Headlines

ರಾತ್ರಿ ಮಲಗುವ ಮುನ್ನ ಒಂದು ಸ್ಪೂನ್‌ ಜೇನುತುಪ್ಪ ಸೇವಿಸುದರಿಂದ ಲಭಿಸುವ ಲಾಭಗಳೇನು? – Kannada News | What are the benefits of consuming honey before going to bed at night?

ಚಳಿಗಾಲದ (winter) ಶೀತ ವಾತಾವರಣದಲ್ಲಿ ತ್ವಚೆ ಸಂಬಂಧಿ ಸಮಸ್ಯೆಗಳ ಜೊತೆಗೆ  ಶೀತ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೀಗಾಗಿ ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನೇಕರು ಆರೋಗ್ಯಕರ ಕಷಾಯ, ಆಹಾರಗಳನ್ನು ಸೇವನೆ ಮಾಡುತ್ತಾರೆ. ಇದು ಮಾತ್ರವಲ್ಲದೆ ಚಳಿಗಾಲದಲ್ಲಿ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವನೆ ಮಾಡಬಹುದು. ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಜೇನುತುಪ್ಪವನ್ನು…

Read More

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಅರಳಿದ ಕಮಲ; ಬಿಜೆಪಿಯ ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ-ಅಮಿತ್ ಶಾ ಜೋಡಿ – Kannada News | PM Modis Guarantee and Amit Shahs political strategy changed the game in West Bengal Assembly Elections

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಬಿಜೆಪಿ ಜಯಭೇರಿ ಬಾರಿಸಿದೆ. ಪ್ರಧಾನಿ ಮೋದಿಯವರ (PM Modi) ಗ್ಯಾರಂಟಿ ಮತ್ತು ಅಮಿತ್ ಶಾ (Amit Shah) ಅವರ ಚುನಾವಣಾ ತಂತ್ರದಿಂದಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪಕ್ಷವು ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತವನ್ನು ಉರುಳಿಸಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ಸ್ಥಾಪಿಸಿದೆ. ಸಾರ್ವಜನಿಕ ಕಲ್ಯಾಣ ಯೋಜನೆಗಳು, ಒಳನುಸುಳುವಿಕೆ ವಿರೋಧಿ ನಿಲುವು ಮತ್ತು ಬಲವಾದ ಬೂತ್ ನಿರ್ವಹಣೆಯು…

Read More

IPL 2026: ಆರ್​ಸಿಬಿ ವೇಗಿ ರಸಿಕ್ ಸಲಾಂಗೆ 2 ವರ್ಷ ನಿಷೇಧ ಹೇರಿದ್ದ ಬಿಸಿಸಿಐ..! – Kannada News | Rasikh Salam Dar’s IPL 2026 Brilliance: RCB’s Star Bowler Overcomes Age Fraud Ban

ಹಾಲಿ ಚಾಂಪಿಯನ್ ಆರ್​ಸಿಬಿ (RCB) 2026 ರ ಐಪಿಎಲ್​ನಲ್ಲೂ (IPL 2026) ತನ್ನ ಅಮೋಘ ಪ್ರದರ್ಶನವನ್ನು ಮುಂದುವರೆಸಿದೆ. ತಂಡದ ಈ ಗೆಲುವಿನ ಓಟಕ್ಕೆ ಸಾಂಘಿಕ ಪ್ರದರ್ಶನವೇ ಪ್ರಮುಖ ಕಾರಣವಾಗಿದೆ. ಅದರಲ್ಲೂ ಭಾರತದ ಯುವ ವೇಗಿ ರಸಿಕ್ ಸಲಾಂ ದಾರ್ (Rasikh Salam Dar) ಬೌಲಿಂಗ್ ವಿಭಾಗವನ್ನು ಕೂಡಿಕೊಂಡ ಬಳಿಕ ತಂಡ ಮತ್ತಷ್ಟು ಸಮತೋಲಿತವಾಗಿ ಕಾಣಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಈ ವೇಗದ ಬೌಲರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ, 4 ಓವರ್‌ಗಳಲ್ಲಿ ಕೇವಲ…

Read More

Video: ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ – Kannada News | Bilaspur: E Rickshaw Driver Thrown Onto Car Bonnet After Collision

