ಬಗೆದಷ್ಟು ಬಯಲಾಗ್ತಿದೆ ಪಿಲಿಕುಳದ ಅಕ್ರಮ: ಕಾಳಿಂಗ ಸರ್ಪದ ಹೆಸರಲ್ಲೂ ಭ್ರಷ್ಟಾಚಾರ? – Kannada News | Pilikula Scam Deepens: Corruption Alleged Even in the Name of King Cobra

ಮಂಗಳೂರು, ಫೆಬ್ರವರಿ 19: ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ಗರಂ ಆಗಿತ್ತು. ಆ ಬೆನ್ನಲ್ಲೇ ಕಾಳಿಂಗ ಸರ್ಪದ ಹೆಸರಲ್ಲೂ ಇಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕಾಳಿಂಗ ಸರ್ಪ ಸಂತಾನಾಭಿವೃದ್ಧಿ ಕೇಂದ್ರ ತೆರೆದು 2 ಕೋಟಿಗೂ ಅಧಿಕ ಅನುದಾನ ಪಡೆದಿದ್ದ ಇಲ್ಲಿಯ ಆಡಳಿತ ಅವುಗಳ ಪಾಲನೆ ಮರೆತಿದೆ. ಹೀಗಾಗಿ ಸರಿಯಾಗಿ ಆಹಾರ, ಆರೈಕೆ ಸಿಗದೆ ಅವು ಸಾವನ್ನಪ್ಪಿವೆ ಎಂದು ದೂರಲಾಗಿದೆ. 2022ರ ಜುಲೈನಲ್ಲಿ ಮೊಟ್ಟೆಯೊಡೆದು 38…

Read More

‘ಸಿದ್ದರಾಮಯ್ಯ ಈ ದೇಶ ಕಂಡ ಅತ್ಯಂತ ಗೌರವಾನ್ವಿತ ಸಿಎಂ’: ಹಿರಿಯ ನಟ ಸುಂದರ್ ರಾಜ್ – Kannada News | Siddaramaiah was the best CM in the Country says actor Sundar Raj

‘ಕನಕರಾಜ’ ಸಿನಿಮಾದಲ್ಲಿ ಅನೂಪ್ ರೇವಣ್ಣ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಸುಂದರ್ ರಾಜ್ (Sundar Raj) ಕೂಡ ಅಭಿನಯಿಸಿದ್ದಾರೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಚಿತ್ರದ ಶೀರ್ಷಿಕೆಗೆ ‘ಫ್ಯಾನ್ ಆಫ್ ಸಿಎಂ’ ಎಂಬ ಟ್ಯಾಗ್ ಲೈನ್ ಇದೆ. ಆ ಬಗ್ಗೆ ಸುಂದರ್ ರಾಜ್ ವಿವರಿಸಿದರು. ‘ಹೆಚ್​.ಎಂ. ರೇವಣ್ಣ ಅವರು ರಾಜಕೀಯ ವ್ಯಕ್ತಿ ಆಗಿದ್ದರೂ ಕೂಡ ರಾಜಕಾರಣವನ್ನು ಪಕ್ಕಕ್ಕೆ ಇಟ್ಟು ಸಿನಿಮಾರಂಗದ ಬಗ್ಗೆ ಅವರು ತೋರುವ ಒಲವನ್ನು ನಾನು ಅತ್ಯಂತ ಗೌರವದಿಂದ ನೋಡುತ್ತೇನೆ. ಕನಕರಾಜ…

Read More

ದಯವಿಟ್ಟು ಆ ವಿಡಿಯೋ ಹಾಕಬೇಡಿ: ಜನರಿಗೆ ‘ಕೆಡಿ’ ನಿರ್ದೇಶಕ ಪ್ರೇಮ್ ಮನವಿ – Kannada News | KD Movie director Jogi Prem requests not to share any video online

