Headlines

ರಷ್ಯನ್ ತೈಲ, ಕಲ್ಲಿದ್ದಲು ಖರೀದಿ: ಭಾರತವನ್ನು ಹಿಂದಿಕ್ಕಿದ ಟರ್ಕಿ – Kannada News | Russian fuel exports, India’s share come down in 2025 December, as Türkiye replaces for 2nd place

ನವದೆಹಲಿ, ಜನವರಿ 14: ಭಾರತವು ರಷ್ಯಾದಿಂದ ತೈಲ ಪಡೆಯುತ್ತಿರುವುದು (Russian Oil) ಡಿಸೆಂಬರ್​ನಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. ನವೆಂಬರ್​ಗೆ ಹೋಲಿಸಿದರೆ ರಷ್ಯನ್ ತೈಲ ಖರೀದಿಯಲ್ಲಿ ಶೇ. 29ರಷ್ಟು ಇಳಿಮುಖವಾಗಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಅಂಡ್ ಕ್ಲೀನ್ ಏರ್ (ಸಿಆರ್​ಇಎ) ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಈ ಅಂಕಿಅಂಶಗಳಿವೆ. ಡಿಸೆಂಬರ್ ತಿಂಗಳಲ್ಲಿ ಭಾರತದ ಒಟ್ಟಾರೆ ಕಚ್ಛಾ ತೈಲ (crude oil) ಆಮದು ಹೆಚ್ಚಾದರೂ ರಷ್ಯನ್ ತೈಲ ಆಮದಿನಲ್ಲಿ ಕಡಿಮೆ ಆಗಿರುವುದು ಗಮನಾರ್ಹ. ರಿಲಾಯನ್ಸ್​ನ ಜಾಮ್​ನಗರ್ ರಿಫೈನರಿಯು ಡಿಸೆಂಬರ್…

Read More

Video: ಜರ್ಮನ್‌ನಲ್ಲಿ ಡ್ರೀಮ್‌ ಜಾಬ್‌ ಗಿಟ್ಟಿಸಿಕೊಂಡ ಭಾರತೀಯ ಮಹಿಳೆ ಹೇಳಿದ್ದೇನು ನೋಡಿ – Kannada News | Indian woman gets job abroad despite not knowing German language

ಓದು ಮುಗಿಯುತ್ತಿದ್ದಂತೆ ಹೆಚ್ಚಿನವರು ವಿದೇಶದತ್ತ (foreign) ಹಾರುತ್ತಾರೆ. ಅಲ್ಲೇ ಉದ್ಯೋಗ ಗಿಟ್ಟಿಸಿಕೊಂಡು ಸೆಟ್ಲ್ ಆಗುತ್ತಾರೆ. ಆದರೆ ಇದೀಗ ಭಾರತೀಯ ಮಹಿಳೆ ಸ್ಥಳೀಯ ಭಾಷೆ ತಿಳಿಯದಿದ್ದರೂ ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಯಲ್ಲಿದ್ದಾರೆ. ಜರ್ಮನಿಯಲ್ಲಿ (Germany) ಕೆಲಸ ಗಿಟ್ಟಿಸಿಕೊಂಡ ಬಗ್ಗೆ ಈ ಮಹಿಳೆ ವಿವರಿಸಿದ್ದಾರೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. simran.khokha ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಸಿಮ್ರಾನ್ ಖೋಖಾ ಎಂಬ ಮಹಿಳೆ ಕೆಲಸ ಹೇಗೆ ಸಿಕ್ಕಿತು ಎನ್ನುವುದನ್ನು ವಿವರಿಸಿರುವುದನ್ನು ಕಾಣಬಹುದು. ವಿದೇಶಕ್ಕೆ ತೆರಳಲು ಯೋಜಿಸುತ್ತಿರುವ ಉದ್ಯೋಗಾಕಾಂಕ್ಷಿಗಳಲ್ಲಿ ಕಂಡುಬರುವ…

Read More

ಜ. 21ರಂದು ಟಿವಿ9 ನೆಟ್ವರ್ಕ್​ನ ‘Auto9 Awards 2026’; ನಿತಿನ್ ಗಡ್ಕರಿ ಮುಖ್ಯ ಅತಿಥಿ – Kannada News | Auto9 Awards 2026: Nitin Gadkari to be Chief Guest at TV9 Network’s Biggest Celebration of Automotive Excellence