ರಾಂಪುರ, ಜನವರಿ 30: ಜೀಪ್ ಚಾಲಕನೊಬ್ಬ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಬಾನೆಟ್ ಮೇಲೆ ಚಾಲಕನನ್ನು ಹೊತ್ತೊಯ್ದಿರುವ ಘಟನೆ ರಾಂಪುರದ ಬಿಲಾಸ್ಪುರದ ಹೆದ್ದಾರಿಯಲ್ಲಿ ನಡೆದಿದೆ. ರಾಂಪುರದ ಬಿಲಾಸ್ಪುರದ ಹೆದ್ದಾರಿಯಲ್ಲಿ ಜೀಪ್ ಚಾಲಕನೊಬ್ಬ ಎದುರಿನಿಂದ ಬರುತ್ತಿದ್ದ ಇ-ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಶಬ್ಬು ಗಾಯಗೊಂಡಿದ್ದು, ಅವರ ಮೂಗಿನಿಂದ ರಕ್ತಸ್ರಾವ ಆಗುತ್ತಿತ್ತು. ಡಿಕ್ಕಿಯ ನಂತರ, ಜೀಪ್ ಚಾಲಕ ಮನ್ಪ್ರೀತ್ ಎಂದು ಗುರುತಿಸಲ್ಪಟ್ಟಿದ್ದು, ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ, ಆದರೆ ಗಾಯಗೊಂಡ ಚಾಲಕ ಅವನನ್ನು ತಡೆಯಲು ವಾಹನದ ಮುಂದೆ…

Read More

ಐಪಿಎಲ್ ಟಿಕೆಟ್ ಬ್ಲಾಕ್ ದಂಧೆಗೆ ಪೊಲೀಸರ ಬ್ರೇಕ್: 24 ಮಂದಿ ಅರೆಸ್ಟ್, 17 ಕೇಸ್ ದಾಖಲು! – Kannada News | IPL 2026: Bengaluru Police Crack Down on Ticket Black Marketing; 24 Arrested and 37 Tickets Seized

ಬೆಂಗಳೂರು, ಏಪ್ರಿಲ್ 28: ಐಪಿಎಲ್ ಪಂದ್ಯಾವಳಿಗಳ ಸಂದರ್ಭದಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಬ್ಲಾಕ್ ಮಾರ್ಕೆಟ್ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ, ಪೊಲೀಸರು 17 ಪ್ರಕರಣಗಳನ್ನು ದಾಖಲಿಸಿದ್ದು, ಈ ಸಂಬಂಧ 24 ಮಂದಿಯನ್ನು ಬಂಧಿಸಿದ್ದಾರೆ. ಇವರಿಂದ 37 ಐಪಿಎಲ್ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ಪ್ರಕರಣಗಳು ದಾಖಲಾಗಿದ್ದರೆ, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕ್ರಿಕೆಟ್ ಪ್ರೇಮಿಗಳ…

Read More

ಪ್ರಿಯಕರನಿಂದ ವಿಧವೆ ಹತ್ಯೆ; ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿ ಬಯಲು – Kannada News | Warangal Widow Killed by Lover Shocking Facts Revealed in Police Probe

ವಾರಂಗಲ್, ಮೇ 26: ವಾರಂಗಲ್ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ವಿಧವೆ ಮಹಿಳೆಯ ಕೊಲೆಯ ರಹಸ್ಯ (Crime News) ಕೊನೆಗೂ ಬಯಲಾಗಿದೆ. ವಿವಾಹೇತರ ಸಂಬಂಧದಿಂದಾಗಿ ಆಕೆಯ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಆಕೆಯ ಜೊತೆ ವಾಸಿಸುತ್ತಿದ್ದ ಆಕೆಯ ಪ್ರಿಯಕರ ಆಕೆ ತನ್ನನ್ನು ಬಿಟ್ಟು ಬೇರೆ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಆತನನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ. ಗ್ರಾಮದ ಹೊರವಲಯದಲ್ಲಿರುವ ಎಸ್‌ಆರ್‌ಎಸ್‌ಪಿ ಕಾಲುವೆಯಲ್ಲಿ ಆಕೆಯ ಕತ್ತನ್ನು ಚಾಕುವಿನಿಂದ ಸೀಳಿ…

Read More

ಆತ ಬಿಟ್ರೂ ಆಕೆ ಬಿಡ್ಲಿಲ್ಲ: ವ್ಯಕ್ತಿಯನ್ನು ಬಲಿ ಪಡೆಯಿತಾ ಮಹಿಳೆಯ ಅಕ್ರಮ ಸಂಬಂಧ? – Kannada News | A Married Man Commits Suicide For illicit affair Woman blackmail In Chikkaballapur

ಚಿಕ್ಕಬಳ್ಳಾಪುರ, (ಡಿಸೆಂಬರ್ 27): ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ  (Suicide) ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ. ಬಾಲಾಜಿ ಸಿಂಗ್ ಗೆ ಮದುವೆಯಾಗಿ 8 ವರ್ಷ ಆಗಿದ್ದು, ಆರು ವರ್ಷದ ಮಗಳು ಇದ್ದಾಳೆ. ಆರ್ಥಿಕವಾಗಿ ಚನ್ನಾಗಿದ್ದ ಬಾಲಾಜಿ ಸಿಂಗ್, ತನ್ನದೆ ಕಾರುಗಳನ್ನು ಬಾಡಿಗೆಗೆ ಬಿಟ್ಟು ಅದರಿಂದ ಬರುವ ಹಣದಲ್ಲಿ ಪತ್ನಿ ಮಕ್ಕಳ ಜೊತೆ ಚನ್ನಾಗಿದ್ದ, ಆದ್ರೆ…

