ಜೈಲಿನೊಳಗೆ ಕುಳಿತು ಬರೋಬ್ಬರಿ ಐದು ವರ್ಷಗಳ ಕಾಲ ಸುರಂಗ ತೋಡಿದ ಕೈದಿ, ಕೊನೆಗೆ ಹೋಗಿದ್ದೆಲ್ಲಿಗೆ?
ಬ್ರೆಜಿಲ್, ಮಾರ್ಚ್ 13: ಕೈದಿ(Prisoner)ಗಳು ಹೇಗಾದರೂ ಮಾಡಿ ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ಹಲವು ಸಾಹಸಗಳನ್ನು ಮಾಡುತ್ತಾರೆ. ಅದರಲ್ಲಿ ಇದು ಕೂಡ ಒಂದು. ಕೆಲವರು ಜೈಲಿನ ಗೋಡೆ ಹತ್ತಿ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಇನ್ನೂ ಕೆಲವರು ಆರೋಗ್ಯ ಸರಿಯಿಲ್ಲ ಎನ್ನುವ ನೆಪವೊಡ್ಡಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ತಪ್ಪಿಸಿಕೊಳ್ಳುವವರಿದ್ದಾರೆ. ಕೈದಿಯೊಬ್ಬ ಬರೋಬ್ಬರಿ ಐದು ವರ್ಷಗಳ ಕಾಲ ಸುರಂಗ ತೋಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಪ್ರಯತ್ನವೇನೋ ಚೆನ್ನಾಗಿತ್ತು ಆದರೆ ಆ ಸುರಂಗ ಹೋಗಿದ್ದೆಲ್ಲಿಗೆ ಗೊತ್ತಾ, ಭದ್ರತಾ ಸಿಬ್ಬಂದಿ ಕೋಣೆಗೆ. ಜೈಲಿನಿಂದ ತಪ್ಪಿಸಿಕೊಳ್ಳುವ…