ನಿರ್ದೇಶಕ ಜೋಗಿ ಪ್ರೇಮ್ ಅವರು ‘ಕೆಡಿ’ ಸಿನಿಮಾದ (KD Movie) ಸೆಲೆಬ್ರಿಟಿ ಶೋ ಬಳಿಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಿನಿಮಾ ನೋಡಿದ ಅನೇಕ ಪ್ರೇಕ್ಷಕರು ಚಿತ್ರದ ಕೆಲವು ಮುಖ್ಯ ದೃಶ್ಯಗಳನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಅದರಿಂದ ಸಿನಿಮಾದ ಸಸ್ಪೆನ್ಸ್ ಹಾಳಾಗುತ್ತದೆ. ಆ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ‘ಆನ್​ಲೈನ್​​ನಲ್ಲಿ ಕೆಲವರು ವಿಡಿಯೋ ಹಾಕುತ್ತಿದ್ದೀರಿ. ಕೈ ಮುಗಿದು ಬೇಡುತ್ತೇನೆ, ದಯವಿಟ್ಟು ಹಾಗೆ ಮಾಡಬೇಕು’ ಎಂದು ಪ್ರೇಮ್ (Jogi Prem) ಅವರು ಮನವು ಮಾಡಿಕೊಂಡಿದ್ದಾರೆ. ‘ನನಗೆ ಗೊತ್ತು,…

Read More

SSLC ಫಲಿತಾಂಶದ ವೇಳೆ ಮೌಲ್ಯಮಾಪಕರಿಂದ ಭಾರಿ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ! – Kannada News | SSLC Mark Entry Error: Student Ramadatta Sharma Receives 48 Instead of 92 Marks

ಚಿಕ್ಕಮಗಳೂರು, ಏಪ್ರಿಲ್​​ 27: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮೌಲ್ಯಮಾಪಕರಿಂದ ಆಗಿರುವ ದೊಡ್ಡ ಯಡವಟ್ಟೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ಶೃಂಗೇರಿಯ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಮದತ್ತ ಶರ್ಮಾ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ರಾಮದತ್ತ ಶರ್ಮ ಅವರಿಗೆ ಬರಬೇಕಿದ್ದ ಅಂಕ 92 ಆಗಿತ್ತು. ಆದರೆ, ಫಲಿತಾಂಶದಲ್ಲಿ ಕೇವಲ 48 ಅಂಕಗಳು ನಮೂದಾಗಿವೆ. ಇಂಟರ್ನಲ್‌ನಲ್ಲಿ 20 ಅಂಕಗಳು ಹಾಗೂ ಉತ್ತರ ಪತ್ರಿಕೆಯ ಫೋಟೋಕಾಪಿಯಲ್ಲಿ 72 ಅಂಕಗಳು (80ಕ್ಕೆ) ಸ್ಪಷ್ಟವಾಗಿ ದಾಖಲಾಗಿದ್ದು, ಒಟ್ಟು 92 ಅಂಕಗಳು…

Read More

ಮೋದಿ ರಾಜತಾಂತ್ರಿಕತೆ ಯಶಸ್ವಿ; ಬ್ರಿಟನ್ ಜೊತೆಗಿನ ವ್ಯಾಪಾರ ಒಪ್ಪಂದ ಜುಲೈ 15ರಿಂದ ಜಾರಿ – Kannada News | PM Modi’s Multi Alignment Approach Delivers Economic Outcomes India UK Trade Agreement will enter into force from July 15

ನವದೆಹಲಿ, ಜೂನ್ 17: ಪ್ರಧಾನಿ ನರೇಂದ್ರ ಮೋದಿ (PM Modi in France) ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ನಡುವೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ನಡುವಿನ ಬಹುನಿರೀಕ್ಷಿತ ‘ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ’ (CETA) ಮುಂಬರುವ ಜುಲೈ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರೊಂದಿಗೆ ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಶೇ. 99ರಷ್ಟು ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ ಸಿಗಲಿದ್ದು, ಐಟಿ, ಫೈನಾನ್ಸ್…

Read More

Bengaluru Air Quality: ಮಂಗಳೂರಿನಲ್ಲೂ ಕಳಪೆ ಮಟ್ಟಕ್ಕಿಳಿದಿದೆ ವಾಯು ಗುಣಮಟ್ಟ – Kannada News | Bangalore Air Pollution Crisis: Mangalore’s Air quality dropped more than Bengaluru

ಮಂಗಳೂರಿನಲ್ಲೂ ಕಳಪೆ ಮಟ್ಟಕ್ಕಿಳಿದಿದೆ ವಾಯು ಗುಣಮಟ್ಟ ಬೆಂಗಳೂರು, ಫೆಬ್ರವರಿ 18: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಮಂಗಳೂರಿನ AQI ಇನ್ನಷ್ಟು ಹದಗೆಟ್ಟಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 156ಕ್ಕೆ ತಲುಪಿದೆ. ಅದಕ್ಕಿಂತ…

