ನಟ ಪ್ರಕಾಶ್ ರಾಜ್ ತಾಯಿ ನಿಧನ: ಶಾಂತಿನಗರ ಚರ್ಚ್​​ನಲ್ಲಿ ಪ್ರಾರ್ಥನೆ: ವಿಡಿಯೋ

ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರ ತಾಯಿ ನಿಧನ ಹೊಂದಿದ್ದಾರೆ. ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ನಿನ್ನೆ ನಿಧನ ಹೊಂದಿದ್ದು, ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಸ್ವರ್ಣಲತಾ ಹೈದರಾಬಾದ್​ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಸ್ವರ್ಣಲತಾ ಅವರ ಅಂತಿಮ ಸಂಸ್ಕಾರ ಕ್ರೈಸ್ತ ಪದ್ಧತಿಯಂತೆ ನೆರವೇರಿದ್ದು, ಇಂದು ಶಾಂತಿನಗರ ಚರ್ಚ್​​ನಲ್ಲಿ ಸ್ವರ್ಣಲತಾ ಅವರಿಗಾಗಿ ವಿಶೇಷ ಪ್ರಾರ್ಥನೆ ಸಹ ಮಾಡಲಾಯ್ತು. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More

ಕರ್ನಾಟಕ ಹವಾಮಾನ ವರದಿ: ರಾಯಚೂರು, ಕೊಪ್ಪಳ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಾಯ್ತು ಬಿಸಿಲ ಧಗೆ! 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Karnataka Weather Forecast: Heat wave alert all over Karnataka, Yellow alert for 9 districts

ರಾಯಚೂರು, ಕೊಪ್ಪಳ ಸೇರಿದಂತೆ ಕರಾವಳಿಯಲ್ಲಿ ಹೆಚ್ಚಾಯ್ತು ಬಿಸಿಲ ಧಗೆ! ಬೆಂಗಳೂರು, ಏಪ್ರಿಲ್ 15: ಬೆಂಗಳೂರು ಸೇರಿದಂತೆ ಇಂದು ಹಲವು ಜಿಲ್ಲೆಗಳಲ್ಲಿ ಶುಷ್ಕ  (Weather Forecast) ವಾತಾವರಣವಿರಲಿದ್ದು, ಕೆಲ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಇಂದು ತಾಪಮಾನ ಹೆಚ್ಚಳದ ಸಾಧ್ಯತೆಯಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಇನ್ನುಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆಯ ಜೊತೆಗೆ ಕೆಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಒಟ್ಟಾರೆ 9 ಜಿಲ್ಲೆಗಳಿಗೆ…

Read More

ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ – Kannada News | Naveen Chandra on Sudeep: ‘Mark’ Actor Reveals Angel Like Mind

ನವೀನ್ ಚಂದ್ರ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ತಮಿಳು ನಟ. ಅವರು ಕನ್ನಡ ಚಿತ್ರರಂಗಕ್ಕೂ ಪರಿಚಯ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಮಾರ್ಕ್’ ಸಿನಿಮಾ. ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಅವರು ಜನಪ್ರಿಯತೆ ಪಡೆದರು. ಅವರು ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ಅವರು ಈಗ ಒಂದು ವಿಷಯ ರಿವೀಲ್ ಮಾಡಿದ್ದಾರೆ. ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ‘ಮಾರ್ಕ್’ ಚಿತ್ರದ ಹುಬ್ಬಳ್ಳಿ ಈವೆಂಟ್​​ನಲ್ಲಿ ನವೀನ್ ಚಂದ್ರ ಮಾತನಾಡಿದ್ದರು. ಈ ವೇಳೆ ಅವರು ಒಂದು ವಿಷಯ ಹಂಚಿಕೊಂಡರು. ಅದು…

Read More

ಯಮುನಾ ಎಕ್ಸ್​​ಪ್ರೆಸ್​​ವೇನಲ್ಲಿ ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು

ಲಕ್ನೋ, ಮಾರ್ಚ್​ 03: ಉತ್ತರ ಪ್ರದೇಶದ ಯಮುನಾ ಎಕ್ಸ್​ಪ್ರೆಸ್​ ವೇಯಲ್ಲಿ ವ್ಯಾನ್​​ಗೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಬೆಳಗಿನ ಜಾವ 4.20 ರ ಸುಮಾರಿಗೆ ಸದಾಬಾದ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. 13 ಪ್ರಯಾಣಿಕರನ್ನು ಹೊತ್ತ ವ್ಯಾನ್ ದೆಹಲಿಯ ಪ್ರೇಮ್ ನಗರದಿಂದ ರಾಜಸ್ಥಾನದ ಧೋಲ್ಪುರಕ್ಕೆ ತೆರಳುತ್ತಿದ್ದಾಗ ನೋಯ್ಡಾದಿಂದ ಗೋರಖ್ಪುರಕ್ಕೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್…