ನವದೆಹಲಿ, ಜನವರಿ 19: ಇಲ್ಲಿಯ ತಾಜ್ ಪ್ಯಾಲೇಸ್​ನಲ್ಲಿ ಟಿವಿ9 ನೆಟ್ವರ್ಕ್ ವತಿಯಿಂದ ಬುಧವಾರ (ಜ. 21) ‘Auto9 Awards 2026’ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ಭಾರತದ ವಾಹನೋದ್ಯಮದಲ್ಲಿನ (Automotive) ಪ್ರಗತಿ, ಶ್ರೇಷ್ಠತೆಯನ್ನು ಆಚರಿಸಲು ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮುಖ್ಯ ಅತಿಥಿಯಾಗಿದ್ದಾರೆ. ಆಟೊ9 ಅಡಾರ್ಡ್ಸ್ ಬಗ್ಗೆ ಟಿವಿ9 ನೆಟ್ವರ್ಕ್ ಕೈಗೊಂಡಿರುವ ಹಲವು ಉಪಕ್ರಮಗಳಲ್ಲಿ ಆಟೊ9 ಅವಾರ್ಡ್ಸ್ ಒಂದು. ಭಾರತದ ವಾಹನೋದ್ಯಮಕ್ಕೆ ಕೊಡುಗೆ ನೀಡಿರುವ ವಿಶೇಷ…

Read More

‘ಧುರಂಧರ್ 3’ ತೆರೆಗೆ ತರೋಕೆ ಪ್ಲ್ಯಾನ್; ಘೋಷಣೆ ಯಾವಾಗ? – Kannada News | Dhurandhar 3 Confirmed? Ranveer Singh Sequel Teased by Jio Studios

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2: ದಿ ರಿವೇಂಜ್’ ಚಿತ್ರಗಳು ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ. ‘ಧುರಂಧರ್ 2’ ಅಬ್ಬರ ಇನ್ನೂ ಮುಂದುವರಿದಿದೆ. ಹೀಗಿರುವಾಗಲೇ ಈ ಫ್ರಾಂಚೈಸಿಯಿಂದ ಮತ್ತೊಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಈ ಹಿಂದೆ ‘ಧುರಂಧರ್ 2’ ಬಂದಾಗ ಈ ಕಥೆ ಇಲ್ಲಿಗೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ, ಈಗ ಚಿತ್ರತಂಡ ನೀಡಿರುವ ಸುಳಿವು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಜಿಯೋ ಸ್ಟುಡಿಯೋಸ್‌ನ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ…

Read More

6,6,6,6,6,6,6.. 23 ಎಸೆತಗಳಲ್ಲಿ 65 ರನ್ ಚಚ್ಚಿದ ಶಿವಂ ದುಬೆ

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿರುವ 215 ರನ್​ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಆಲ್‌ರೌಂಡರ್‌ ಶಿವಂ ದುಬೆ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ತಂಡವು 82 ರನ್​ಗಳಿಗೆ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ಶಿವಂ ದುಬೆ ಕಿವೀಸ್ ಬೌಲರ್​ಗಳ ಎದುರು ಸಿಕ್ಸರ್​ ಹಾಗೂ ಬೌಂಡರಿಗಳ ಮಳೆಗರೆದರು. ಹಾರ್ದಿಕ್ ಪಾಂಡ್ಯ ಔಟಾದ ಬಳಿಕ ಕ್ರೀಸ್​ಗೆ ಬಂದ ದುಬೆ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್​ಗಟ್ಟುವ ಮೂಲಕ…

Read More

ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ – Kannada News | Child Protection Lapses: Karwar Children’s Home Fails Girl, Exposing Systemic Failures

ಕಾರವಾರ, ಫೆ.7: ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯೊಂದು ನಡೆದಿದೆ. ಘೋರ ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ನೊಂದಿದ್ದ ಬಾಲಕಿಗೆ ರಕ್ಷಣೆ ಸಿಗಬೇಕಾದ ಜಾಗದಲ್ಲಿಯೇ ಇಂತಹ ನಿರ್ಧಾರ ಮಾಡಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಬಾಲಕಿ ಮೂಲತಃ ಹಳಿಯಾಳ ತಾಲೂಕಿನವಳು. ಕಳೆದ ಆಗಸ್ಟ್‌ನಲ್ಲಿ ಪೋಕ್ಸೋ ಪ್ರಕರಣವೊಂದರ ಅಡಿಯಲ್ಲಿ ಈಕೆಯನ್ನು ರಕ್ಷಿಸಿ ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು. ಈಕೆ ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಆದರೆ, ಮಾನಸಿಕ…

Read More

Video: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ – Kannada News | A little boy who sent his mother off to school with a caring word