Read More

Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಬೆಂಗಳೂರು, ಜೂನ್ 12: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ. ಮುಖ್ಯಾಂಶಗಳು ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ, ಭಾರಿ ಮಳೆಯ ಮುನ್ಸೂಚನೆ. ಉತ್ತರ ಒಳನಾಡು…

Read More

IND vs ENG ಟಿ20 ಸರಣಿ ಎಷ್ಟು ಗಂಟೆಗೆ ಶುರು? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? – Kannada News | IND vs ENG T20Is: Schedule, Timings and Live Streaming Details

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟಿ20 ಸರಣಿಯು ನಾಳೆಯಿಂದ (ಜುಲೈ 1 ) ಶುರುವಾಗಲಿದೆ. ಇಂಗ್ಲೆಂಡ್​ನಲ್ಲಿ ಜರುಗಲಿರುವ ಐದು ಮ್ಯಾಚ್​ಗಳ ಈ ಸರಣಿಯ ಸಂಪೂರ್ಣ ವೇಳಾಪಟ್ಟಿ, ಪಂದ್ಯ ಆರಂಭವಾಗುವ ಸಮಯ ಮತ್ತು ನೇರ ಪ್ರಸಾರದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ? ಭಾರತದಲ್ಲಿ ಈ ಸರಣಿಯ ಅಧಿಕೃತ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಪಡೆದುಕೊಂಡಿದೆ. ಅದರಂತೆ ಈ ಕೆಳಗಿನ ಚಾನೆಲ್​ಗಳಲ್ಲಿ ಈ ಸರಣಿಯ ಪಂದ್ಯಗಳನ್ನು…

Read More

“ನಿಮ್ಮ ಮಗಳು ಶಿವನ ಪಾದ ಸೇರಿದ್ದಾಳೆ ಬಂದು ನೋಡಿ” ಎಂದ ಅಳಿಯ: ಇದಕ್ಕೆಲ್ಲ ಇವನೇ ಕಾರಣ – Kannada News | Belagavi Womans Death: Husband Accused of Murder Amidst Marital Discord.

ಬೆಳಗಾವಿ, ಫೆ.10: ಜಿಲ್ಲೆಯ ( Belagavi murder allegation) ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ 29 ವರ್ಷದ ಸಕ್ಕುಬಾಯಿ ದಿಡಗಣ್ಣವರ್ ಎಂಬುವವರು ಸಾವನ್ನಪ್ಪಿದ್ದು, ಇದೀಗ ಇದು ಸಹಜ ಸಾವಲ್ಲ, ಕೊಲೆ ಎಂದು ಸಕ್ಕುಬಾಯಿ ಮನೆಯವರು ಆರೋಪಿಸಿದ್ದಾರೆ. ಸಕ್ಕುಬಾಯಿ ಅವರ ಪತಿ ನಾಗಪ್ಪ ದಿಡಗಣ್ಣವರ್ ಅವರೇ ತಮ್ಮ ಪತ್ನಿಯನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಸಕ್ಕುಬಾಯಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ನಾಗಪ್ಪ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ…

Read More

ಸುಖೋಯ್ ಯುದ್ಧವಿಮಾನ ಅಪಘಾತ; ಆಪರೇಷನ್ ಸಿಂಧೂರ್​​ನಲ್ಲಿ ಭಾಗಿಯಾಗಿದ್ದ ಪೈಲಟ್ ಸೇರಿ ಇಬ್ಬರು ಸಾವು

ನವದೆಹಲಿ, ಮಾರ್ಚ್ 6: ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ (Su-30MKI) ಫೈಟರ್ ಜೆಟ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಆ ಯುದ್ಧವಿಮಾನಕ್ಕಾಗಿ ಐಎಎಫ್​ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆ ಯುದ್ಧವಿಮಾನ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಅಪಘಾತಕ್ಕೀಡಾಗಿರುವುದು ದೃಢಪಟ್ಟಿದೆ. ಇಬ್ಬರು ಭಾರತೀಯ ವಾಯುಪಡೆಯ (IAF) ಪೈಲಟ್‌ಗಳಾದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದಾರೆ. ಸುಖೋಯ್ ಯುದ್ಧವಿಮಾನದ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಮೃತಪಟ್ಟಿರುವ…

Read More