Read More

ಹೊರನಡೆದಿದ್ದು ಒಳ್ಳೆಯದೇ ಆಯಿತು; ಜೋ ಕೆಂಟ್ ರಾಜೀನಾಮೆ ಕುರಿತು ಟ್ರಂಪ್ ಪ್ರತಿಕ್ರಿಯೆ

ವಾಷಿಂಗ್ಟನ್, ಮಾರ್ಚ್ 17: ಇರಾನ್ ಮೇಲೆ ಇಸ್ರೇಲ್ ಜೊತೆ ಕೈಜೋಡಿಸಿ ಅಮೆರಿಕ ಯುದ್ಧ ಸಾರಿದ ನಂತರ ಟ್ರಂಪ್ (Donald Trump) ಸರ್ಕಾರದ ಪ್ರಮುಖ ಅಧಿಕಾರಿಯಾದ ಜೋ ಕೆಂಟ್ ರಾಜೀನಾಮೆ ನೀಡಿದ್ದಾರೆ. ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕನಾಗಿರುವ ಜೋ ಕೆಂಟ್ ಇಂದು ರಾಜೀನಾಮೆ ನೀಡಿದ್ದಾರೆ. ಈ ವೇಳೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದ ಅವರು ಅಮೆರಿಕಕ್ಕೆ ಇರಾನ್ ಬೆದರಿಕೆಯೊಡ್ಡಿರಲಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. “ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋ ಕೆಂಟ್…

Read More

ವಯೋವೃದ್ದರು, ಮಹಿಳೆಯರ ಪಾಲಿಗೆ ‘ಆಸರೆ’: ಒಂಟಿ ಬದುಕಿಗೆ ಬೆನ್ನೆಲುಬಾದ ಪೊಲೀಸ್ ಭರವಸೆ

ಹುಬ್ಬಳ್ಳಿ, ಏಪ್ರಿಲ್​ 12: ಹುಬ್ಬಳ್ಳಿಯಂತಹ (hubballi) ಮಹಾನಗರಗಳಲ್ಲಿ ಅಥವಾ ಜನನಿಬಿಡ ಪ್ರದೇಶಗಳಲ್ಲಿ ವಯೋವೃದ್ಧರು, ಮಹಿಳೆಯರು ಸೇರಿದಂತೆ ಒಬ್ಬಂಟಿಯಾಗಿ ವಾಸಿಸುವುದು ಒಂದು ಸವಾಲೇ ಸರಿ. ಯಾವಾಗ ಏನಾಗಿ ಬಿಡುತ್ತದೆಯೋ ಎಂಬ ಭಯ ಕಾಡುತ್ತದೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಅದೇನೆಂದರೆ ‘ಆಸರೆ’ (Asare). ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರ ಮತ್ತು ವಯೋವೃದ್ಧರಿಗೆ ಅಸುರಕ್ಷತೆ, ಅಭದ್ರತೆ ಕಾಡದಂತೆ ಕಾಳಜಿ ವಹಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ಯೋಜನೆ ಜಾರಿ ಮಾಡಿದೆ. ದೊಡ್ಡದೊಡ್ಡ ನಗರಗಳಲ್ಲಿ ಮಕ್ಕಳು ಇದ್ದು, ಹೆತ್ತವರು ಬೇರೆಡೆ…

Read More

ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ನವದೆಹಲಿ, ಮಾರ್ಚ್ 15: ಸರ್ಕಾರವು ಎಲ್​ಪಿಜಿ ಪೂರೈಕೆಯಲ್ಲಿ ತೊಂದರೆ ಆಗಿಲ್ಲ ಎಂದು ಹೇಳುತ್ತಿದ್ದರೂ ಗ್ಯಾಸ್ ಸಿಲಿಂಡರ್ (LPG cylinder) ಸಿಗುವುದು ತಡವಾಗುತ್ತಿರುವುದು ಹೌದು. ಜನರೂ ಕೂಡ ಎಂದಿಗಿಂತ ಹೆಚ್ಚು ಬೇಗ ಎಲ್​ಪಿಜಿ ಗ್ಯಾಸ್ ಬುಕಿಂಗ್ ಮಾಡುತ್ತಿರುವುದೂ ಹೌದು. ಇದೇ ವೇಳೆ, ಎಲ್​ಪಿಜಿ ಪೂರೈಕೆ ಮತ್ತು ವಿತರಣೆ ನಿಯಂತ್ರಣ ಆದೇಶದಲ್ಲಿ (LPG supply and distribution order) ಸರ್ಕಾರ ಬದಲಾವಣೆ ಮಾಡಿದೆ. ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ (PNG- Piped Natural Gas) ಸೌಲಭ್ಯ ಹೊಂದಿರುವ ಜನರಿಗೆ ಎಲ್​ಪಿಜಿ…

