Ugadi 2026: ಯುಗಾದಿ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ಆರೋಗ್ಯಕರ, ರುಚಿಕರ ಕಾಯಿ ಹೋಳಿಗೆ
ನಾಡಿನೆಲ್ಲೆಡೆ ಯುಗಾದಿ (Ugadi) ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬ ಹಿಂದೂಗಳ ಪಾಲಿನ ವರ್ಷದ ಮೊದಲ ಹಬ್ಬ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಮನೆಯನ್ನು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಿ, ಪ್ರತಿಯೊಬ್ಬರೂ ಬೇವು ಬೆಲ್ಲವನ್ನು ಹಂಚುತ್ತಾರೆ. ಬೇವು ಬೆಲ್ಲದ ಜೊತೆ ರುಚಿ ರುಚಿಯಾದ ಬಗೆಬಗೆ ಅಡುಗೆಗಳನ್ನೂ ಮಾಡಲಾಗುತ್ತದೆ. ಅದರಲ್ಲೂ ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಇರಲೇಬೇಕು. ಸಾಮಾನ್ಯವಾಗಿ ಒಬ್ಬಟ್ಟನ್ನು ಮೈದಾ ಹಿಟ್ಟು ಬಳಸಿ…