Read More

ಬೆಂಗಳೂರಿಗರೇ ಗಮನಿಸಿ: ಫೆ.4 ರಿಂದ 9 ರವರೆಗೆ ಈ ಪ್ರದೇಶಗಳಲ್ಲಿ ಪ್ರತಿದಿನ 4 ಗಂಟೆಗಳ ಕಾಲ ವಿದ್ಯುತ್ ಕಡಿತ – Kannada News | Bangalore Power Outage: BESCOM announces 4 hour daily cuts in Hebbal, North Bengaluru

ಬೆಂಗಳೂರು, ಫೆ.4: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಬೆಂಗಳೂರಿನ ಜನರು ಫೆ.4 ಅಂದರೆ ಇಂದಿನಿಂದ ಫೆ.9ರವರೆಗೆ ವಿದ್ಯುತ್​​ ಕಡಿತ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಫೆಬ್ರವರಿ 4 ರಿಂದ 9 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಪ್ರತಿದಿನ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳಲಿದ್ದು, ನಗರದ ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ಹೆಬ್ಬಾಳ ಮತ್ತು ಉತ್ತರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಸಮಸ್ಯೆ ಉಂಟಾಗಲಿದೆ. ವರದಿಯ ಪ್ರಕಾರ, ನಗರದ ವಿದ್ಯುತ್ ಮೂಲಸೌಕರ್ಯವನ್ನು ಹೆಚ್ಚಿಸಲು ಈ ಕ್ರಮ ಅಗತ್ಯವಾಗಿದೆ…

Read More

ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗೆ ಮದುವೆ ಆದರು. ಈ ವಿವಾಹದ ಬಳಿಕ ಅವರು ವಿವಿಧ ರೀತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗ ಮದುವೆ ಆದ ಬಳಿಕ ರಶ್ಮಿಕಾ ಮಂದಣ್ಣಗೆ ಗುಡ್ ನ್ಯೂಸ್ ಸಿಕ್ಕಿದೆ. ತೆಲಂಗಾಣ ಸರ್ಕಾರ ‘2025ರ ಗದ್ದರ್ ಫಿಲ್ಮ್ ಅವಾರ್ಡ್’ ಸಿಕ್ಕಿದೆ. ‘ಗರ್ಲ್​​ಫ್ರೆಂಡ್’ ಚಿತ್ರದ ನಟನೆಗೆ ಈ ಅವಾರ್ಡ್ ಸಿಕ್ಕಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26ರಂದು ಮದುವೆ ಆದರು. ಉದಯಪುರದಲ್ಲಿ ಈ ವಿವಾಹ ನಡೆಯಿತು….

Read More

ಗದಗದಲ್ಲಿ ಮುಂದುವರೆದ ಹಿಂದೂ ದೇವರ ಮೇಲಿನ ಅಟ್ಟಹಾಸ: 2 ಗ್ರಾಮಗಳಲ್ಲಿ ಮೂರ್ತಿಗಳು ಧ್ವಂಸ – Kannada News | Miscreants Targets Hindu Temples In Gadag District, two Village Gods destroyed

ಗದಗ, (ಫೆಬ್ರವರಿ 19): ಜಿಲ್ಲೆಯಲ್ಲಿ ಹಿಂದೂ ದೇವರಗಳ (Hindu God) ಮೇಲಿನ ದಾಳಿ ಮುಂದುವರೆದಿದೆ. ಮೊನ್ನೇ ಶಿವರಾತ್ರಿ ಸಂಭ್ರಮದ ಮಧ್ಯೆ ದುಷ್ಕರ್ಮಿಗಳು ಶಿವಲಿಂಗ, ಅದರ ಪಾಣಿಪೀಠ ಮತ್ತು ನಂದಿ ವಿಗ್ರಹವನ್ನು ಭಗ್ನಗೊಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ದೇವರು ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳು ಹಿಂದೂ ದೇವರುಗಳನ್ನು ಟಾರ್ಗೆಟ್ ಮಾಡಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಲ್ಲಿಕಾರ್ಜುನಪುರದ ಗಾಳಿ ಬಸವೇಶ್ವರ ದೇವಸ್ಥಾನ ಶಿವಲಿಂಗ, ಪಾಣಿಪೀಠ…

Read More