40 ವಿಕೆಟ್ಗಳು… ಹೊಸ ದಾಖಲೆಗೆ ಸಾಕ್ಷಿಯಾದ ಪಾಕಿಸ್ತಾನ್ vs ವೆಸ್ಟ್ ಇಂಡೀಸ್ ಪಂದ್ಯ – Kannada News | West Indies and Pakistan Script Test History!
ವೆಸ್ಟ್ ಇಂಡೀಸ್‌ನಲ್ಲಿ ಈವರೆಗೆ ಒಟ್ಟು 273 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಆದರೆ, ಈ ಹಿಂದಿನ ಯಾವುದೇ ಪಂದ್ಯದಲ್ಲೂ ದಾಖಲಾಗದಂತಹ ಅಪರೂಪದ ದಾಖಲೆಗೆ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ. ಅದು ಕೂಡ 40 ವಿಕೆಟ್ಗಳ ಕಬಳಿಕೆಯೊಂದಿಗೆ..! ಟ್ರಿನಿಡಾಡ್ನ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಒಟ್ಟು 40 ವಿಕೆಟ್ಗಳು ಉರುಳಿದ್ದವು. ಈ 40 ವಿಕೆಟ್ಗಳನ್ನು ಕಬಳಿಸಿರುವುದು ವೇಗಿಗಳು ಎಂಬುದು ವಿಶೇಷ. ಅಂದರೆ…