ಮಹಿಳೆಯೊಬ್ಬರು ಹಂಚಿಕೊಂಡಿರುವ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಇಬ್ಬರ ಸಂಬಳವಿದ್ದರೂ ಮನೆ ಖರೀದಿಸಲು ಸಾಧ್ಯವಾಗದ ಮಹಿಳೆ, ಯುಕೆ (UK) ಗೆ ತೆರಳಿದ ಕೇವಲ ಎರಡು ವರ್ಷದಲ್ಲಿ ಅಲ್ಲಿ ಸ್ವಂತ ಮನೆ ಖರೀದಿಸಿರುವುದಾಗಿ ತಿಳಿಸಿದ್ದಾರೆ. “ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಾವು ಇಬ್ಬರು ದುಡಿಯುತ್ತಿದ್ದರೂ ಒಂದು ಫ್ಲಾಟ್ ಖರೀದಿಸಲು ಹರಸಾಹಸ ಪಡಬೇಕಾಯಿತು. ಕೊನೆಗೆ ಬೆಂಗಳೂರಿನಲ್ಲಿ ನಮ್ಮಿಂದ…