ಪುಟಾಣಿಗಳೇ (little kids) ಹಾಗೆ, ತುಂಟಾಟ ಮಾಡೋದರಲ್ಲಿ ಎತ್ತಿದ ಕೈ. ಅದಲ್ಲದೇ ಶಾಲೆಗೆ ಹೋಗಲು ವಿಷಯದಲ್ಲಿ ಸ್ವಲ್ಪ ಹಿಂದೇಟು ಹಾಕುತ್ತಾರೆ. ಆದರೆ ಈ ಹೆತ್ತವರು ಪುಲಾಯಿಸಿ ಶಾಲೆಗೆ ಕಳಿಸಿ ಕೊಡುತ್ತಾರೆ. ಆದರೆ ಈ ಪುಟಾಣಿ ಮಾತ್ರ ಶಾಲೆಗೆ (school) ಹೋಗಲ್ಲ ಎಂದು ಹಠ ಮಾಡಿಲ್ಲ. ಶಾಲೆಗೆ ಕಳಿಸಿಕೊಡಲು ಬಂದ ಅಮ್ಮನನ್ನು  ಪುಟಾಣಿಯೊಂದು ಮುದ್ದಾಗಿ ಕಳಿಸಿಕೊಟ್ಟಿದೆ. ಮನೆಗೆ ಹೋಗಿ ನೀನು ಟಿವಿ ನೋಡು ಎನ್ನುವ ಪುಟಾಣಿಯ ಮುದ್ದು ಮಾತು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್…

Read More

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’ – Kannada News | Bigg Boss Kannada Season 12 winner Gilli Nata new movie Survey Number 45

ಕಾಮಿಡಿ ಇಷ್ಟಪಡುವ ಪ್ರೇಕ್ಷಕರಿಗೆ ಗಿಲ್ಲಿ ನಟ ಎಂದರೆ ಸಖತ್ ಇಷ್ಟ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಸ್ಪರ್ಧಿಸಿ ವಿನ್ ಆದ ಬಳಿಕ ಗಿಲ್ಲಿ ನಟ ಅವರ ಖ್ಯಾತಿ ಹೆಚ್ಚಾಯಿತು. ಇದರಿಂದಾಗಿ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಜಾಸ್ತಿ ಆಗಿದೆ. ಗಿಲ್ಲಿ ನಟ (Gilli Nata) ಅವರು ಪಕ್ಕಾ ಹಳ್ಳಿ ಹೈದ. ಅವರ ಆ ಗುಣವನ್ನೇ ಬಿಗ್ ಬಾಸ್ ಆಟದಲ್ಲಿ ಪ್ರೇಕ್ಷಕರು ಇಷ್ಟಪಟ್ಟಿದ್ದರು. ವಿಶೇಷ ಏನೆಂದರೆ, ಈಗ ಗಿಲ್ಲಿ ನಟ ಅವರು…

Read More

ಕೇವಲ 2 ಸಾವಿರದಲ್ಲಿ BJP ಮಾಜಿ ಎಂಎಲ್​​ಸಿಯ 30 ಕೋಟಿ ರೂ ಆಸ್ತಿ ಲಪಟಾಯಿಸಲು ಯತ್ನ – Kannada News | Mysuru land fraud ex mlc siddaraju 30 cr property targeted with fake docs

ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು ಮೈಸೂರು, ಡಿಸೆಂಬರ್​​ 26: ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜುಗೆ (former mlc siddaraju) ಸೇರಿರುವ ಆಸ್ತಿಗೆ (land) ಕನ್ನ ಹಾಕಲು ಖದೀಮರು ಯತ್ನಿಸಿರುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. 30 ಕೋಟಿ‌ ರೂ. ಆಸ್ತಿಯನ್ನು ಕೇವಲ 2 ಸಾವಿರ ರೂ. ಖರ್ಚು ಮಾಡಿ, ನಕಲಿ ದಾಖಲೆ ಸೃಷ್ಟಿಸಿ 30 ಕೋಟಿ ರೂ. ಮೌಲ್ಯದ 22 ನಿವೇಶನಗಳನ್ನು ಬರೆಸಿಕೊಳ್ಳಲು ಯತ್ನಿಸಿರುವಂತಹ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಉಪ ನೋಂದಣಾಧಿಕಾರಿ ಕಚೇರಿಗೆ…

Read More

ಕರ್ನಾಟಕ ಹವಾಮಾನ ವರದಿ: ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​! – Kannada News | Bengaluru temperature: Extreme cold weather Karnataka, yellow alert for 5 districts

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​! ಬೆಂಗಳೂರು, ಡಿಸೆಂಬರ್ 22: ಕಳೆದ ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಶೀತದಲೆ (Weather Forecast) ಅಬ್ಬರಿಸುತ್ತಿದ್ದು, ವಿಶೇಷವಾಗಿ ಉತ್ತರ ಕರ್ನಾಟಕ ಹೆಚ್ಚಿನ ಪ್ರಮಾಣದಲ್ಲಿ ಚಳಿ ಕಂಡಿದೆ. ನಿನ್ನೆ ವಿಜಯಪುರದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಇಂದು ಕಲಬುರಗಿ, ಬೀದರ್ ಸರಿದಂತೆ 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ. ಯಾವ ಜಿಲ್ಲೆಗಳಿಗೆ…

Read More