ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್ಐಆರ್ ದಾಖಲು – Kannada News | Case against Toxic movie actor Yash for Birthday banner in Bengaluru
ರಾಕಿಂಗ್ ಸ್ಟಾರ್ ಯಶ್ (Yash) ಅವರು ಜನವರಿ 8ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಗಾಲ್ಫ್ ಕ್ಲಬ್ ರಸ್ತೆ ಬಳಿಯಿರುವ ಮನೆ ಎದುರು ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ಜಿಬಿಎ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅವರು ದೂರು ನೀಡಿದ್ದರು. ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿ ಕೇಸ್ ಹಾಕಲಾಗಿದೆ. ಅದರ ಅನ್ವಯ ಕಾಯ್ದೆ 1951 ಮತ್ತು 1981ರಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಯಶ್ ಹೆಸರು ಉಲ್ಲೇಖಿಸಿ ಜಿಎಸ್ ಕ್ರಿಯೇಷನ್ಸ್ ಮತ್ತು ವೇಣು ಗ್ರೂಪ್ಸ್ ವಿರುದ್ಧ…