Read More

ಇಂತಹ ಸ್ಥಿತಿ ಯಾವ ಹೆತ್ತವರಿಗೂ ಬರಬಾರದು: ಪತಿಯ ಶವದೊಂದಿಗೇ 10 ದಿನ ಕಳೆದ ಪತ್ನಿ! ಮಕ್ಕಳಿದ್ದೂ ಅನಾಥರಾದ ಪೋಷಕರು

ಚಿಕ್ಕಮಗಳೂರು, ಏ.9: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಮನ ಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. 77 ವರ್ಷದ ಸಿರಿಲ್ ಮೋನಿಸ್ ಎಂಬುವವರು ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಆದರೆ, ಅವರ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ, ಪತಿ ಸಾವನ್ನಪ್ಪಿರುವುದು ಅವರಿಗೆ ತಿಳಿದಿರಲೇ ಇಲ್ಲ. ಸುಮಾರು 10 ದಿನಗಳ ಕಾಲ ಅವರು ಕೊಳೆತು ಹುಳ ಹಿಡಿದಿದ್ದ ಪತಿಯ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾರೆ. ಮನೆಯಿಂದ ವಿಪರೀತ ದುರ್ವಾಸನೆ ಬಂದಾಗ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ…

Read More

ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ

ಯಾದಗಿರಿ, ಮಾರ್ಚ್​​ 11: ಜಿಲ್ಲೆಯ ಭೂಗರ್ಭದಲ್ಲಿ ಖನಿಜ ನಿಕ್ಷೇಪಗಳಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯ ಆರಂಭವಾಗಿದೆ. ಚಿನ್ನ ಸೇರಿದಂತೆ ವಿವಿಧ ಖನಿಜ ನಿಕ್ಷೇಪಗಳ ಪತ್ತೆಗಾಗಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಇಂದಿನಿಂದ ಜಿಲ್ಲೆಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಈ ಸಮೀಕ್ಷೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಹೆಲಿಕಾಪ್ಟರ್ ಮೂಲಕ ಆಕಾಶದಿಂದಲೇ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರು ಮತ್ತು ಎಲ್ಹೇರಿ ಭಾಗಗಳಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಯುತ್ತಿದೆ. ಆಕಾಶದಲ್ಲಿ ನಿರಂತರವಾಗಿ ಹೆಲಿಕಾಪ್ಟರ್ ಹಾರುತ್ತಿರುವುದನ್ನು ಕಂಡು ಸ್ಥಳೀಯರು…

Read More

ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವೊಂದು ಕಡೆ ಹೀಗೆಲ್ಲ ಮಾಡ್ತಾರೆ ನೋಡಿ! – Kannada News | Gadag Poultry Farm Reality Check: Unhygienic Conditions Raise Health Concerns

ಗದಗ, ಡಿಸೆಂಬರ್ 26: ಗದಗ ಜಿಲ್ಲೆಯ ಉಣಚಗೆರೆ ಗ್ರಾಮದಲ್ಲಿರುವ ಕೋಳಿ ಫಾರಂ ಅತಿಯಾದ ಗಲೀಜಿನಿಂದ ಕೂಡಿದ್ದು, ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಈ ಕೋಳಿ ಫಾರಂ ಅನೇಕ ವರ್ಷಗಳಿಂದ ಇದೇ ರೀತಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ‘ಟಿವಿ9’ ಗ್ರೌಂಡ್ ರಿಪೋರ್ಟ್​​ನಲ್ಲಿ ತಿಳಿದುಬಂದಿದೆ. ಕೋಳಿಗಳಿಗೆ ಕೊಳಕು ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ ಮತ್ತು ಫಾರಂ ಪರಿಸರವು ತಿಪ್ಪೆಗುಂಡಿಗಿಂತಲೂ ಗಲೀಜಾಗಿದೆ. ಮಾರುಕಟ್ಟೆಗೆ ಸರಬರಾಜಾಗುವ ಕಳಪೆ ಮೊಟ್ಟೆಗಳು ಮತ್ತು ಕೋಳಿಗಳು ಗಜೇಂದ್ರಗಡ ಮತ್ತು ರೋಣ ತಾಲೂಕು ಸೇರಿದಂತೆ ಹಲವೆಡೆ ತಲುಪುತ್ತಿವೆ. ಇದು ಜನರ…

Read More